ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ಡೆಬಿಟ್ ಕಾರ್ಡ್ ಬಳಕೆದಾರರ ಗಮನಕ್ಕೆ

By Mahesh
|
Google Oneindia Kannada News

ATM PIN is must for shopping : RBI
ಬೆಂಗಳೂರು, ಡಿ.1: ಡೆಬಿಟ್ ಕಾರ್ಡ್ ಬಳಕೆದಾರರು ಡಿಸೆಂಬರ್ 1 ರಿಂದ ಪ್ರತಿ ವಹಿವಾಟಿಗೂ 'ಪಿನ್ ಎಂಟ್ರಿ' (ವೈಯಕ್ತಿಕ ಗುರುತಿನ ಸಂಖ್ಯೆ ನಮೂದಿಸುವುದು) ಕಡ್ಡಾಯಗೊಳಿಸಲಾಗಿದೆ. ವಂಚನೆ ತಡೆಗಟ್ಟುವ ನಿಟ್ಟಿ­ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಡೆಬಿಟ್ ಕಾರ್ಡ್ ಬಳಸಿ ಸಾಮಾನ್ಯವಾಗಿ ಮಾಲ್ ಗಳನ್ನು ಬಿಲ್ ಪಾವತಿ ಮಾಡಿ ಕೊಟ್ಟ ರಸೀತಿಗೆ ಸಹಿ ಹಾಕಿ ಗ್ರಾಹಕರು ಹೊರಟು ಬಿಡುತ್ತಿದ್ದರು. ಆದರೆ, ಈಗ ಪ್ರತಿ ಬಾರಿ ಡೆಬಿಟ್ ಕಾರ್ಡ್ ಬಳಸಿ ವ್ಯವಹಾರ ನಡೆಸುವಾಗಲೂ ಪಿನ್ ಸಂಖ್ಯೆ ಹಾಕಲೇಬೇಕು.

ಪಾಯಿಂಟ್ ಆಫ್ ಸೇಲ್ಸ್ (ಪಿಒಎಸ್) ಸೇರಿದಂತೆ ಇತರೆ ಮಾರಾಟ ಮಳಿಗೆಗಳಲ್ಲಿ ಇನ್ನು ಮುಂದೆ ಡೆಬಿಟ್ ಕಾರ್ಡ್ ಬಳಸಿ ಹಣ ಪಾವತಿಸ­ಬೇಕಾದರೆ ನಾಲ್ಕು ಅಂಕೆಗಳ 'ಪಿನ್' ನಮೂ­ದಿಸು­ವುದು ಕಡ್ಡಾಯ. ಗ್ರಾಹಕರಿಗೆ ಈಗಾಗಲೇ ಈ ಕುರಿತು 'ಎಸ್ ಎಂಎಸ್' ಮತ್ತು ಇ-ಮೇಲ್ ಮೂಲಕ ಮಾಹಿತಿ ನೀಡಲಾಗಿದೆ ಎಂದು 'ಆರ್ ಬಿಐ' ತಿಳಿಸಿದೆ.

ಇದೇ ಕ್ರೆಡಿಟ್ ಕಾರ್ಡ್ ವಿಷಯಕ್ಕೆ ಬಂದರೆ ಎಲ್ಲಾ ಅಂತಾರಾಷ್ಟ್ರೀಯ ವಹಿವಾಟು ಹಾಗೂ ಇಂಟರ್ನೆಟ್ ಮೂಲಕ ವಹಿವಾಟುಗಳಿಗೆ ಪಿನ್ ಕಡ್ಡಾಯವಾಗಿದೆ. ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಆನ್ ಲೈನ್ ಶಾಪಿಂಗ್ ಸಾಧ್ಯವಾಗುತ್ತಿಲ್ಲವೆಂದರೆ ತಕ್ಷಣವೇ ಇಎಂವಿ ಚಿಪ್ ಹಾಗೂ PIN ಇದೆ ಕೇಳಿ ಪಡೆಯಿರಿ.

ಭಾರತದಲ್ಲಿ ಸುಮಾರು 350 ಮಿಲಿಯನ್ ಗೂ ಅಧಿಕ ಡೆಬಿಟ್ ಕಾರ್ಡ್ ಹಾಗೂ 19 ಮಿಲಿಯನ್ ಕ್ರೆಡಿಟ್ ಕಾರ್ಡ್ ಗಳು ಬಳಕೆಯಲ್ಲಿರುವುದು ಕಂಡು ಬಂದಿದೆ.

ಇದರಲ್ಲಿ ಹೊಸದೇನಿಲ್ಲ: ಎಟಿಎಂ ಗಳಲ್ಲಿ ಪ್ರತಿ ವ್ಯವಹಾರ ಪ್ರಕ್ರಿಯೆಗೂ ಪಿನ್ ಸಂಖ್ಯೆ ಬಳಸುವುದು ಕಡ್ಡಾಯಗೊಳಿಸಿದ ಹಾಗೆ ಡೆಬಿಟ್ ಕಾರ್ಡ್ ಬಳಸಿ ನಡೆಸುವ ಪ್ರತಿ ವ್ಯವಹಾರಕ್ಕೂ ಪಿನ್ ಸಂಖ್ಯೆ ನಮೂದಿಸುವುದು ಅನಿವಾರ್ಯವಾಗಲಿದೆ ಎಂದು 2012ರ ಡಿಸೆಂಬರ್ ತಿಂಗಳಿನಲ್ಲೇ ಆರ್ ಬಿಐ ಘೋಷಿಸಿತ್ತು. ಈಗ ಜಾರಿಗೆ ಬಂದಿದೆ ಅಷ್ಟೇ.[ಹೆಚ್ಚಿನ ಸುಧಾರಣೆಗಳ ಬಗ್ಗೆ ಓದಿ]

ಡೆಬಿಟ್ ಕಾರ್ಡ್ ಗಳ ದುರ್ಬಳಕೆ, ಕಳೆದು ಹೋದ ಡೆಬಿಟ್ ಕಾರ್ಡ್ ಗಳ ಮೇಲೆ ನಿಗಾ ವಹಿಸಲು ಈ ರೀತಿ ಕ್ರಮ ಅನಿವಾರ್ಯವಾಗಿದೆ. ಇನ್ಮುಂದೆ ಡೆಬಿಟ್ ಕಾರ್ಡ್ ನಲ್ಲಿ ಗ್ರಾಹಕರ ಭಾವಚಿತ್ರ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ. ಇನ್ನಷ್ಟು ಆಧುನಿಕ ತಂತ್ರಜ್ಞಾನ ಬಳಸಿ ಕಾರ್ಡ್ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಆರ್ ಬಿಐ ಚಿಂತಿಸಿದೆ.

ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್ ಬಳಕೆಯನ್ನು ಕೂಡಾ Foreign Exchange Management Act, 1999 ಕಾಯ್ದೆ ಅನುಗುಣವಾಗಿ ಬಳಕೆಗೆ ನೀಡುವಂತೆ ಬ್ಯಾಂಕ್ ಗಳಿಗೆ ಆರ್ ಬಿಐ ಸೂಚಿಸಿದೆ. ಕೆಲವು ಡೆಬಿಟ್ ಕಾರ್ಡ್ ಗಳನ್ನು ಹಿಂಪಡೆದು ಸುಧಾರಿತ ಕಾರ್ಡ್ ಗಳನ್ನು ಗ್ರಾಹಕರಿಗೆ ಒದಗಿಸುವಂತೆ ಕೂಡಾ ಆರ್ ಬಿಐ ಹೇಳಿದೆ.

English summary
The Reserve Bank of India has made it mandatory for debit cardholders to punch in their four-digit PIN after swiping the card at any retail outlet, from December 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X