80 ಲಕ್ಷ ಉದ್ಯೋಗ ಅವಕಾಶ ಏರಿಕೆ ಗುರಿ : ಪಾಟೀಲ್
ಬೆಂಗಳೂರು, ಜ.1: 2020ರ ವೇಳೆಗೆ ರಾಜ್ಯದಲ್ಲಿ ಐಟಿ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗ ಅವಕಾಶ ಒದಗಿಸಲಾಗುವುದು ಎಂದು ರಾಜ್ಯದ ಐಟಿ, ಬಿಟಿ ಹಾಗೂ ವಿಜ್ಞಾನ, ತಂತ್ರಜ್ಞಾನ ಖಾತೆ ಎಸ್ ಆರ್ ಪಾಟೀಲ್ ಹೇಳಿದ್ದಾರೆ.
2020ರ ಹೊತ್ತಿಗೆ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಭಾರತ ಸುಮಾರು 400 ಬಿಲಿಯನ್ ಡಾಲರ್ ನಷ್ಟು ಮೌಲ್ಯದ ಮಾರುಕಟ್ಟೆ ಹೊಂದಲಿದೆ. ಇದಕ್ಕೆ ರಾಜ್ಯದಿಂದ ಶೇ 10-12ರಷ್ಟು ಅಧಿಕ ಪ್ರಮಾಣದ ಕೊಡುಗೆ ಸಲ್ಲಿಸಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ಸಾಫ್ಟ್ ವೇರ್ ರಫ್ತು ಪ್ರಮಾಣ : 2020ರ ಹೊತ್ತಿಗೆ ರಾಜ್ಯದ ಸಾಫ್ಟ್ ವೇರ್ ರಫ್ತು ಪ್ರಮಾಣ 4 ಲಕ್ಷ ಕೋಟಿ ಮೀರಲಿದೆ. ಕಳೆದ ವರ್ಷ ಸುಮಾರು 1.8 ಲಕ್ಷ ಕೋಟಿ ರು ಮೌಲ್ಯದ ರಫ್ತು ದಾಖಲಿಸಲಾಗಿದೆ. [ಇನ್ನು 3 ತಿಂಗಳಲ್ಲಿ ಬೆಂಗಳೂರು ವೈ ಫೈಮಯ]

ಉದ್ಯೋಗ ಅವಕಾಶ ದ್ವಿಗುಣದ ಜೊತೆಗೆ ರಫ್ತು ಪ್ರಮಾಣವನ್ನು ಏರಿಕೆ ಮಾಡುವ ಗುರಿಯನ್ನು ಹೊಂದಲಾಗಿದೆ. ಎರಡನೇ ಸ್ತರದ ನಗರಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಐಟಿ ಉದ್ಯಮಿಗಳಿಗೆ ಜಮೀನು ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ರಾಜ್ಯದ ವಿವಿಧೆಡೆ ಐಟಿ ಉದ್ಯಮ ಬೆಳೆಯಲಿದೆ ಎಂದರು. [ಐಟಿ ಪಾರ್ಕ್ ಸ್ಥಾಪನೆ, 80 ಲಕ್ಷ ಉದ್ಯೋಗ]
ಉದ್ಯೋಗಾವಕಾಶ: ಮುಂದಿನ ಆರು ವರ್ಷಗಳಲ್ಲಿ ಐಟಿ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶ ದ್ವಿಗುಣಗೊಳ್ಳಲಿದೆ. ಸುಮಾರು 40 ಲಕ್ಷ ಮಂದಿ ನೇರ ಹಾಗೂ ಪರೋಕ್ಷವಾಗಿ ಉದ್ಯಮದಲ್ಲಿ ತೊಡಗಿಕೊಳ್ಳಲಿದ್ದಾರೆ.
ಈ ಸಂಖ್ಯೆಯನ್ನು 80 ಲಕ್ಷಕ್ಕೇರಿಸುವ ಗುರಿ ಹೊಂದಲಾಗಿದೆ.ಸದ್ಯಕ್ಕೆ ಬೆಂಗಳೂರು ಸೇರಿದಂತೆ ವಿವಿಧೆಡೆ ಇರುವ ಐಟಿ ಹಾಗೂ ಅದಕ್ಕೆ ಪೂರಕ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಸಂಖ್ಯೆ 30 ಲಕ್ಷ ದಷ್ಟಿದೆ. 2020ರ ವೇಳೆಗೆ 20 ಲಕ್ಷ ನೇರ ಉದ್ಯೋಗಿಗಳು ಹಾಗೂ ಒಟ್ಟಾರೆ 80 ಲಕ್ಷ ಉದ್ಯೋಗ ಅವಕಾಶ ಎಲ್ಲರಿಗೂ ಸಿಗಲಿದೆ. ಈ ಯೋಜನೆಯ ನೇತೃತ್ವವನ್ನು ಟಿವಿ ಮೋಹನ್ ದಾಸ್ ಪೈ ವಹಿಸಿಕೊಂಡಿದ್ದಾರೆ ಎಂದು ಎಸ್ ಆರ್ ಪಾಟೀಲ್ ವಿವರಿಸಿದರು.












Click it and Unblock the Notifications