ಇನ್ಫಿ Q1 ವರದಿ ಪರಿಣಾಮ, ಷೇರುಗಳು ಶೇ 6ರಷ್ಟು ಏರಿಕೆ

ಬೆಂಗಳೂರು, ಜುಲೈ 16: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಇತ್ತೀಚೆಗೆ ತನ್ನ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಿತ್ತು. ಮಾರುಕಟ್ಟೆ ನಿರೀಕ್ಷೆಯ ಮಟ್ಟ ಮುಟ್ಟಲಾಗದಿದ್ದರೂ ತಕ್ಕಮಟ್ಟಿನ ಲಾಭ ಗಳಿಸಿತ್ತು. ಇದಾರ ಪರಿಣಾಮ ಈಗ ಷೇರುಪೇಟೆ ಮೇಲಾಗಿದ್ದು, ಸೋಮವಾರದಂದು ಇನ್ಫಿ ಷೇರುಗಳು ಶೇ 6ರಷ್ಟು ಏರಿಕೆ ಕಂಡಿದೆ.

ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕ ವರದಿಯಲ್ಲಿ ಆರ್ಥಿಕ ಪ್ರಗತಿ ಮಾರ್ಗದರ್ಶಿ ಉತ್ತಮವಾಗಿದ್ದರಿಂದ ಷೇರುಗಳು ಕುಸಿತ ಕಾಣದೆ ಏರಿಕೆ ಕಂಡಿವೆ ಎಂಬ ಅಭಿಪ್ರಾಯ ಬಂದಿದೆ.

Infosys shares climb 6% after Q1 earnings

ಬಿಎಸ್ಇಯಲ್ಲಿ ಜುಲೈರಂದು 1325 ರು ನಂತೆ ಆರಂಭವಾದ ವಹಿವಾಟು ಶೇ 6ರಷ್ಟು ಏರಿಕೆ ಕಂಡು ದಿನದ ಅಂತ್ಯಕ್ಕೆ ಶೇ 1.83ರಷ್ಟು ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದೆ. ಒಟ್ಟಾರೆ ದಿನದಲ್ಲಿ 23.95 ರು ಏರಿಕೆ ಕಂಡು, 1333.05ರಷ್ಟು ಗಳಿಸಿತು.

ಎನ್ಎಸ್ಇ ಯಲ್ಲಿ 15.45ರು ನಷ್ಟು ಏರಿಕೆ ಕಂಡು ಶೇ 1.17ರಷ್ಟು ಏರಿಕೆ ಕಂಡು 1332.85 ರು ನಂತೆ ವಹಿವಾಟು ನಡೆಸಿತು.

ಜೂನ್ 30ಕ್ಕೆ ಮುಕ್ತಾಯವಾದ ತ್ರೈಮಾಸಿಕ ವರದಿಯಲ್ಲಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭದಲ್ಲಿ 270 ಕೋಟಿ ರು ನಷ್ಟವಾಗಿದೆ. ಪ್ರತಿ ಈಕ್ವಟಿ ಷೇರಿನ ಮೇಲಿನ ಮೂಲ ಆದಾಯ ಕೂಡಾ 1.24 ರು ನಷ್ಟು ಈ ತ್ರೈಮಾಸಿಕದಲ್ಲಿ ಇಳಿಕೆಯಾಗಿದೆ.

ವರ್ಷದಿಂದ ವರ್ಷಕ್ಕೆ(YoY) ಲೆಕ್ಕಾಚಾರದಂತೆ ಶೇ 3.70ರಷ್ಟು ಲಾಭ ಏರಿಕೆಯಾಗಿದ್ದು, 3,612 ಕೋಟಿ ರು ಗಳಿಕೆಯಾಗಿದೆ. ಆದರೆ, ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆ 3,711.80 ಕೋಟಿ ರು ನಷ್ಟಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+