ಬೇಸಿಗೆಯಲ್ಲಿ ಗ್ರಾಹಕರಿಗೆ ಮತ್ತೊಂದು ಬಿಸಿ: ಹೆಚ್ಚಲಿದೆ ಎ.ಸಿ ಬೆಲೆ

ನವದೆಹಲಿ, ಮಾರ್ಚ್ 15: ಈ ಬಾರಿ ಬೇಸಿಗೆ ಬಿಸಿ ಜನರಿಗೆ ಮತ್ತಷ್ಟು ತಟ್ಟಲಿದೆ. ಒಂದೆಡೆ ಬೇಸಿಗೆಯಲ್ಲಿ ಬಿಸಿಲಿನ ಝಳ ತೀವ್ರವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದರೆ, ಇನ್ನೊಂದೆಡೆ ಎ.ಸಿ. ಉತ್ಪಾದಕ ಕಂಪೆನಿಗಳು ಬೆಲೆ ಏರಿಕೆಗೆ ಮುಂದಾಗಿವೆ. ಪ್ರಸಕ್ತ ವರ್ಷ ಎರಡಂಕಿಯವರೆಗೆ ಬೆಳವಣಿಗೆಯನ್ನು ಸಾಧಿಸುವ ನಿರೀಕ್ಷೆಯಲ್ಲಿರುವ ಮುಂಚೂಣಿ ಎಸಿ ಉತ್ಪಾದಕರು, ರೆಸಿಡೆನ್ಸಿಯಲ್ ಹವಾ ನಿಯಂತ್ರಕಗಳ ಬೆಲೆಯಲ್ಲಿ ಶೇ 5 ರಿಂದ ಶೇ 8ರವರೆಗೆ ಹೆಚ್ಚಿಸಲು ಯೋಚನೆ ನಡೆಸಿದ್ದಾರೆ.

ವೋಲ್ಟಾಸ್, ಎಲ್‌ಜಿ, ಡೈಕಿನ್, ಪ್ಯಾನಸೋನಿಕ್, ಹಯರ್, ಬ್ಲೂಸ್ಟಾರ್ ಮತ್ತು ಸ್ಯಾಮ್‌ಸಂಗ್ ಮುಂತಾದ ಮುಂಚೂಣಿ ತಯಾರಕರು ಪ್ರಸಕ್ತ ಸಾಲಿನಲ್ಲಿ ಕಚ್ಚಾ ವಸ್ತುಗಳ ದರ ಹೆಚ್ಚಳವಾಗಿದ್ದು, ತೀವ್ರ ಸೆಕೆ ಮತ್ತು ವರ್ಕ್ ಫ್ರಂ ಹೋಮ್ ಸನ್ನಿವೇಶ ಮುಂದುವರಿಯುತ್ತಿರುವ ಕಾರಣಗಳಿಂದಾಗಿ ಹೆಚ್ಚುವರಿ ತಂಪು ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಯಾಗಲಿದ್ದು, ಬೇಡಿಕೆಯಲ್ಲಿ ಏರಿಕೆಯಾಗಲಿದೆ. ಹೀಗಾಗಿ ಎರಡಂಕಿಯ ಬೆಳವಣಿಗೆಯಾಗಲಿದೆ ಎಂದು ನಿರೀಕ್ಷಿಸಿದ್ದಾರೆ.

ಈ ಅವಧಿಯಲ್ಲಿ ಅನೇಕ ತಯಾರಕರು ಆರೋಗ್ಯ ಮತ್ತು ಹೈಜೀನ್ ಫೀಚರ್‌ಗಳನ್ನು ತಮ್ಮ ವಿವಿಧ ಎಸಿ ಬ್ರ್ಯಾಂಡ್‌ಗಳಲ್ಲಿ ಪರಿಚಯಿಸಿದ್ದಾರೆ. ಗ್ರಾಹಕರನ್ನು ಇವು ಸಾಂಕ್ರಾಮಿಕದ ಭೀತಿಯ ನಡುವೆ ವೈರಸ್‌ನಿಂದ ರಕ್ಷಿಸುತ್ತವೆ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ನೋ-ಕಾಸ್ಟ್ ಇಎಂಐ, ಕ್ಯಾಶ್‌ಬ್ಯಾಕ್ ಮತ್ತು ಮಾರಾಟ ವೃದ್ಧಿಸಲು ಸುಲಭ ಲಭ್ಯತೆಯ ಕೊಡುಗೆಗಳನ್ನು ನೀಡುತ್ತಿದ್ದಾರೆ.

Leading AC Makers To Hike Prices By 5-8 Percent As Rate Of Offset Gone Up

ಹೆಚ್ಚಿನ ಪ್ರಮಾಣದಲ್ಲಿ ಆಮದಾಗುವ ಲೋಹಗಳು ಮತ್ತು ಕಂಪ್ರೆಸ್ಸರ್ ಬೆಲೆಗಳಲ್ಲಿ ಏರಿಕೆಯಾಗಿರುವುದರಿಂದ ಡೈಕಿನ್ ಹವಾನಿಯಂತ್ರಕವು ಶೇ 3 ರಿಂದ ಶೇ 5ರವರೆಗೆ ಏರಿಕೆಯಾಗಲಿದೆ. ಹವಾ ನಿಯಂತ್ರಕಗಳ ಬೆಲೆಯಲ್ಲಿ ಶೇ 6-8ರವರೆಗೆ ಹೆಚ್ಚಳವಾಗಲಿದೆ. ರೆಫ್ರಿಜರೇಟರ್ ದರ ಶೇ 3-4ರಷ್ಟು ಏರಿಕೆಯಾಗಲಿದೆ ಎಂದು ಪ್ಯಾನಸೋನಿಕ್ ಇಂಡಿಯಾ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+