ಮಹಾರಾಷ್ಟ್ರ & ತಮಿಳುನಾಡು ರಾಜ್ಯಗಳನ್ನು ಹಿಂದಕ್ಕೆ ಸರಿಸಿದ ಕರ್ನಾಟಕ: ದೇಶದಲ್ಲೇ ಮುಂಚೂಣಿ ರಾಜ್ಯ!

ಭಾಷಾ ವಿಚಾರ ಸೇರಿದಂತೆ ಕೆಲವೊಂದು ವಿಚಾರಗಳಿಂದ ವಾದ - ವಿವಾದಗಳಿಂದಲೇ ದೇಶದಾದ್ಯಂತ ಇತ್ತೀಚಿನ ದಿನಗಳಲ್ಲಿ ಕರ್ನಾಟಕವನ್ನು ರಾಷ್ಟ್ರೀಯ ಮಾಧ್ಯಮಗಳು ಪ್ರತಿಬಿಂಬಿಸುತ್ತಿದ್ದವು. ಅಲ್ಲದೇ ಕರ್ನಾಟಕ ಹಾಗೂ ಬೆಂಗಳೂರಿನ ಬಗ್ಗೆ ದೇಶದಾದ್ಯಂತ ವಿಮರ್ಶೆ ಹೆಚ್ಚಾಗುತ್ತಲ್ಲೇ ಇದೆ. ಇದೀಗ ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನಕ್ಕೆ ಏರಿದೆ. ಈ ಮೂಲಕ ಕರ್ನಾಟಕವು, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳಿಗೆ ಶಾಕ್ ನೀಡಿದೆ. ತಮಿಳುನಾಡು ಹಾಗೂ ಮಹಾರಾಷ್ಟ್ರ ದೇಶದಲ್ಲೇ ಆರ್ಥಿಕವಾಗಿ ಮುಂಚೂಣಿಯಲ್ಲಿವೆ. ಆದರೆ, ಈ ಎರಡೂ ರಾಜ್ಯಗಳನ್ನೂ ಕರ್ನಾಟಕ ಹಿಂದಕ್ಕೆ ತಳ್ಳಿದೆ. ಸಂಸತ್ತಿಗೆ ಕೇಂದ್ರ ಹಣಕಾಸು ಸಚಿವಾಲಯ ಸಲ್ಲಿಸಿದ ದತ್ತಾಂಶದಲ್ಲಿ ಈ ವಿಷಯ ವರದಿಯಾಗಿದೆ.

ಹೌದು ಇದು ಇಡೀ ಕರ್ನಾಟಕವೇ ಖುಷಿಪಡುವ ಸುದ್ದಿ ಅಂತಲೇ ಹೇಳಬಹುದು. ಯಾಕೆಂದರೆ ಕರ್ನಾಟಕವು ಆರ್ಥಿಕವಾಗಿ ಪ್ರಗತಿಯ ಹಾದಿಯಲ್ಲಿದೆ. ಇದನ್ನು ಕಾಂಗ್ರೆಸ್ ಗ್ಯಾರಂಟಿಗಳ ಲಾಭ ಎಂದು ವಿಶ್ಲೇಷಿಸುತ್ತಿದೆ. ಇದರೊಂದಿಗೆ ಹಲವು ಕಾರಣಗಳು ಸಹ ಇವೆ. ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ತಲಾದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ಇದು ಪ್ರತಿ ಕನ್ನಡಿಗರಿಗೂ ಎರಡು ಕಾರಣಕ್ಕೆ ಸಂತೋಷದ ವಿಚಾರ ಅಂತಲೇ ಹೇಳಬಹುದು. ಮೊದಲನೆಯದಾಗಿ ಕರ್ನಾಟಕದಲ್ಲಿರುವವರ ತಲಾದಾಯ ಹೆಚ್ಚಳವಾಗಿದೆ.

Karnataka overtakes Maharashtra and Tamil Nadu First in per capita income in India

ಈ ವಿಷಯದ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇಶದಲ್ಲೇ ಕರ್ನಾಟಕ ಅತಿ ಹೆಚ್ಚು ತಲಾದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯದ ತಲಾ ನಿವ್ವಳ ರಾಜ್ಯ ದೇಶಿಯ ಉತ್ಪನ್ನವು (ಎನ್‌ಎಸ್‌ಡಿಪಿ) 2,04,605 ರೂಪಾಯಿಗೆ ತಲುಪಿದೆ ಎಂದು ಸಂಸತ್ತಿಗೆ ಕೇಂದ್ರ ಹಣಕಾಸು ಸಚಿವಾಲಯ ಸಲ್ಲಿಸಿದ ದತ್ತಾಂಶ ತಿಳಿಸಿದೆ ಎಂದು ಬರೆದುಕೊಂಡಿದ್ದಾರೆ.

2014-15 ರಲ್ಲಿ ಕರ್ನಾಟಕದ ತಲಾದಾಯವು 1,05,697 ರೂ. ಇತ್ತು. ಇದೀಗ 10 ವರ್ಷಗಳಲ್ಲಿ ಶೇ.93.6 ರಷ್ಟು ಏರಿಕೆ ಕಂಡಿರುವುದು ಗಮನಾರ್ಹ ಸಂಗತಿ.

ಈ ಸಾಧನೆಯ ಶ್ರೇಯಸ್ಸು ನಮ್ಮ ಸರ್ಕಾರ ಜಾರಿಗೆ ಕೊಟ್ಟ ಗ್ಯಾರಂಟಿ ಯೋಜನೆಗಳಿಗೆ ಸಲ್ಲುತ್ತದೆ. ರಾಜ್ಯದ ಪ್ರತೀ ಕುಟುಂಬಗಳಿಗೂ ತಿಂಗಳಿಗೆ 4-5 ಸಾವಿರ ರೂಪಾಯಿಯಿಂದ ವರ್ಷಕ್ಕೆ 60-70 ಸಾವಿರ ರೂಪಾಯಿ ನೇರವಾಗಿ ತಲುಪಿಸುವ ಮೂಲಕ ಪ್ರತೀ ಕುಟುಂಬವನ್ನೂ ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುತ್ತಿದ್ದೇವೆ.‌

ಜನರಲ್ಲಿ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿ, ಅವರಿಗೆ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬಿ ಈ ಮೂಲಕ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದೇವೆ ಎಂದು ಹೇಳಿದ್ದಾರೆ.

ತಲಾದಾಯ ಭಾರೀ ಹೆಚ್ಚಳ!

ಹಣಕಾಸು ಸಚಿವಾಲಯವು ಲೋಕಸಭೆಯಲ್ಲಿ ಮಂಡಿಸಿದ ಅಂಕಿ ಅಂಶಗಳ ಪ್ರಕಾರ, 2024-25ನೇ ಸಾಲಿನಲ್ಲಿ ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ಕರ್ನಾಟಕದಲ್ಲಿ ಪ್ರತಿಯೊಬ್ಬರ ತಲಾದಾಯವು 2 ಲಕ್ಷ ರೂ.ಗಳನ್ನು ದಾಟಿದೆ ಎಂದು ಹೇಳಲಾಗಿದೆ.

ಸ್ಥಿರ ಬೆಲೆಯಲ್ಲಿ ರಾಜ್ಯದ ತಲಾ ನಿವ್ವಳ ರಾಜ್ಯ ದೇಶೀಯ ಉತ್ಪನ್ನ (ಎನ್‌ಎಸ್‌ಡಿಪಿ) ರೂ. 2,04,605 ತಲುಪಿದೆ. 2014-15ರಲ್ಲಿ ರೂ. 1,05,697 ರಿಂದ ಶೇ. 93.6 ರಷ್ಟು ಬೆಳವಣಿಗೆ ದಾಖಲಿಸಿದೆ. ಇದು ಅದ್ಭುತ ಆರ್ಥಿಕ ಬೆಳವಣಿಗೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಇನ್ನು ರಾಷ್ಟ್ರೀಯವಾಗಿ ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ (ಎನ್‌ಎನ್‌ಐ) 1,14,710 ರೂಪಾಯಿ ಇದೆ.

2024-25ನೇ ಆರ್ಥಿಕ ಸಾಲಿನ ಅವಧಿಯಲ್ಲಿ ಕರ್ನಾಟಕದ ತಲಾ ಆದಾಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯಧಿಕವಾಗಿದೆ. ತಮಿಳುನಾಡು ರೂ. 1,96,309 ರಷ್ಟಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಕರ್ನಾಟಕದ ಆದಾಯವು ಬಹುತೇಕ ದ್ವಿಗುಣಗೊಂಡಿದೆ. ಇದು ಹೆಚ್ಚಿನ ಪ್ರಮುಖ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ. 2013-14ಕ್ಕೆ ಹೋಲಿಸಿದರೆ ತಲಾ ಆದಾಯವು 1,01,858 ರೂ. ಇತ್ತು. 2023-24ರ ವೇಳೆಗೆ ಕರ್ನಾಟಕವು ಶೇ. 88.5 ರಷ್ಟು ಏರಿಕೆ ಕಂಡಿದೆ.
2023-24ರಲ್ಲಿ 1,91,970 ರೂ. ಇತ್ತು. 2024-25ರಲ್ಲಿ 2,04,605 ರೂ.ಗೆ ತಲುಪಿದೆ ಎಂದು ಹೇಳಲಾಗಿದೆ.

ದಶಕದ ಅವಧಿಯ ಬೆಳವಣಿಗೆಯನ್ನು ಗಮನಿಸಿದರೆ, ಕರ್ನಾಟಕವು ಶೇ. 93.6 ರಷ್ಟು ಏರಿಕೆಯೊಂದಿಗೆ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಒಡಿಶಾ ರಾಜ್ಯವು ಶೇ. 96.7 ರಷ್ಟು ಏರಿಕೆ ದಾಖಲಿಸಿದೆ.

ತಲಾ ಆದಾಯ ಎಂದರೇನು, ಅದನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ?

ಒಂದು ಪ್ರದೇಶದ ಇಲ್ಲವೇ ದೇಶದ ಒಟ್ಟು ಆದಾಯವನ್ನು ಆ ಪ್ರದೇಶದ ಇಲ್ಲವೇ ದೇಶದ ಜನಸಂಖ್ಯೆಯಿಂದ ಭಾಗಿಸಿದರೆ, ಬರುವ ಸರಾಸರಿ ಆದಾಯವೇ ತಲಾದಾಯಾ ಎಂದು ಹೇಳಲಾಗುತ್ತದೆ. ಇದು ಆ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯ ಸರಾಸರಿ ಆದಾಯದ ಅಳತೆಯಾಗಿದೆ ಹಾಗೂ ಜೀವನ ಮಟ್ಟವನ್ನು ಅಂದಾಜು ಮಾಡಲು ಬಳಕೆ ಮಾಡಲಾಗುತ್ತದೆ.

ಇನ್ನಷ್ಟು ನಿಖರ ಹಾಗೂ ವಿವರವಾಗಿ ಹೇಳಬೇಕಾದರೆ. ತಲಾ ಆದಾಯದ ಲೆಕ್ಕಾಚಾರ: ತಲಾ ಆದಾಯವನ್ನು ಕಂಡುಹಿಡಿಯುವುದು ಒಂದು ಪ್ರದೇಶದ ಒಟ್ಟು ಆದಾಯವನ್ನು ಆ ಪ್ರದೇಶದ ಒಟ್ಟು ಜನಸಂಖ್ಯೆಯಿಂದ ಭಾಗಿಸಲಾಗುತ್ತದೆ. ಉದಾ: ಒಂದು ಪ್ರದೇಶದ ಒಟ್ಟು ಆದಾಯವು 10 ಕೋಟಿ ರೂಪಾಯಿ ಮತ್ತು ಜನಸಂಖ್ಯೆ 1000 ಆಗಿದ್ದರೆ, ತಲಾ ಆದಾಯ 1 ಲಕ್ಷ ರೂಪಾಯಿ ಎಂದು ವಿಭಜನೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+