ರಿಲಯನ್ಸ್ ಫೋನ್ ಗ್ರಾಹಕರಿಗೆ ಮತ್ತೊಂದು ಕೊಡುಗೆ

ಬೆಂಗಳೂರು, ಜನವರಿ 17: ಕಡಿಮೆ ಬೆಲೆಯ ಪ್ರೀಪೇಯ್ಡ್ ಯೋಜನೆಗಳ ಪೈಕಿ ರಿಲಯನ್ಸ್ ಜಿಯೋ ಹಾಗೂ ಭಾರ್ತಿ ಏರ್ ಟೆಲ್ ಸಂಸ್ಥೆಗಳು ಗ್ರಾಹಕರಿಗೆ ಹೊಸ ಹೊಸ ಕೊಡುಗೆಗಳನ್ನು ನೀಡುತ್ತಿವೆ.

ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಇನ್ನೊಂದು ಆಕರ್ಷಕ ಆಫರ್ ನೀಡಿದೆ. ಹೊಚ್ಚ ಹೊಸ ಹ್ಯಾಪಿ ನ್ಯೂ ಇಯರ್ 2018 ಆಫರ್ ನಲ್ಲಿ ಮಾಸಿಕ ಕೇವಲ 149 ರೂ.ಗಳಿಗೆ ಪ್ರತಿದಿನ 1 ಜಿಬಿ ಡಾಟಾವನ್ನು ಜಿಯೋ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ 153 ರು ಗಳ ಪ್ರೀಪೇಯ್ಡ್ ಪ್ಯಾಕೇಜಿಗೆ ಹೆಚ್ಚುವರಿಯಾಗಿ ಇಂಟರ್ನೆಟ್ ಡೇಟಾ ನೀಡುತ್ತಿದೆ.

153 ರು ಗಳ ಹೊಸ ಪ್ಲಾನ್ ನಲ್ಲಿ ದಿನಕ್ಕೆ 1 ಜಿಬಿ ಡೇಟಾ ಸಿಗಲಿದೆ. ಜೊತೆಗೆ ಇದು 28 ದಿನಗಳ ವ್ಯಾಲಿಡಿಟಿಯನ್ನೂ ಹೊಂದಿದೆ. ಪ್ರಿಪೇಯ್ಡ್ ಬಳಕೆದಾರರು ಈ ಕೊಡುಗೆಯ ಲಾಭ ಪಡೆಯಬಹುದು. ಬಳಕೆದಾರರಿಗೆ ಅನಿಯಮಿತ ಕರೆ ಸೌಲಭ್ಯವಿದೆ. ಜೊತೆಗೆ ದಿನಕ್ಕೆ 100 ಉಚಿತ ಎಸ್ ಎಂ ಎಸ್ ಗಳನ್ನೂ ಜಿಯೋ ನೀಡಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ 1 ಜಿಬಿ ಪ್ಯಾಕ್‍ಗಳು ಎರಡು ಹೆಚ್ಚುವರಿ ಆಯ್ಕೆಗಳೊಂದಿಗೆ ವರ್ಧನೆಗೊಳ್ಳಲಿವೆ ಜತೆಗೆ 50 ಶೇಕಡಾ ಹೆಚ್ಚು ಡಾಟಾ ಅಥವಾ ಸರ್ ಪ್ರೈಸ್ ಪ್ಲಾನ್ ಮೇಲೆ 50 ರೂ. ರಿಯಾಯ್ತಿ ದೊರಕಲಿದೆ.

153 ರೂಪಾಯಿ ರೀಚಾರ್ಜ್

153 ರೂಪಾಯಿ ರೀಚಾರ್ಜ್

153 ರೂಪಾಯಿ ರೀಚಾರ್ಜ್ ಮಾಡಿದ ಗ್ರಾಹಕರಿಗೆ ಪರಿಷ್ಕೃತ ಆಫರ್ ಲಭ್ಯವಾಗಲಿದೆ. ಪ್ರತಿದಿನ 1 ಜಿಬಿ ಹೈಸ್ಪೀಡ್ ಡೇಟಾವನ್ನು ಗ್ರಾಹಕರು ಬಳಸಬಹುದು. 1 ಜಿಬಿ ಖಾಲಿಯಾದ ಬಳಿಕ ಇಂಟರ್ನೆಟ್ ಸ್ಪೀಡ್ 64 kbps ಆಗಲಿದೆ. ಇದಕ್ಕೂ ಮೊದಲು 153 ರೂ. ಪ್ಲಾನ್ ನಲ್ಲಿ 500 ಎಂಬಿ ಡೇಟಾ ನೀಡಲಾಗುತ್ತಿತ್ತು.

ಬಳಕೆದಾರರಿಗೆ ಅನಿಯಮಿತ ಕರೆ ಸೌಲಭ್ಯವಿದೆ. ಜೊತೆಗೆ ದಿನಕ್ಕೆ 100 ಉಚಿತ ಎಸ್ ಎಂ ಎಸ್ ಗಳನ್ನೂ ಜಿಯೋ ನೀಡಿದೆ.

ರಿಲಯನ್ಸ್ ಜಿಯೋ ಫೀಚರ್ ಫೋನ್

ರಿಲಯನ್ಸ್ ಜಿಯೋ ಫೀಚರ್ ಫೋನ್

ರಿಲಯನ್ಸ್ ಜಿಯೋ ಫೀಚರ್ ಫೋನನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ, ಭದ್ರತಾ ಠೇವಣಿಯಾಗಿ ಒಂದು ಬಾರಿ 1500 ರೂಪಾಯಿ ನೀಡಬೇಕಾಗುತ್ತದೆ. ಮೂರು ವರ್ಷಗಳ ನಂತರ ಗ್ರಾಹಕ ಈ ಫೋನನ್ನು ವಾಪಸ್ ಕೂಡಾ ಮಾಡಬಹುದಾಗಿದೆ. ಪ್ರತಿ ತಿಂಗಳು 153 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಮಾತ್ರ ಕಂಪನಿ ನೀಡುವ ಲಾಭವನ್ನು ನೀವು ಪಡೆಯಬಹುದಾಗಿದೆ.

299 ರೂ. ನ ರೀಚಾರ್ಜ್ ಯೋಜನೆ

299 ರೂ. ನ ರೀಚಾರ್ಜ್ ಯೋಜನೆ

299 ರೂ. ನ ಪ್ಲಾನ್ : ಅಧಿಕ ಡಾಟಾ ಬಳಕೆದಾರರಿಗೆ, ಉಚಿತ ಧ್ವನಿ, ಅನಿಯಮಿತ ಡಾಟಾ (2 ಜಿಬಿ ಹೈ ಸ್ಪೀಡ್ 4ಜಿ ಡಾಟಾ ಪ್ರತಿದಿನ), ಅನಿಯಮಿತ ಎಸ್‍ಎಂಎಸ್ ಮತ್ತು ಪ್ರೀಮಿಯಂ ಜಿಯೋ ಆಪ್‍ಗಳ ಲಭ್ಯತೆ ಎಲ್ಲಾ ಜಿಯೋ ಪ್ರೈಮ್ ಸದಸ್ಯರಿಗೆ 28 ದಿನಗಳ ಕಾಲ ಒದಗಿಸಲಿದೆ.

ಜಿಯೋ ಪ್ರೈಮ್ ಸದಸ್ಯರಿಗೆ

ಜಿಯೋ ಪ್ರೈಮ್ ಸದಸ್ಯರಿಗೆ

199 ರೂ. ನ ಪ್ಲಾನ್ : ಉಚಿತ ಧ್ವನಿ, ಅನಿಯಮಿತ ಡಾಟಾ (1.2 ಜಿಬಿ ಹೈ ಸ್ಪೀಡ್ 4ಜಿ ಡಾಟಾ ಪ್ರತಿ ದಿನ), ಅನಿಯಮಿತ ಎಸ್‍ಎಂಎಸ್ ಮತ್ತು ಪ್ರೀಮಿಯಂ ಜಿಯೋ ಆಪ್‍ಗಳ ಚಂದಾವನ್ನು ಎಲ್ಲಾ ಜಿಯೋ ಪ್ರೈಮ್ ಸದಸ್ಯರಿಗೆ 28 ದಿನಗಳ ಕಾಲ ಒದಗಿಸಲಿದೆ.

149 ರೂ.ಗಳಿಗೆ ಪ್ರತಿದಿನ 1 ಜಿಬಿ ಡಾಟಾ

149 ರೂ.ಗಳಿಗೆ ಪ್ರತಿದಿನ 1 ಜಿಬಿ ಡಾಟಾ

ಕೇವಲ 149 ರೂ.ಗಳಿಗೆ ಪ್ರತಿದಿನ 1 ಜಿಬಿ ಡಾಟಾವನ್ನು ಜಿಯೋ ನೀಡಲಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ 1 ಜಿಬಿ ಪ್ಯಾಕ್‍ಗಳು ಎರಡು ಹೆಚ್ಚುವರಿ ಆಯ್ಕೆಗಳೊಂದಿಗೆ ವರ್ಧನೆಗೊಳ್ಳಲಿವೆ ಜತೆಗೆ 50 ಶೇಕಡಾ ಹೆಚ್ಚು ಡಾಟಾ ಅಥವಾ ಸರ್ ಪ್ರೈಸ್ ಪ್ಲಾನ್ ಮೇಲೆ 50 ರೂ. ರಿಯಾಯ್ತಿ ದೊರಕಲಿದೆ. ಇದರಿಂದಾಗಿ ಜಿಯೋ ಗ್ರಾಹಕರಿಗೆ ತಿಂಗಳಿಗೆ ಕೇವಲ 149 ರೂ.ಗೆ ಅನಿಯಮಿತ ಮಾಸಿಕ ಪ್ಯಾಕ್ (ಪ್ರತಿದಿನ 1 ಜಿಬಿ) ದೊರೆಯಲಿದ್ದು, ಇದು ಟೆಲಿಕಾಂ ಉದ್ಯಮದಲ್ಲೇ ಅತ್ಯಂತ ಕಡಿಮೆಯ ಟ್ಯಾರಿಫ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+