Hero Motocorp Karizma XMR: ಬುಕ್ಕಿಂಗ್ ನಲ್ಲಿ ಧೂಳೆಬ್ಬಿಸಿದ ಕರಿಜ್ಮಾ
ತನ್ನ ಪ್ರೀಮಿಯಂ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆಗಳನ್ನು ಪಡೆಯುತ್ತಿರುವ, ಮೋಟಾರ್ ಸೈಕಲ್ ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್ (Hero Motocorp), ಹೊಸದಾಗಿ ಬಿಡುಗಡೆಯಾದ ಮೋಟಾರ್ ಸೈಕಲ್, ಕರಿಜ್ಮಾ XMRಗಾಗಿ (Karizma XMR) 13,688 ಬುಕಿಂಗ್‌ಗಳನ್ನು ಇದುವರೆಗೆ ಸ್ವೀಕರಿಸಿದೆ.
ಹೀರೋ ಮೋಟೋಕಾರ್ಪ್ ತನ್ನ ಡೀಲರ್‌ಗಳಿಗೆ ಕರಿಜ್ಮಾ ಬೈಕ್ ಅನ್ನು ಈಗಾಗಲೇ ಕಳುಹಿಸಲು ಪ್ರಾರಂಭಸಿದೆ ಮತ್ತು ಈ ತಿಂಗಳ ದಸರಾ ಹಬ್ಬದ ಅವಧಿಯಲ್ಲಿ ಗ್ರಾಹಕರಿಗೆ ವಿತರಣೆ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ.

ಹೀರೋ ಕರಿಜ್ಮಾ ಪ್ರಾರಂಭಿಕ ಬೆಲೆ 1,72,900/- ರೂ.ಗಳು ಮತ್ತು ಬುಕಿಂಗ್ ಅನ್ನು ಆಗಸ್ಟ್ 29, 2023 ರಿಂದ ಸೆಪ್ಟೆಂಬರ್ 30, 2023ಕ್ಕೆ ಮುಕ್ತಾಯವಾಗುವಂತೆ ತೆರೆದಿತ್ತು. ಹೊಸದಾಗಿ ಬುಕ್ಕಿಂಗ್ ಬೆಲೆ 1,79,900/- ರೂ.ಗಳು (ಎಕ್ಸ್ ಶೋ ರೂಂ ದೆಹಲಿ) ಮತ್ತು ಕಂಪನಿಯು ಶೀಘ್ರದಲ್ಲೇ ಹೊಸ ಬುಕಿಂಗ್ ವಿಂಡೋವನ್ನು ಪ್ರಾರಂಭಿಸಲಿದೆ.
ಹೀರೋ ಮೋಟೋಕಾರ್ಪ್ ನ ಚೀಫ್ ಬಿಸಿನೆಸ್ ಆಫೀಸರ್ ರಂಜಿವ್‌ಜಿತ್ ಸಿಂಗ್ ಈ ಬಗ್ಗೆ ಮಾತನಾಡುತ್ತಾ, "ಹೀರೋ ಕರಿಜ್ಮಾ XMRಗೆ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಇದು ನಮ್ಮ ಮೋಟಾರ್ ಸೈಕಲ್ ಮೇಲೆ ಗ್ರಾಹಕರಿಗೆ ಇರುವ ನಂಬಿಕೆಯನ್ನು ತೋರಿಸುತ್ತದೆ. ಕರಿಜ್ಮಾ XMR ಉತ್ತಮ ರೈಡಿಂಗ್ ಅನುಭವವನ್ನು ನೀಡುತ್ತದೆ ಎಂದು ನಾವು ಖಚಿತ ವಿಶ್ವಾಸದಿಂದ ಹೇಳುತ್ತೇವೆ' ಎಂದು ಹೇಳಿದ್ದಾರೆ.
Hero: ಬುಕ್ಕಿಂಗ್‌ನಲ್ಲಿ ಸುನಾಮಿ ಎಬ್ಬಿಸಿದ ಹೀರೋ ಕರಿಜ್ಮಾ, ಘೋಷಣೆ
ಹೊಸ ಕರಿಜ್ಮಾ ಎಕ್ಸ್ಎಂಆರ್ ಶ್ರೇಣಿಯ ಅತ್ಯಂತ ಶಕ್ತಿಶಾಲಿ ಮೋಟಾರ್ ಸೈಕಲ್ ಆಗಿದ್ದು, 210cc ಲಿಕ್ವಿಡ್ ಕೂಲ್ಡ್ DOHC ಇಂಜಿನ್ ಇದ್ದು 6-ಸ್ಪೀಡ್ ಟ್ರಾನ್ಸ್‌ಮಿಷನ್ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಹೊಂದಿದೆ.
ಪ್ರಸಕ್ತ ಗ್ರಾಹಕರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹುಡುಕುತ್ತಿರುವಾಗ, ಹೊಸ ಕರಿಜ್ಮಾ ತನ್ನ ಶ್ರೇಣಿಯಲ್ಲಿಯೇ ಮೊದಲ ಅಡ್ಜಸ್ಟ್ಮೆಂಟ್ ವಿಂಡ್‌ಶೀಲ್ಡ್, ಇಂಟೆಲಿಜೆಂಟ್ ಇಲ್ಯುಮಿನೇಷನ್ ಹೆಡ್ ಲ್ಯಾಂಪ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ವ್ಯವಸ್ಥೆಯನ್ನು ಹೊಂದಿದೆ.












Click it and Unblock the Notifications