ಆದಾಯ ತೆರಿಗೆ ಪಾವತಿ ಕೊನೆ ದಿನಾಂಕ ಮತ್ತೆ ವಿಸ್ತರಣೆ
ಬೆಂಗಳೂರು, ಸೆ. 02: ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವ 'ಐಟಿ- ರಿಟರ್ನ್ಸ್' ಪ್ರಕ್ರಿಯೆಯನ್ನು ವಿತ್ತ ಸಚಿವಾಲಯ ಇನ್ನಷ್ಟು ಸರಳಗೊಳಿಸಿದೆ. ನೂತನ ಆದಾಯ ತೆರಿಗೆ ರಿಟರ್ನ್ ಫಾರಂಗಳನ್ನು ಪ್ರಕಟಿಸಲಾಗಿದೆ.ಐಟಿಆರ್ ಅರ್ಜಿಗಳನ್ನು ಮೂರು ಪುಟಕ್ಕೆ ಇಳಿಸಲಾಗಿದ್ದು, ಅರ್ಜಿ ಪಾವತಿ ಕೊನೆ ದಿನಾಂಕವನ್ನು ಸೆಪ್ಟೆಂಬರ್ 07ರ ತನಕ ವಿಸ್ತರಿಸಲಾಗಿದೆ.
ಹೊಸ ಐ.ಟಿ ರಿಟರ್ನ್ಸ್ ಫಾರಂಗಳಲ್ಲಿ ವಿವಾದಿತ ವಿದೇಶಿ ಪ್ರವಾಸ ವಿವರ, ಸುಪ್ತ ಬ್ಯಾಂಕ್(dormant bank) ಖಾತೆಗಳ ವಿವರಗಳನ್ನು ಬಹಿರಂಗ ಪಡಿಸಬೇಕಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ಹೇಳಿದೆ. [ಆನ್ ಲೈನ್ ನಲ್ಲಿ ತೆರಿಗೆ ಕಟ್ಟುವುದು ಹೇಗೆ?]
ಸಂಬಳದಾರರು, ಬಿಸಿನೆಸ್ ಹಾಗೂ ವೃತ್ತಿಪರ ಆದಾಯ ಇಲ್ಲದ ವ್ಯಕ್ತಿಗಳು ಐಟಿಆರ್ 1 ಅಥವಾ ಐಟಿಆರ್ 2 ಬಳಸಿಕೊಂಡು ಪ್ರತಿ ವರ್ಷ ಜು.31 ರೊಳಗೆ ಆದಾಯ ತೆರಿಗೆ ಪಾವತಿ ಸಲ್ಲಿಸಬೇಕಾಗುತ್ತದೆ. ಆದರೆ, ಈ ಬಾರಿ ಆಗಸ್ಟ್ 31 ಕ್ಕೆ ವಿಸ್ತರಣೆ ಮಾಡಲಾಯಿತು. ನಂತರ ಈಗ ಸೆ.07ಕ್ಕೆ ವಿಸ್ತರಣೆ ಮಾಡಲಾಗಿದೆ. [ಸರಳವಾಗಿ ತೆರಿಗೆ ಪಾವತಿ ಮಾಡುವುದು ಹೇಗೆ?]

ವಾರ್ಷಿಕವಾಗಿ 5 ಲಕ್ಷ ರೂ.ಗಳಿಗಿಂತ ಹೆಚ್ಚಿನ ವರಮಾನವಿರುವ ತೆರಿಗೆ ಪಾವತಿದಾರರು ತಮ್ಮ ಆದಾಯ ವಿವರಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಲ್ಲಿಸುವ ಆವಶ್ಯಕತೆಯಿರುವುದರಿಂದ ಆನ್ ಲೈನ್ ಮೂಲಕ ತೆರಿಗೆ ಕಟ್ಟುವವರ ಸಂಖ್ಯೆ ಸಹ ಹೆಚ್ಚಿದೆ. ["ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ, ತೆರಿಗೆ ಉಳಿಸಿ"]
ಈಗಾಗಲೇ ಗ್ರಾಹಕರು ಈ ಹೊಸ ಸೌಲಭ್ಯದಿಂದ ಯಾವ ಯಾವ ಅನುಕೂಲ ಸಿಗಲಿದೆ ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಗದು ಬಳಕೆಗಿಂತ ಕಾರ್ಡ್ ಬಳಕೆ ಹೆಚ್ಚಿಸಿದರೆ ಆದಾಯ ತೆರಿಗೆ ರಿಲೀಫ್ ಸಿಗಲಿದೆ ಎಂಬುದು ಎಲ್ಲರ ಕಣ್ಣರಳಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 7.98 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹಿಸುವ ಗುರಿಯನ್ನು ವಿತ್ತ ಸಚಿವಾಲಯ ಹೊಂದಿದೆ.












Click it and Unblock the Notifications