ವೀಸಾ ಉಲ್ಲಂಘಿಸಿದ ಇನ್ಫೋಸಿಸ್ ಗೆ 6.5 ಕೋಟಿ ರು. ದಂಡ

ಬೆಂಗಳೂರು, ಜೂನ್ 23 : ವೀಸಾ ನಿಯಮ ಉಲ್ಲಂಘಿಸಿ ವಿದೇಶೀ ನೌಕರರನ್ನು ಅಮೆರಿಕದಲ್ಲಿ ನೇಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಐಟಿ ದಿಗ್ಗಜ ಇನ್ಫೋಸಿಸ್ ಗೆ ಅಮೆರಿಕದ ನ್ಯೂಯಾರ್ಕ್ ರಾಜ್ಯ ಸರ್ಕಾರ 6.5 ಕೋಟಿ ರು. (1 ಮಿಲಿಯನ್ ಡಾಲರ್) ದಂಡ ವಿಧಿಸಿದೆ.

ಬಿ1 ವೀಸಾ ನಿಯಮಕ್ಕೆ ವಿರುದ್ಧವಾಗಿ ಹೊರಗುತ್ತಿಗೆ ಸೇವೆಗಳಲ್ಲಿ ಸತತವಾಗಿ ವಿದೇಶೀ ಐಟಿ ನೌಕರರನ್ನು ನೇಮಕ ಮಾಡಿಕೊಂಡ ಅರೋಪದ ಕಾರಣಕ್ಕೆ ಇನ್ಫೋಸಿಸ್ 6.5 ಕೋಟಿ ರು. ದಂಡ ತೆರಲು ಒಪ್ಪಿಕೊಂಡಿದೆ ಎಂದು ನ್ಯೂಯಾರ್ಕ್ ಅಟಾರ್ನಿ ಜನರಲ್‌ ಎರಿಕ್ ಶ್ನೈಡರ್ಮನ್ ಹೇಳಿದ್ದಾರೆ.

Infosys To Pay $1 Million Fine To New York In Visa Violation Case

ಯಾವುದೇ ಕ್ರಿಮಿನಲ್‌ ಅಥವಾ ಸಿವಿಲ್‌ ಪ್ರಕರಣ ಇಲ್ಲದೇ ಸಂಧಾನದ ಮೂಲಕ ದಂಡ ತೆರುವ ಒಪ್ಪಂದಕ್ಕೆ ಬರಲಾಗಿದೆ ಎಂದು ಇನ್ಫೋಸಿಸ್ ಹೇಳಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಆದರೆ 4 ವರ್ಷ ಹಿಂದೆ 215 ಕೋಟಿ ರು. ತೆರಲು ಇಸ್ಫೋಸಿಸ್ ಒಪ್ಪಿತ್ತು. ಆದರೆ, ಇಷ್ಟುದಂಡ ತೆರಬೇಕೆಂದರೆ ತನಿಖೆಯಲ್ಲಿ ಆರೋಪ ಸಾಬೀತಾಗಬೇಕೆಂಬ ಷರತ್ತು ವಿಧಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+