ಇದನ್ನು 100 ಮಿಲಿಯನ್ ಜನ ವೀಕ್ಷಣೆ ಮಾಡಲಿದ್ದಾರೆ!
ಬೆಂಗಳೂರು, ಜನವರಿ, 19: ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನ ಕಲ್ಪಿಸಿಕೊಂಡಿರುವ ಚೀನಾ ಮೂಲದ ಲಿ ಎಕೋ ಭಾರತದ ,ಮಾರುಕಟ್ಟೆಯನ್ನು ಪ್ರವೇಶ ಮಾಡಲಿದೆ. ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್ ನೊಂದಿಗಿನ ಪಾಲುದಾರಿಕೆಯಲ್ಲಿ ಜನವರಿ 20 ರಂದು ಮಾರುಕಟ್ಟೆಗೆ ಕಾಳಿಡಲಿದೆ.
ಜನವರಿ 20 ರಂದು ಗುರ್ ಗಾವ್ ಮೂಲಕ ಭಾರತದ ಮಾರುಕಟ್ಟೆ ಪ್ರವೇಶ ಮಾಡಲಿದೆ. ಭಾನುವಾರ ಮಧ್ಯಾಹ್ನ 2.30ಕ್ಕೆ ಲಾಂಚ್ ಕಾರ್ಯಕ್ರಮ ನಡೆಯಲಿದೆ. 100 ಮಿಲಿಯನ್ ಗೂ ಅಧಿಕ ಜನ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಣೆ ಮಾಡಲಿದ್ದು ಸಾಮಾಜಿಕ ತಾಣದಲ್ಲಿ ಇದೊಂದ ದಾಖಲೆಯನ್ನೇ ನಿರ್ಮಿಸಲಿದೆ.

ಕಳೆದ ಅಕ್ಟೋಬರ್ ನಲ್ಲಿಯೇ ಕಂಪನಿಗೆ 1,500,000 ಫಾಲೋವರ್ಸ್ ಇದ್ದರು. ಇವರಲ್ಲಿ ಶೇ. 95 ರಷ್ಟು ಜನ ಆಕ್ಟೀವ್ ಯೂಸರ್ಸ್ ಎನ್ನುವುದು ವಿಶೇಷ. ಈ ಮೂಲಕ ಭಾರತದ ಮಾರುಕಟ್ಟೆಗೆ ಹೊಸ ಮೊಬೈಲ್ ಕಂಪನಿಯೊಂದರ ಆಗಮನವಾಗುತ್ತಿದೆ.[ಈ ಜಾಕ್ ಪಾಟ್ ಫೋನಿನ ಬಗ್ಗೆ ತಿಳಿದುಕೊಳ್ಳಿ]
ಟ್ವೀಟರ್ ನಲ್ಲಿ ಲಿ ಎಕೊ ಗೆ 80,000 ಫಾಲೋವರ್ಸ್ ಇದ್ದಾರೆ. 100 ಮಿಲಿಯನ್ ಜನರನ್ನು ಆನ್ ಲೈನ್ ಮೂಲಕ ಕಂಪನಿ ಒಂದೇ ಕ್ಷಣದಲ್ಲಿ ತಲುಪಲಿದೆ. 3 ಡಿ ಹೆಲ್ಮೆಟ್, ಬ್ಲೂಟುತ್ ಹೆಡ್ ಫೋನ್, ಸೂಪರ್ ಸೈಕಲ್ ಮೊಬೈಲ್ ನ ವಿಶೇಷ. ಭಾರತೀಯ ಮಾರುಕಟ್ಟೆಯಲ್ಲಿಯೂ ಸಹ ಜನ ಕುತೂಹಲದ ಕಣ್ಣುಗಳಿಂದ ಕಾಯುತ್ತಿದ್ದಾರೆ.
1 day to go. Get ready to hold #LeFuture in your hands! See you tomorrow. @LeEcoIndia pic.twitter.com/ZOMOUVAngE
— LeEco India (@LeEcoIndia) January 19, 2016 











Click it and Unblock the Notifications