NEFT ಹಣ ವರ್ಗಾವಣೆಯಲ್ಲಿ ಬದಲಾವಣೆ, ಶುಲ್ಕ? ಮಿತಿ ಎಷ್ಟು?
ನವದೆಹಲಿ, ಡಿಸೆಂಬರ್ 16: ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಭಸುದ್ದಿ ನೀಡಿದೆ. ಡಿಸೆಂಬರ್ 16ರಿಂದ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ (ಎನ್‌ಇಎಫ್‌ಟಿ) ವ್ಯವಸ್ಥೆ ದಿನದ 24 ಗಂಟೆಗಳ ಕಾಲ, ವರ್ಷದ 365 ದಿನಗಳ ಕಾಲ ಲಭ್ಯವಾಗಲಿದೆ.
ಆರ್‌ಬಿಐನ ಈ ವಿಶೇಷ ಸೌಲಭ್ಯ ಬೆಳಗ್ಗೆ 8 ಗಂಟೆಯಿಂದ ಸಂಜೆ 6:30 ಗಂಟೆ ತನಕ ಮಾತ್ರ ಲಭ್ಯವಿತ್ತು. ಅಲ್ಲದೆ ಬ್ಯಾಂಕ್ ರಜೆ ದಿನಗಳಲ್ಲಿ NEFT ಸೌಲಭ್ಯ ಲಭ್ಯವಾಗುತ್ತಿರಲಿಲ್ಲ. ಆದರೆ ಈಗ ರಜೆದಿನಗಳು ಸೇರಿದಂತೆ ಎಲ್ಲಾ ದಿನಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ. ಡಿಜಿಟಲ್ ವ್ಯವಹಾರಕ್ಕೆ ಒತ್ತು ನೀಡಲು ಆರ್ ಬಿಐ ವಿವಿಧ ಕ್ರಮಗಳನ್ನು ಅಳವಡಿಸುತ್ತಿದೆ. ಎನ್ ಇ ಎಫ್ ಟಿ ಅಲ್ಲದೆ, IMPS ವ್ಯವಸ್ಥೆ ಕೂಡಾ ಜಾರಿಯಲ್ಲಿದೆ. ಆದರೆ, IMPS ಅಡಿಯಲ್ಲಿ 2 ಲಕ್ಷ ರು ತನಕ ಮಾತ್ರ ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಸಾಧ್ಯ.
ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸಫರ್ (NEFT) ಎಂಬುದು ಆನ್ ಲೈನ್ ಮೂಲಕ ಹಣ ರವಾನೆ ಮಾಡುವ ವಿಧಾನವಾಗಿದೆ. ಐಎಫ್ ಎಸ್ ಸಿ ಕೋಡ್ ಬಳಸಿ ಹಣ ರವಾನೆ ಮಾಡಬಹುದಾಗಿದ್ದು, ಕೆಲವೇ ಗಂಟೆಗಳಲ್ಲಿ ಹಣ ವರ್ಗಾವಣೆಯಾಗುತ್ತದೆ. ಹಣ ರವಾನೆ ಮಾಡುವಾಗ ಫಲಾನುಭವಿಯ ಖಾತೆ ಸಂಖ್ಯೆಯನ್ನು ಸೇರಿಸಬೇಕು. ನಂತರ ವರ್ಗಾವಣೆ ಮಾಡಬೇಕಾದ ಹಣವನ್ನು ನಮೂದಿಸಬೇಕು. ಒಂದು ದಿನಕ್ಕೆ 10 ಲಕ್ಷದವರೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ.

NEFT ಹಣ ವರ್ಗಾವಣೆಯಲ್ಲಿ ಶುಲ್ಕ?
ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಗಳು NEFT ಸೌಲಭ್ಯದಿಂದ ಹಣ ವರ್ಗಾವಣೆಗಾಗಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ಜುಲೈ ತಿಂಗಳಿನಲ್ಲಿ ಆರ್ ಬಿಐ ಕೂಡಾ ಶುಲ್ಕ ವಿಧಿಸದಂತೆ ಬ್ಯಾಂಕ್ ಗಳಿಗೆ ಸೂಚಿಸಿತ್ತು. ಜನವರಿ 220ರಿಂದ ಎಲ್ಲಾ ಬ್ಯಾಂಕುಗಳು NEFT ಬಳಕೆ ಉಚಿತಗೊಳಿಸಲಿವೆ.

NEFT ಹಣ ವರ್ಗಾವಣೆ ಮಿತಿ
NEFT ಮೂಲಕ ಹಣ ವರ್ಗಾವಣೆಗೆ ಯಾವುದೇ ಮಿತಿ ಇಲ್ಲ. ಸಾಮಾನ್ಯವಾಗಿ 2 ಲಕ್ಷ ರು ತನಕದ ಹಣ ವರ್ಗಾವಣೆಗೆ ಬಳಸಲಾಗುತ್ತದೆ. ಇನ್ನೂ ಹೆಚ್ಚಿನ ಮೊತ್ತದ ಹಣ ವರ್ಗಾವಣೆಗೆ ಆರ್ ಟಿ ಜಿಎಸ್ ಬಳಸಬಹುದು.
ಕೆಲವು ಬ್ಯಾಂಕ್ ಗಳಲ್ಲಿ ಗ್ರಾಹಕರಿಗೆ ಮಿತಿಯನ್ನು ಸೂಚಿಸಲಾಗಿದೆ. ಐಸಿಐಸಿಸಿಯಲ್ಲಿ 10ಲಕ್ಷರು ಹಾಗೂ ಎಚ್ ಡಿ ಎಫ್ ಸಿಯಲ್ಲಿ25 ಲಕ್ಷ ರು ತನಕ ನೆಫ್ಟ್ ಬಳಸಬಹುದು. ಎಸ್ಬಿಐ 10 ಲಕ್ಷ ಮಿತಿ ಹೊಂದಿದೆ.

NEFT ಹಾಗೂ ಆರ್ ಟಿ ಜಿಎಸ್ ಬಳಕೆ
ಸಾಮಾನ್ಯವಾಗಿ ಗ್ರಾಹಕರು ಭಾರಿ ಮೊತ್ತದ ಹಣವನ್ನು ವರ್ಗಾವಣೆ ಮಾಡಲು ಆರ್‌ಟಿಜಿಎಸ್ ಸೌಲಭ್ಯ ಬಳಸುತ್ತಾರೆ. ಈ ಮುಂಚೆ ಎಸ್‍ಬಿಐ, ನೆಫ್ಟ್ ಗೆ 1 ರಿಂದ 5 ರೂ. ಹಾಗೂ ಆರ್‌ಟಿಜಿಎಸ್ ಗೆ 5ರಿಂದ 50 ರೂಪಾಯಿವರೆಗೆ ಶುಲ್ಕ ವಿಧಿಸುತ್ತಿತ್ತು.ಆದರೆ, ಆರ್ ಬಿಐ ಸೂಚನೆ ಮೇರೆಗೆ ಶುಲ್ಕ ತೆಗೆದು ಹಾಕಲಾಗಿದೆ.

ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ
ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ನೀಡಲು, ಆರ್‌ಟಿಜಿಎಸ್ ಮೂಲಕ ಡಿಜಿಟಲ್ ವಹಿವಾಟುಗಳಿಗಾಗಿ ಆರ್‌ಬಿಐ ಬ್ಯಾಂಕುಗಳಿಗೆ ವಿಧಿಸುವ ಸಂಸ್ಕರಣಾ ಶುಲ್ಕಗಳು ಮತ್ತು ಸಮಯ-ಬದಲಾಗುವ ಶುಲ್ಕಗಳನ್ನು ತೆಗೆದುಹಾಕಲು ನಿರ್ಧರಿಸಿದ್ದನ್ನು ಗ್ರಾಹಕರು ಸ್ವಾಗತಿಸಿದ್ದಾರೆ. ಈಗ ನೆಫ್ಟ್ ಮೇಲಿನ ಶುಲ್ಕ ರದ್ದು, ಅವಧಿ ವಿಸ್ತರಣೆಯಿಂದ ಡಿಜಿಟಲ್ ವ್ಯವಹಾರ ಹೆಚ್ಚಾಗುವ ಸಾಧ್ಯತೆಯಿದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications