ಜಿಯೋ ದೀಪಾವಳಿ ಹಬ್ಬದ ಧಮಾಕ, ಕ್ಯಾಶ್ ಬ್ಯಾಕ್
ಬೆಂಗಳೂರು, ನವೆಂಬರ್ 05: ದೀಪಾವಳಿ ಸಂದರ್ಭದಲ್ಲಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಶೇ 100ರಷ್ಟು ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದೆ. ಜೊತೆಗೆ ಕೂಪನ್ಸ್, ಗಿಫ್ಟ್ ಕಾರ್ಡ್ ಗಳು ಸಿಗುತ್ತಿದೆ.
ಜಿಯೋ ಒಟ್ಟಾರೆ, 8ಕ್ಕೂ ಅಧಿಕ ಆಫರ್ ನೀಡುತ್ತಿದೆ. 149 ರೂಪಾಯಿ ಮೇಲ್ಪಟ್ಟ ಯೋಜನೆಗಳಿಗೆ ಈ ಆಫರ್ ಲಭ್ಯವಿದೆ.
ಜಿಯೋ 4ಜಿ ಫೋನ್ ಖರೀದಿ ಮಾಡಿ 198 ರೂಪಾಯಿ ಹಾಗೂ 299 ರೂಪಾಯಿ ಪ್ಲಾನ್ ರೀಚಾರ್ಜ್ ಮಾಡುವ ಗ್ರಾಹಕರಿಗೆ ಕಂಪನಿಯಿಂದ 2200 ರೂಪಾಯಿ ಕ್ಯಾಶ್ ಬ್ಯಾಕ್ ನೀಡಲಿದೆ. ಕೆಲವೊಂದು ಷರತ್ತುಗಳು ಅನ್ವಯವಾಗಲಿವೆ.

ಇನ್ನು 398 ರೂಪಾಯಿ ರೀಚಾರ್ಜ್ ಮಾಡಿದ ಗ್ರಾಹಕರಿಗೆ 300 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ. ಗ್ರಾಹಕರು ಪೇಟಿಯಂ, ಪೋನ್ಪೇ, ಅಮೆಜಾನ್ ಪೇನಲ್ಲಿ ರಿಚಾರ್ಜ್ ಮಾಡಿದ್ರೆ ಮಾತ್ರ ಕ್ಯಾಶ್ ಬ್ಯಾಕ್ ಸಿಗಲಿದೆ.
ಗ್ರಾಹಕರು ಫೆಸ್ಟಿವಲ್ ಗಿಫ್ಟ್ ಕಾರ್ಡ್ ಕೂಡ ಖರೀದಿ ಮಾಡಬಹುದಾಗಿದೆ. ಇದರಲ್ಲಿ 6 ತಿಂಗಳವರೆಗೆ ಅನಿಯಮಿತ ವಾಯ್ಸ್ ಕಾಲ್ ಹಾಗೂ ಡೇಟಾ ಸೌಲಭ್ಯ ಸಿಗಲಿದೆ. ಜಿಯೋ ಫೋನ್ 2 ವನ್ನು ಪೇಟಿಎಂ ಮೂಲಕ ಖರೀದಿ ಮಾಡಿದ್ರೆ 200 ರೂಪಾಯಿ ಕ್ಯಾಶ್ ಬ್ಯಾಕ್ ಸಿಗಲಿದೆ.
1699 ರು ವಾರ್ಷಿಕ ಯೋಜನೆಯನ್ನು ಪ್ರಕಟಿಸಿದ್ದು,ಅನಿಯಮಿತ 4ಜಿ ಡೇಟಾ ಹಾಗೂ ವಾಯ್ಸ್ ಕಾಲ್ ಒಂದು ವರ್ಷದ ವ್ಯಾಲಿಡಿಟಿ ಅಂದರೆ ಮುಂದಿನ ದೀಪಾವಳಿ ತನಕ ಇರಲಿದೆ.












Click it and Unblock the Notifications