ಆದಾಯದ ಮಾರುಕಟ್ಟೆ ಪಾಲು ಬಲಪಡಿಸಿಕೊಂಡ ಜಿಯೋ

ಬೆಂಗಳೂರು, ನವೆಂಬರ್ 26: ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಜಿಯೋ ಇನ್ಫೋಕಾಮ್ ತನ್ನ ಆದಾಯದ ಮಾರುಕಟ್ಟೆ ಪಾಲನ್ನು (ರೆವೆನ್ಯೂ ಮಾರ್ಕೆಟ್ ಶೇರ್, RMS)ಬಲಪಡಿಸಿಕೊಂಡಿದೆ. ಈ ಅಂಕದಲ್ಲಿ ಮೂರನೇ ಸ್ಥಾನದಲ್ಲಿರುವ ವೊಡಾಫೋನ್-ಐಡಿಯಾ ತುಲನೆಯಲ್ಲಿ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಂಡಿದೆ. ಅಗ್ರಸ್ಥಾನದಲ್ಲಿ ಭಾರ್ತಿ ಏರ್ ಟೆಲ್ ಮುಂಡುವರೆದಿದೆ.

ಪ್ರಮುಖ ಮಹಾನಗರಗಳು ಹಾಗೂ ಗ್ರಾಮೀಣ ಮಾರುಕಟ್ಟೆಯಾದ್ಯಂತ ಸದೃಢ ಬೆಳವಣಿಗೆ ಜಿಯೋದ ಈ ಸಾಧನೆಗೆ ನೆರವಾಗಿದ್ದು, ವೊಡಾಫೋನ್ ಐಡಿಯಾ ಬಹುತೇಕ ವೃತ್ತಗಳಲ್ಲಿ ತನ್ನ ನೆಲೆ ಕಳೆದುಕೊಳ್ಳುವುದನ್ನು ಮುಂದುವರೆಸಿದೆ.

ಸೆಪ್ಟೆಂಬರ್ ತ್ರೈಮಾಸಿಕದ ಹೊಂದಿಸಲಾದ ಒಟ್ಟು ಆದಾಯದಲ್ಲಿ (ಎಜಿಆರ್) 60 ಬೇಸಿಸ್ ಪಾಯಿಂಟುಗಳ (ಬಿಪಿಎಸ್) ಸದೃಢ ಕ್ರಮಾನುಗತ ಹೆಚ್ಚಳವನ್ನು ವರದಿಮಾಡಿದ ಜಿಯೋ ಆದಾಯದ ಮಾರುಕಟ್ಟೆ ಪಾಲು (ಆರ್ ಎಂ ಎಸ್) 29% ತಲುಪಿದೆ.

Jio Strengthens its Revenue Market Share

ಹಿಂದಿನ ತ್ರೈಮಾಸಿಕದ ಹೋಲಿಕೆಯಲ್ಲಿ 40 ಬಿಪಿಎಸ್ ಇಳಿಕೆ ಕಂಡ ಭಾರ್ತಿ ಏರ್ ಟೆಲ್ ನ ಆರ್ ಎಂ ಎಸ್ (ಟಾಟಾ ಟೆಲಿಸರ್ವಿಸಸ್ ಸೇರಿ) 51.7% ತಲುಪಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವೊಡಾಫೋನ್-ಐಡಿಯಾದ ಆರ್ ಎಂ ಎಸ್ ಕೂಡ 30 ಬೇಸಿಸ್ ಪಾಯಿಂಟುಗಳ (ಬಿಪಿಎಸ್) ಕ್ರಮಾನುಗತ ಇಳಿಕೆಯೊಂದಿಗೆ 15.6%ಗೆ ತಲುಪಿದ್ದು, ಅದು ಮುಂಚೂಣಿ ಮಾರುಕಟ್ಟೆಗಳೂ ಸೇರಿದಂತೆ 22ರಲ್ಲಿ 20 ವೃತ್ತಗಳಲ್ಲಿ ಮಾರುಕಟ್ಟೆ ಪಾಲನ್ನು ಕಳೆದುಕೊಂಡಿದ್ದು ಇದಕ್ಕೆ ಕಾರಣವಾಗಿದೆ ಎಂದು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸಂಗ್ರಹಿಸಿದ ಆರ್ಥಿಕ ದತ್ತಾಂಶದಿಂದ ತಿಳಿದುಬಂದಿದೆ.

ಒಟ್ಟು ಆದಾಯದ ಆಧಾರದ ಮೇಲೆ ವೊಡಾಫೋನ್-ಐಡಿಯಾ ತುಲನೆಯಲ್ಲಿ (ಅವರು ತಮ್ಮ ಮೊಬಿಲಿಟಿ ವಹಿವಾಟನ್ನು ಕ್ರೋಢೀಕರಿಸಿದ ನಂತರವೂ) ಜಿಯೋ ಆರ್ ಎಂ ಎಸ್ ಮುನ್ನಡೆ ಎರಡನೇ ಆರ್ಥಿಕ ತ್ರೈಮಾಸಿಕದಲ್ಲಿ 640 ಬಿಪಿಎಸ್ ನಷ್ಟಿದೆ. ಜೂನ್ ತ್ರೈಮಾಸಿಕದಲ್ಲಿ, ಜಿಯೋ ಹಾಗೂ ವೊಡಾ-ಐಡಿಯಾಗಳ ಆರ್ ಎಂ ಎಸ್ ಅನುಕ್ರಮವಾಗಿ 24.5% ಹಾಗೂ 19.5% ಆಗಿತ್ತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+