ಸಾಲ ತೀರಿಸಲಾಗದೆ ಸಂಕಷ್ಟದಲ್ಲಿ ಸಿಲುಕಿದ ಜೆಟ್ ಏರ್‌ವೇಸ್

ನವದೆಹಲಿ, ಆಗಸ್ಟ್ 14: ಭಾರತದ ಎರಡನೆಯ ಅತಿ ದೊಡ್ಡ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್ ಸಾಲದ ಸುಳಿಯಲ್ಲಿ ಸಿಲುಕಿದ್ದು, ಮರುಪಾವತಿ ಮಾಡಲು ಹಣವಿಲ್ಲದೆ ಹೆಣಗಾಡುತ್ತಿದೆ.

72ನೇ ಸ್ವಾತಂತ್ರ್ಯ ದಿನಾಚರಣೆ 2018

ಮುಂಬರುವ ಹಣಕಾಸು ವರ್ಷಕ್ಕೆ ಕನಿಷ್ಠ 50 ಮಿಲಿಯನ್ ಡಾಲರ್ ಲಾಭದ ಗುರಿಯನ್ನೂ ತಲುಪುವುದು ಕಷ್ಟ ಎಂದು ಏರ್‌ವೇಸ್ ಸಂಸ್ಥೆ ಹೇಳಿಕೊಂಡಿದೆ.

ತನ್ನ ಮೇಲಿರುವ 185 ಮಿಲಿಯನ್ ಡಾಲರ್ ಸಾಲದ ಹೊರೆಯನ್ನು ಮನ್ನಾ ಮಾಡುವಂತೆ ಅದು ವಿದೇಶಿ ಸಾಲಗಾರರ ಒಕ್ಕೂಟಕ್ಕೆ ಪತ್ರ ಬರೆದು ಮನವಿ ಮಾಡಿದೆ.

Jet Airways seeking loan waive from overseas lenders

ಯುಎಇ ಮೂಲದ ಅನೇಕ ಬ್ಯಾಂಕುಗಳು ಈ ಸಾಲಗಾರರ ಒಕ್ಕೂಟದಲ್ಲಿದ್ದು, ಅವು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಏರುತ್ತಿರುವ ವಿಮಾನ ಇಂಧನ ಬೆಲೆ, ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತದ ಕಾರಣ ಭಾರತದ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆ ವೆಚ್ಚ ಹೆಚ್ಚಾಗಿ ನಷ್ಟಕ್ಕೆ ಸಿಲುಕಿವೆ. ಕಳೆದ 12 ತಿಂಗಳಿನಲ್ಲಿ ವಿಮಾನ ಇಂಧನ ಬೆಲೆ ಶೇ 40ರಷ್ಟು ಹೆಚ್ಚಾಗಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಶೇ 8.2ರಷ್ಟು ತಗ್ಗಿದೆ.

ಆದರೆ, ಸಾಲದ ಕಾರಣ ತನ್ನ ಶೇರಗಳನ್ನು ಮಾರಾಟ ಮಾಡುವ ಹಾಗೂ ಹಾರಾಟ ಸ್ಥಗಿತಗೊಳಿಸುವ ವರದಿಗಳನ್ನು ಜೆಟ್ ಏರ್‌ಲೈನ್ಸ್ ನಿರಾಕರಿಸಿದೆ.

ಸಾಲಗಾರರಿಗೆ ನೀಡಬೇಕಾಗಿರುವ ಮರುಪಾವತಿ ಹಣದ ಬಿಡುಗಡೆಯಲ್ಲಿ ವಿಳಂಬ ಆಗುವುದಿಲ್ಲ. ಮಿಗಿಲಾಗಿ ನಮ್ಮ ಬ್ಯಾಂಕರ್‌ಗಳು ಸಾಲ ಮರುಪಾವತಿಗೆ ಕಾಲಾವಕಾಶ ವಿಸ್ತರಿಸಿವೆ. ಕಳೆದ ಕೆಲವು ವರ್ಷಗಳಲ್ಲಿ ಕಂಪೆನಿಯು ಯಾವುದೇ ಸಾಲ ಮರುಪಾವತಿಯನ್ನು ಬಾಕಿ ಉಳಿಸಿಕೊಂಡ ಉದಾಹರಣೆಯೇ ಇಲ್ಲ ಎಂದು ಜೆಟ್ ಏರ್‌ವೇಸ್ ವಕ್ತಾರರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+