"ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ, ತೆರಿಗೆ ಉಳಿಸಿ"
ನವದೆಹಲಿ, ಜೂ.23: ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಿಸಲು ವಿತ್ತ ಸಚಿವಾಲಯ ಮುಂದಿಟ್ಟಿರುವ ಹೊಸ ಐಡಿಯಾಕ್ಕೆ ಬಹುತೇಕ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಕಂಡು ಬಂದಿದೆ.
ಈಗಾಗಲೇ ಗ್ರಾಹಕರು ಈ ಹೊಸ ಸೌಲಭ್ಯದಿಂದ ಯಾವ ಯಾವ ಅನುಕೂಲ ಸಿಗಲಿದೆ ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಗದು ಬಳಕೆಗಿಂತ ಕಾರ್ಡ್ ಬಳಕೆ ಹೆಚ್ಚಿಸಿದರೆ ಆದಾಯ ತೆರಿಗೆ ರಿಲೀಫ್ ಸಿಗಲಿದೆ ಎಂಬುದು ಎಲ್ಲರ ಕಣ್ಣರಳಿಸಿದೆ.[ಡೆಬಿಟ್ ಕಾರ್ಡ್ ಬಳಕೆದಾರರ ಗಮನಕ್ಕೆ]
ವಿತ್ತ ಸಚಿವಾಲಯ ಸೋಮವಾರ ಸಲ್ಲಿಸಿದ ಪ್ರಸ್ತಾವನೆಯಂತೆ ನಗದು ಬಳಕೆಗಿಂತ ಕಾರ್ಡ್ ಬಳಸಿ ನಿರ್ದಿಷ್ಟವಾದ ಪ್ರಮಾಣದಲ್ಲಿ ಹಣ ಪಾವತಿಸುವ ಗ್ರಾಹಕರಿಗೆ ಆದಾಯ ತೆರಿಗೆ ಸೌಲಭ್ಯ ಪರಿಗಣಿಸಲಾಗುತ್ತದೆ ಎನ್ನುವುದು ಈ ಪ್ರಸ್ತಾವನೆಯಲ್ಲಿನ ಪ್ರಮುಖ ಅಂಶವಾಗಿದೆ.

* 1 ಲಕ್ಷ ರೂ.ಗಿಂತ ಹೆಚ್ಚಿನ ಚಲಾವಣೆಗೆ ತಂತ್ರಜ್ಞಾನ ಬಳಕೆಯನ್ನು ಕಡ್ಡಾಯಗೊಳಿಸಿದೆ. ಅಂದರೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆಗೆ ಹೆಚ್ಚಿನ ಮಹತ್ವ ನೀಡಿದೆ. [ಎಟಿಎಂನಲ್ಲಿ ಕಾರ್ಡ್ ಸಿಕ್ಕಿಕೊಂಡರೆ ಏನು ಮಾಡಬೇಕು?]
* ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ ಹಾಗೂ ರೈಲ್ವೆ ಟಿಕೆಟ್ಗಳಿಗೆ ಕಾರ್ಡ್ನಿಂದ ಪಾವತಿ ಮಾಡುವ ಹಣಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂಬ ಅಂಶವೂ ಗ್ರಾಹಕರನ್ನು ಸೆಳೆಯುತ್ತಿದೆ.[ಕ್ರೆಡಿಟ್ ಕಾರ್ಡ್ ಪಿನ್ ಅಂಚೆಯಲ್ಲಿ ಬರಲ್ಲ]
* ಇ ವ್ಯವಹಾರ ನಿಪುಣ ಉದ್ಯಮಿ, ವ್ಯಾಪಾರಿಗಳಿಗೂ ಈ ಸೌಲಭ್ಯ ನೀಡಲಾಗುವುದು. ತೆರಿಗೆ ರಿಯಾಯಿತಿಯೂ ಸಿಗುತ್ತದೆ.
* ಹಣ ಚಲಾವಣೆ ಮೋಸದಿಂದ ಕೂಡಿದೆ ಎನ್ನುವುದು ಕಂಡುಬಂದಲ್ಲಿ ಗ್ರಾಹಕನ ಖಾತೆಗೇ ವರ್ಗಾವಣೆ ಮಾಡಲಾಗುತ್ತದೆ.
ಈ ಸೌಲಭ್ಯ ಅನುಷ್ಠಾನಗೊಳ್ಳುವುದಕ್ಕೂ ಮೊದಲು ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಸರ್ಕಾರ ಕೇಳಿಕೊಂಡಿದೆ. mygov.in ಗೆ ಭೇಟಿ ನೀಡಿ ಜೂ.29ರೊಳಗೆ ನಿಮ್ಮ ಅನಿಸಿಕೆ, ಅಭಿಪ್ರಾಯವನ್ನು ತಿಳಿಸಬಹುದು. (ಒನ್ ಇಂಡಿಯಾ ಸುದ್ದಿ)












Click it and Unblock the Notifications