LICಯಿಂದ ಡಿಜಿಟಲ್ ಆ್ಯಪ್ 'ಆನಂದ' ಬಿಡುಗಡೆ
ನವದೆಹಲಿ, ನವೆಂಬರ್ 25: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಇದೇ ಮೊದಲ ಬಾರಿಗೆ 'ಆನಂದ' ಹೆಸರಿನ ಮೊದಲ ಡಿಜಿಟಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಜೀವ ವಿಮಾ ಪಾಲಿಸಿಯನ್ನು ಪಡೆಯಲು ಆನ್‌ಬೋರ್ಡಿಂಗ್ ಏಜೆಂಟರಿಗಾಗಿ ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ.
ಎಲ್‌ಐಸಿ ಅಧ್ಯಕ್ಷ ಎಂ.ಆರ್. ಕುಮಾರ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಈ ಆ್ಪ್ ಅನ್ನು ಬಿಡುಗಡೆಗೊಳಿಸಿದರು. ವ್ಯವಸ್ಥಾಪಕ ನಿರ್ದೇಶಕರಾದ ಟಿ.ಸಿ ಸುಶೀಲ್ ಕುಮಾರ್, ಮುಕೇಶ್ ಕುಮಾರ್ ಗುಪ್ತಾ, ರಾಜ್ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
"ಏಜೆಂಟ್ ಅಥವಾ ಮಧ್ಯವರ್ತಿಯ ಸಹಾಯದಿಂದ ಕಾಗದರಹಿತ ಮಾಡ್ಯೂಲ್ ಮೂಲಕ ಜೀವ ವಿಮಾ ಪಾಲಿಸಿಯನ್ನು ಪಡೆಯಲು ಆನ್‌ಬೋರ್ಡಿಂಗ್ ಪ್ರಕ್ರಿಯೆಗೆ ಡಿಜಿಟಲ್ ಅಪ್ಲಿಕೇಶನ್ ಒಂದು ಸಾಧನವಾಗಿದೆ" ಎಂದು ಎಲ್ಐಸಿ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಜೀವ ವಿಮಾ ಉದ್ದಿಮೆಯಲ್ಲಿ ಇಂತಹ ಒಂದು ವ್ಯವಸ್ಥೆ ಇದೇ ಮೊದಲು ಎಂದಿದೆ.

ದೇಶದ ಅತಿದೊಡ್ಡ ವಿಮಾ ಕಂಪನಿ ಎಲ್‌ಐಸಿ ಐಪಿಒ ತರುವ ಪ್ರಕ್ರಿಯೆ ಕೂಡ ಚುರುಕುಗೊಂಡಿದೆ. ಭಾರತದ ಬಹುನಿರೀಕ್ಷಿತ ಬ್ಲಾಕ್‌ಬಸ್ಟರ್ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಈ ಬಾರಿ ನಿರೀಕ್ಷೆಗಿಂತ ದೊಡ್ಡದಾಗಿದೆ. ಸರ್ಕಾರಿ ವಿಮೆದಾರರಲ್ಲಿ 25 ಪ್ರತಿಶತದಷ್ಟು ಪಾಲನ್ನು ಮಾರಾಟ ಮಾಡುವ ಪ್ರಸ್ತಾಪವಿದೆ.












Click it and Unblock the Notifications