• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಪಾನ್‌ನ ಬಿಯರ್ ತಯಾರಕ ಕಿರಿನ್ ಹೋಲ್ಡಿಂಗ್ಸ್ ಭಾರತದ ಬೀರಾದಲ್ಲಿ $30 ಮಿಲಿಯನ್ ಹೂಡಿಕೆ

|

ನವದೆಹಲಿ, ಜನವರಿ 04: ಜಪಾನ್‌ನ ಖ್ಯಾತ ಬಿಯರ್ ತಯಾರಕ ಕಂಪನಿಯಾದ ಕಿರಿನ್ ಹೋಲ್ಡಿಂಗ್ಸ್‌ ನವದೆಹಲಿ ಮೂಲದ ಬಿ9 ಪಾನೀಯಗಳಲ್ಲಿ(ಬೆವರೆಜಸ್) 30 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ಕಂಪನಿ ಸೋಮವಾರ ಪ್ರಕಟಿಸಿದೆ.

ಜಪಾನ್‌ನ ಕಂಪನಿಯು ಬಿ9 ಕಂಪನಿಯಲ್ಲಿ ಶೇಕಡಾ 10ಕ್ಕಿಂತ ಕಡಿಮೆ ಪಾಲನ್ನು ಪಡೆದುಕೊಳ್ಳಲಿದೆ ಎಂದು ದೇಶದ ಜನಪ್ರಿಯ ಕ್ರಾಫ್ಟ್‌ ಬಿಯರ್ ತಯಾರಕ ಬೀರಾ ಸಿಇಒ ಅಂಕುರ್ ಜೈನ್ ರಾಯಿಟರ್ಸ್‌ಗೆ ತಿಳಿಸಿದರು.

ಚೀನಾದಲ್ಲಿ 10 ಬಾಟಲ್ ಬಿಯರ್ ಸೇವಿಸಿದ ವ್ಯಕ್ತಿಯ ಗತಿ ಏನಾಯ್ತು..?

2015 ರಲ್ಲಿ ಪ್ರಾರಂಭವಾದ ಬೀರಾ, ಭಾರತದ ಬಿಯರ್ ಉದ್ಯಮದಲ್ಲಿ ಅತ್ಯಂತ ಚಿಕ್ಕದಾದ ಪಾಲನ್ನು ಹೊಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕ್ರಾಫ್ಟ್‌ ಬಿಯರ್‌ ಹೆಚ್ಚು ಜನಪ್ರಿಯಗೊಂಡಿದ್ದು, ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿನ ಬಿಯರ್ ಮಾರುಕಟ್ಟೆಯಲ್ಲಿ ಶೇಕಡಾ 5 ರಿಂದ 10ರಷ್ಟು ಪಾಲನ್ನು ಹೊಂದಿದೆ ಎಂದು ಬೀರಾ ಹೇಳಿದೆ.

ಇನ್ನು ಬೀರಾದಲ್ಲಿ ಹೂಡಿಕೆಗೆ ಮುಂದಾಗಿರುವ ಜಪಾ್‌ನ ಕಿರಿನ್ ಹೋಲ್ಡಿಂಗ್ಸ್‌ ವಿಶ್ವದಲ್ಲೇ ತನ್ನದ ಮಾರುಕಟ್ಟೆ ಪಾಲನ್ನು ಹೊಂದಿದ್ದರೂ, ಸಹ 2017ರಲ್ಲಿ ತನ್ನ ಲಾಭದಾಯಕವಲ್ಲದ ಬ್ರೆಜಿಲಿಯನ್ ಘಟಕವನ್ನು ಮಾರಾಟ ಮಾಡಿತು.

ಅಂಕಿ-ಅಂಶಗಳ ಪೂರೈಕೆದಾರ ಪಿಚ್‌ಬುಕ್ ಅಂದಾಜಿನ ಪ್ರಕಾರ ಬೀರಾ ಕಂಪನಿಯ ಮೌಲ್ಯವು 2018 ರಲ್ಲಿ 210 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಅಮೆರಿಕಾ ಮೂಲದ ಸಿಕ್ವೊಯ ಕ್ಯಾಪಿಟಲ್ ಕಂಪನಿಯಲ್ಲಿ ಸುಮಾರು ಶೇಕಡಾ 45ರಷ್ಟು ಪಾಲನ್ನು ಹೊಂದಿದ್ದರೆ, ಸಿಇಒ ಜೈನ್ ಮತ್ತು ಅವರ ಕುಟುಂಬವು ಸುಮಾರು ಶೇಕಡಾ 30ರಷ್ಟು ನಷ್ಟು ಪಾಲನ್ನು ಹೊಂದಿದೆ.

English summary
Japan's beer maker Kirin Holdings will invest $30 million in New Delhi-based B9 Beverages
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X