ಸಿಗರೇಟ್ ಮೇಲೆ ಹೆಚ್ಚುವರಿ ಸೆಸ್, ತುಟಿ ಸುಡಲಿದೆ ಎಚ್ಚರ!

ನವದೆಹಲಿ, ಸೆಪ್ಟೆಂಬರ್ 26: ಸಿಗರೇಟು ಹಾಗೂ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿಯಾಗಿ ಸೆಸ್ (ಮೇಲ್ತೆರಿಗೆ) ಹಾಕಲು ಐಟಿಸಿ ನಿರ್ಧರಿಸಿದೆ. ಸೆಪ್ಟೆಂಬರ್ 28ರಂದು ನಡೆಯಲಿರುವ ಮಹತ್ವದ ಸರಕು ಸೇವಾ ತೆರಿಗೆ(ಜಿಎಸ್ ಟಿ) ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳುವ ಸಾಧ್ಯತೆಯಿದೆ.

ಸಿಗರೇಟ್ ಮೇಲೆ ಶೇ. 5-6 ವಿಪತ್ತು ನಿರ್ವಹಣಾ ಮೇಲ್ತೆರಿಗೆ ವಿಧಿಸುವ ಬಗ್ಗೆ ಜಿಎಸ್​ಟಿ ಮಂಡಳಿ ನಿರ್ಧಾರ ಕೈಗೊಳ್ಳಬಹುದು. ಇದರಿಂದ ಎಲ್ಲಾ ಸಿಗರೇಟ್ ಗಳ ಬೆಲೆ 1 ರಿಂದ 2 ರು ಹೆಚ್ಚಳ ಸಾಧ್ಯತೆಯಿದೆ.

ಈ ರೀತಿ ಸಂಗ್ರಹವಾಗುವ ಹೆಚ್ಚುವರಿ ಹಣವನ್ನು ಪ್ರವಾಹದಿಂದ ಕಂಗೆಟ್ಟಿರುವ ಕೇರಳ ರಾಜ್ಯ ಮರು ನಿರ್ಮಾಣಕ್ಕೆ ಬಳಸಲು ನಿರ್ಧರಿಸಲಾಗಿದೆ.

ITC may increase disaster cess on Cigarettes

ಸಿಗರೇಟ್​ಗಳ ಮೇಲೆ ಶೇ. 5 ರಿಂದ 6 ರಷ್ಟು ವಿಪತ್ತು ಮೇಲ್ತೆರಿಗೆ(disaster cess) ವಿಧಿಸುವ ಬಗ್ಗೆ ಇನ್​ವೆಸ್ಟ್​ಮೆಂಟ್ ಕಂಪನಿ ಸಿಎಲ್​ಎಸ್​ಎ ವರದಿ ತಯಾರಿಸಿ, ಜಿಎಸ್​ಟಿ ಮಂಡಳಿಗೆ ಸಲ್ಲಿಸಿದೆ.

ಸಿಗರೇಟ್, ಜರ್ದಾ ಮತ್ತು ಪಾನ್ ಖೈನಿ ಇನ್ನಿತರ ತಂಬಾಕು ಉತ್ಪನ್ನಗಳ ಮೇಲೆ ಮೇಲ್ತೆರಿಗೆ ವಿಧಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಬಳಕೆದಾರರ ಆರೋಗ್ಯಕ್ಕೆ ಹಾನಿ ಉಂಟು ಮಾಡುವ ಸಿಗರೇಟ್​ಗಳ ಮೇಲೆ ಶೇ. 20 ಮತ್ತು ಜರ್ದಾ ಮೇಲೆ ಶೇ. 250 ಮೇಲ್ತೆರಿಗೆ ವಿಧಿಸಬೇಕು ಎಂದು ಹೇಳಿತ್ತು. ಆದರೆ, ಸರ್ಕಾರ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹಾಗೂ ತೆರಿಗೆ ವಿಧಿಸುವ ಪ್ರಮಾಣದ ಬಗ್ಗೆ ಜಿಎಸ್ ಟಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲು ಯೋಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+