ಇನ್ಫೋಸಿಸ್ ತೊರೆದ ಸುಬ್ರಮಣ್ಯಂ ಗೋಪರಾಜು

Infosys senior VP Subrahmanyam Goparaju quits
ಬೆಂಗಳೂರು, ಡಿ.19: ಅಗ್ರಗಣ್ಯ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಗೆ ಮತ್ತೆ ಹೊಡೆತ ಬಿದ್ದಿದೆ. ಅಶೋಕ್ ವೆಮೂರಿ ಹಾಗೂ ಅಮೆರಿಕದ ಇನ್ಫೋಸಿಸ್ ನ ಯುಟಿಲಿಟಿಸ್ ಅಂಡ್ ರಿಸೋರ್ಸಸ್ ವಿಭಾಗದ ಮುಖ್ಯಸ್ಥ ಸ್ಟೀಫನ್ ಪ್ರಾಟ್ ನಂತರ ಇನ್ಫೋಸಿಸ್ ಲ್ಯಾಬ್ಸ್ ನ ಮುಖ್ಯಸ್ಥ, ಹಿರಿಯ ಉಪಾಧ್ಯಕ್ಷ ಸುಬ್ರಮಣ್ಯಂ(ಸುಬ್ಬು) ಗೋಪರಾಜು ಅವರು ಸಂಸ್ಥೆ ತೊರೆದಿದ್ದಾರೆ.

ಇತ್ತೀಚೆಗೆ ಅತಿ ಹೆಚ್ಚು ಸಂಬಳ ಪಡೆಯುತ್ತಿದ್ದ ಇನ್ಫೋಸಿಸ್ ಅಧಿಕಾರಿ ಎಂಬ ಪಟ್ಟ ಪ್ರಾಟ್ ಹುದ್ದೆ ತೊರೆದಿದ್ದರು. ಇಂಟಲೆಕ್ಟುವಲ್ ಪ್ರಾಪರ್ಟಿ ಸೆಲ್ (IP ಸೆಲ್) ಮುಖ್ಯಸ್ಥರೂ ಆಗಿದ್ದ ಸುಬ್ರಮಣ್ಯಂ ಅವರನ್ನು ಇತ್ತೀಗಷ್ಟೇ ಕಂಪನಿಯ ಕಾರ್ಯಕಾರಿ ಸಮಿತಿ (EC) ಗೆ ಸೇರಿಸಿಕೊಳ್ಳಲಾಗಿತ್ತು.

ಸುಬ್ಬು ಗೋಪರಾಜು ಅವರು ಸಂಸ್ಥೆ ತೊರೆಯಲು ನಿರ್ಧರಿಸಿದ್ದಾರೆ. ಡಿಸೆಂಬರ್ 27 ಇನ್ಫೋಸಿಸ್ ನಲ್ಲಿ ಅವರ ಕೊನೆ ದಿನವಾಗಲಿದೆ ಎಂದು ಇನ್ಫೋಸಿಸ್ ಮೂಲಗಳು ಹೇಳಿವೆ. ಇನ್ಫೋಸಿಸ್ ನಲ್ಲಿ ಸುಮಾರು 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸುಬ್ಬು ಅವರು ಮಂಗಳೂರು ವಿವಿ ಹಾಗೂ ಸುರತ್ಕಲ್ ನ ಕರ್ನಾಟಕ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

1988ರಲ್ಲಿ ಇನ್ಫೋಸಿಸ್ ಸೇರಿದ ಗೋಪರಾಜು ಅವರು ಐಟಿ ಕನ್ಸಲ್ಟಿಂಗ್ ನಲ್ಲಿ 10 ವರ್ಷ , ಸಲ್ಯೂಷನ್ ಡೆಲಿವರಿ, ಕಸ್ಟಮರ್ ಮ್ಯಾನೇಜ್ಮೆಂಟ್ ಮುಂತಾದ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. Software Engineering and Technology Labs ಹೆಸರು ಹೊಂದಿದ್ದ ಇನ್ಫೋಸಿಸ್ ಲ್ಯಾಬ್ಸ್ ನ ಮುಖ್ಯಸ್ಥರಾದರು. 2004ರಲ್ಲಿ ಐಪಿ ಸೆಲ್ ಆರಂಭಿಸಿದರು. 2010 ರಿಂದ 2013ರ ತನಕ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಉತ್ಪನ್ನಗಳ ಹಿಂದಿನ ಜಾಣ್ಮೆ ಗೋಪರಾಜು ಅವರದ್ದಾಗಿತ್ತು. ಹಲವಾರು ವಿಶ್ವವಿದ್ಯಾಲಯ, ವಿದ್ಯಾಸಂಸ್ತೆಗಳ ಜತೆ ಇನ್ಫೋಸಿಸ್ ಬೆಸೆಯುವಲ್ಲಿ ಸಫಲರಾಗಿದ್ದರು,

ಗೋಪರಾಜು ಅವರ ನಿರ್ಗಮನದ ನಂತರ ಇನ್ಫೋಸಿಸ್ ಲ್ಯಾಬ್ಸ್ ಹೊಣೆಯನ್ನು ಸಾವಿಯೋ ಡಿಸೋಜ ಅವರಿಗೆ ವಹಿಸಲಾಗುತ್ತಿದೆ. ಐಪಿ ಸೆಲ್ ನ ಜವಾಬ್ದಾರಿಯನ್ನು ಅನಿಂದ್ಯ ಸಿರ್ಕಾರ್ ಗೆ ನೀಡಲಾಗುತ್ತಿದೆ. ಇಬ್ಬರು ಅಧಿಕಾರಿಗಳು ಚಂದ್ರಶೇಖರ್ ಕೆ. ಅವರಿಗೆ ರಿಪೋರ್ಟ್ ಮಾಡತಕ್ಕದ್ದು. ಪ್ರಸಾದ್ ಜೋಶಿ ಅವರು ಟೆಕ್ನಾಲಜಿ ಸೆಂಟರ್ ಆಫ್ ಎಕ್ಸಲೆನ್ಸ್ ಮುಖ್ಯಸ್ಥರಾಗಲಿದ್ದು ಪ್ರವೀಣ್ ರಾವ್ ಗೆ ರಿಪೋರ್ಟ್ ಮಾಡಲಿದ್ದಾರೆ ಎಂದು ಇನ್ಫೋಸಿಸ್ ವಕ್ತಾರರು ಹೇಳಿದ್ದಾರೆ.

ಕಳೆದ ಕೆಲ ಅವಧಿಯಲ್ಲಿ ಹಿರಿಯ ಅಧಿಕಾರಿಗಳು ಇನ್ಫೋಸಿಸ್ ತೊರೆಯುತ್ತಿದ್ದು, ಇದು ನಿರೀಕ್ಷಿತ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಹೊಸ ತಂಡ ಕಟ್ಟುವ ಮುನ್ನ ಹಳೆ ಅಧಿಕಾರಿಗಳು ಸಂಸ್ಥೆ ತೊರೆಯುತ್ತಿದ್ದಾರೆ. ಸದ್ಯದ ಸಿಇಒ ಎಸ್ ಡಿ ಶಿಬುಲಾಲ್ 2015 ರಲ್ಲಿ ಹುದ್ದೆ ತೊರೆಯಲಿದ್ದಾರೆ. ಅಶೋಕ್ ವೆಮೂರಿ ಸಂಸ್ಥೆ ತೊರೆದು ಐಗೇಟ್ ಸಿಇಒ ಆಗಿದ್ದಾರೆ. ಸಂಸ್ಥೆ ಉಪಾಧ್ಯಕ್ಷರಾಗಿದ್ದ ಸುಧೀರ್ ಚತುರ್ವೇದಿ, ಜಾಗತಿಕ ಮಾರುಕಟ್ಟೆ ವಿಭಾಗದ ಬಸಬ್ ಪ್ರಧಾನ್ ಮುಂತಾದವರು ಸಂಸ್ಥೆ ತೊರೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+