ಮುಂದಿನ 2 ವರ್ಷದಲ್ಲಿ ಇನ್ಫೋಸಿಸ್ ನಿಂದ 10 ಸಾವಿರ ಅಮೆರಿಕನ್ನರ ನೇಮಕ
ಎಚ್ 1-ಬಿ ವೀಸಾ ನಿಯಮದಲ್ಲಿ ಅಮೆರಿಕ ಬದಲಾವಣೆ ಮಾಡಿದ ನಂತರ ಸ್ಥಳೀಯರನ್ನೇ ನೇಮಕಾತಿ ಮಾಡಿಕೊಳ್ಳುವ ಮೊದಲ ಘೋಷಣೆ ಬೆಂಗಳೂರು ಮೂಲದ ಐಟಿ ದಿಗ್ಗಜ ಇನ್ಫೋಸಿಸ್ ನಿಂದ ಬಂದಿದೆ. ಹತ್ತು ಸಾವಿರ ಅಮೆರಿಕನ್ನರನ್ನು ನೇಮಿಸಿಕೊಳ್ಳತ್ತದೆ ಇನ್ಫೋಸಿಸ್
ಸ್ಯಾನ್ ಫ್ರಾನ್ಸಿಸ್ಕೋ, ಮೇ 2: ಮುಂದಿನ ಎರಡು ವರ್ಷಗಳಲ್ಲಿ ಹತ್ತು ಸಾವಿರ ಅಮೆರಿಕನ್ನರನ್ನು ನೇಮಿಸಿಕೊಳ್ಳುವ ಯೋಜನೆ ಇದೆ ಎಂದು ಐಟಿ ಕಂಪೆನಿ ಇನ್ಫೋಸಿಸ್ ಮಂಗಳವಾರ ಹೇಳಿದೆ. ಅಮೆರಿಕದಲ್ಲಿ ಎಚ್ 1-ಬಿ ವೀಸಾಗೆ ಸಂಬಂಧಿಸಿದಂತೆ ಆಗಿರುವ ಬದಲಾವಣೆ ನಂತರ ಕಂಪೆನಿ ಈ ಹೇಳಿಕೆ ನೀಡಿದೆ.
ಕೃತಕ ಬುದ್ಧಿಮತ್ತೆ, ಕ್ಲೌಡ್ ತಂತ್ರಜ್ಞಾನ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಇನ್ಫೋಸಿಸ್ ನಾಲ್ಕು ಕಚೇರಿಗಳನ್ನು ತೆರೆಯಲಿದೆ. ಇವುಗಳಲ್ಲಿ ಮೊದಲನೇ ಕಚೇರಿ SLOW CITY ಇಂಡಿಯಾನಾದಲ್ಲಿ ಆರಂಭವಾಗಲಿದೆ.
ವೀಸಾ ನಿಯಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬದಲಾವಣೆ ತಂದ ನಂತರ ಭಾರತೀಯ ಐಟಿ ಕಂಪೆನಿಗಳು ತಮ್ಮ ವ್ಯವಹಾರದ ಮಾದರಿಯನ್ನೇ ಬದಲಿಸಿಕೊಂಡು, ಅಲ್ಲಿನ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುತ್ತಿವೆ.[ವೀಸಾ ಪಡೆಯಲು ಅಡ್ಡದಾರಿ: ಇನ್ಫಿ, ಟಿಸಿಎಸ್ ವಿರುದ್ಧ ಅಮೆರಿಕ ಕಿಡಿ]

"ಅಮೆರಿಕದಲ್ಲಿರುವ ನಮ್ಮ ಗ್ರಾಹಕರಿಗೆ ಭವಿಷ್ಯದಲ್ಲಿ ಡಿಜಿಟಲ್ ತಂತ್ರಜ್ಞಾನದ ಆವಿಷ್ಕಾರ ಹಾಗೂ ಸೇವೆ ಒದಗಿಸಲು ಇನ್ಫೋಸಿಸ್ ಅಮೆರಿಕದ ಹತ್ತು ಸಾವಿರ ತಂತ್ರಜ್ಞಾನ ನೌಕರರನ್ನು ಮುಂದಿನ ಎರಡು ವರ್ಷದಲ್ಲಿ ನೇಮಕ ಮಾಡಿಕೊಳ್ಳಲಿದೆ" ಎಂದು ಕಂಪೆನಿಯ ಸಿಇಒ ವಿಶಾಲ್ ಸಿಕ್ಕಾ ಹೇಳಿದ್ದಾರೆ.
Proud that 10k+ Americans will become Infoscions in the next 2 yrs! Thx @GovHolcomb for a warm Hoosier welcome... https://t.co/yYxB7VY33W
— Vishal Sikka (@vsikka) 2 May 2017
ಉತ್ತರ ಅಮೆರಿಕದ ಮಾರುಕಟ್ಟೆಯೊಂದರಲ್ಲೇ 2016-17ರಲ್ಲಿ ಶೇ 60ರಷ್ಟು ಅಂದರೆ 10.2 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಆದಾಯ ಇನ್ಫೋಸಿಸ್ ಗೆ ಬಂದಿದೆ. ಅಮೆರಿಕದಲ್ಲಿ ಎಚ್1-ಬಿ ವೀಸಾ ಪಡೆಯಲು ಕನಿಷ್ಠ 1,30,000 ಅಮೆರಿಕನ್ ಡಾಲರ್ ಸಂಬಳ ಪಡೆಯುತ್ತಿರಬೇಕು ಎಂಬ ನಿಯಮ ಮಾಡಲಾಗಿದೆ.[ಕಳಪೆ ಸಾಧನೆ: ಇನ್ಫಿ ಸಿಇಒ ಸಿಕ್ಕಾ ಸಂಬಳ ಇಳಿಕೆ]

ಭಾರತೀಯ ಕಂಪೆನಿಗಳಾದ ಟಿಸಿಎಸ್, ಇನ್ಫೋಸಿಸ್, ವಿಪ್ರೋದಂಥವು ಎಚ್1-ಬಿ ವೀಸಾಗಳನ್ನೇ ಅವಲಂಬಿಸಿದ್ದವು. ನಿಯಮ ಬದಲಾವಣೆ ಆದ ನಂತರ ಅಮೆರಿಕದ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲು ಮುಂದಾಗಿವೆ.
ಚುನಾವಣೆಗೂ ಮುನ್ನ ಹಾಗೂ ನಂತರ ಅಮೆರಿಕದ ಔದ್ಯೋಗಿಕ ವಲಯದಲ್ಲಿ ಸ್ಥಳೀಯರಿಗೇ ಮೊದಲ ಆದ್ಯತೆ ಮಂತ್ರ ಜಪಿಸುತ್ತಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹಾಶಯರಿಗೆ ದೊರೆತ ಒಂದು ಸಣ್ಣ ಜಯ ಎಂದು ಭಾವಿಸೋಣವೇ?











Click it and Unblock the Notifications