ಇನ್ಫೋಸಿಸ್ ನಿಂದ 20 ಸಾವಿರ ನೇಮಕಾತಿ ಘೋಷಣೆ!

ಬೆಂಗಳೂರು, ಅ.13: ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ವರದಿ ಫಲಿತಾಂಶ ನಿರೀಕ್ಷೆಗೂ ಮೀರಿ ಲಾಭ ತಂದುಕೊಟ್ಟ ಬೆನ್ನಲ್ಲೇ ಇನ್ಫೋಸಿಸ್ ಶುಭ ಸುದ್ದಿ ನೀಡಿದೆ. ಈ ವರ್ಷದಲ್ಲಿ 20,000 ಹೊಸ ನೇಮಕಾತಿ ನಡೆಸುವುದಾಗಿ ಸಿಇಒ ವಿಶಾಲ್ ಸಿಕ್ಕಾ ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ 20,000 ಹೊಸ ನೇಮಕಾತಿಯನ್ನು ಕ್ಯಾಂಪಸ್ ಸಂದರ್ಶನ ಮೂಲಕ ಮಾಡಿಕೊಳ್ಳಲಾಗುವುದು, ಅದರೆ, ಎಲ್ಲರಿಗೂ ಆರಂಭದ ಸಂಬಳ 3.25 ಲಕ್ಷ ರು ನಷ್ಟೇ ಸಿಗಲಿದೆ. ಹೊಸ ಉದ್ಯೋಗಿಗಳಿಗೆ ಕಳೆದ ವರ್ಷ ನೀಡಲಾಗುತ್ತಿದ್ದ ಸಂಬಳದ ಮೊತ್ತವನ್ನು ಈ ವರ್ಷವೂ ಮುಂದುವರೆಸಲಾಗುತ್ತದೆ ಎಂದು ಇನ್ಫೋಸಿಸ್ ಹೇಳಿದೆ. [ಸಿಎಫ್ಒ ರಾಜೀವ್ ರಾಜೀನಾಮೆ]

Infosys to Hire 20,000 Engineers are through Campus Recruitment

ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ 20,000 ಹೊಸ ನೇಮಕಾತಿ ಜೊತೆಗೆ 20,000 ಸಂಖ್ಯೆಯ ಇಂಟರ್ನ್ ಶಿಪ್(ಕೈಗಾರಿಕಾ ತರಬೇತಿ) ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ತರಬೇತಿಗೆ ಬರುವ ಅಭ್ಯರ್ಥಿಗಳ ಸ್ಟೈಪೆಂಡ್ 4,000 ರು ನಿಂದ 10,000 ರು ಗೆ ಏರಿಸಲಾಗಿದೆ. [ಇನ್ಫೋಸಿಸ್, ವಿಪ್ರೋಗೆ ಕಾದಿದೆ ಅಪಾಯ!]

ಭಾರತದ ಸಾಫ್ಟ್ ವೇರ್ ಉದ್ಯಮದ ಗುಣಮಟ್ಟ ಕಾಯಬಲ್ಲ ಇಂಜಿನಿಯರ್ ಗಳನ್ನು ರೂಪಿಸುವುದು ನಮ್ಮ ಉದ್ದೇಶ. ನಮ್ಮಲ್ಲಿ ತರಬೇತಿ ಹೊಂದಿದವರು ಎಲ್ಲಾ ಬಗೆಯ ವಾತಾವರಣ, ಒತ್ತಡಕ್ಕೆ ಒಗ್ಗಿಕೊಂಡು ಕ್ರಿಯಾಶೀಲರಾಗಿ ಹೆಚ್ಚಿನ ಕಾರ್ಯಕ್ಷಮತೆಯಿಂದ ಕೆಲಸ ನಿರ್ವಹಿಸುವಂತಾಗಬೇಕು ಎಂದು ಸಂಸ್ಥೆಯ ಸಿಒಒ ಪ್ರವೀಣ್ ರಾವ್ ಹೇಳಿದ್ದಾರೆ.

ಎರಡನೇ ತ್ರೈಮಾಸಿಕ (ಜುಲೈನಿಂದ ಸೆಪ್ಟೆಂಬರ್ ತನಕ) ದಲ್ಲಿ ರುಪಾಯಿ ಆದಾಯ (ತ್ರೈಮಾಸಿಕದಿಂದ ತ್ರೈಮಾಸಿಕ) 15,635 ಕೋಟಿ ರು ನಷ್ಟಿದೆ. ಡಾಲರ್ ಆದಾಯ ಪ್ರಗತಿ ಶೇ 6 ರಷ್ಟು ಏರಿಕೆ ಕಂಡು 2,392 ಮಿಲಿಯನ್ ಡಾಲರ್ ಗೇರಿದೆ. ಇದು ಕಳೆದ 16 ತ್ರೈಮಾಸಿಕ ಅವಧಿಗಳಲ್ಲೇ ಉತ್ತಮವಾಗಿದೆ. [ಇನ್ಫಿಗೆ ನಿರೀಕ್ಷೆಗೂ ಮೀರಿದ ಲಾಭ, ಭರ್ಜರಿ ಆದಾಯ]

ಕಳೆದ ವರ್ಷಕ್ಕೆ ಹೋಲಿಸಿದರೆ ಇನ್ಫೋಸಿಸ್ ನ ಆಟ್ರಿಷನ್ ದರ ಶೇ 21.1ರಿಂದ ಸಾಕಷ್ಟು ಕೆಳಗಿಳಿದು ಶೇ 14.1ರಷ್ಟಿದೆ. ಎರಡನೇ ತ್ರೈಮಾಸಿಕದ ಕೊನೆಗೆ ಇನ್ಫೋಸಿಸ್ 1,87,976 ಉದ್ಯೋಗಿಗಳನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+