ಇನ್ಫೋಸಿಸ್ ತೊರೆದ ಹಿರಿಯ ಉಪಾಧ್ಯಕ್ಷ ಸಂಜಯ್ ರಾಜಗೋಪಾಲ್

ಬೆಂಗಳೂರು, ಸೆ. 18: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ನ ಹಿರಿಯ ಉಪಾಧ್ಯಕ್ಷ ಸಂಜಯ್ ರಾಜಗೋಪಾಲನ್ ಅವರು ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಸಿಇಒ ಹಾಗೂ ಎಂಡಿ ಸ್ಥಾನವನ್ನು ವಿಶಾಲ್ ಸಿಕ್ಕಾ ಅವರು ತೊರೆದ ಒಂದು ತಿಂಗಳ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.

ಆಗಸ್ಟ್ 2014 ರಿಂದ ಸೆಪ್ಟೆಂಬರ್ 2017 ರ ತನಕದ ಅವಧಿಯಲ್ಲಿ ಕಾರ್ಯ ನಿರ್ವಹಿಸಿದ ರಾಜಗೋಪಾಲನ್ ಅವರು ಸಿಕ್ಕಾ ಅವರ ಜತೆ SAP ಲ್ಯಾಬ್ಸ್ ನಲ್ಲಿದ್ದವರು. ಸಿಕ್ಕಾ ಅವರ ಕೋರಿಕೆ ಮೇರೆಗೆ ಇನ್ಫೋಸಿಸ್ ಸೇರಿದ್ದ ರಾಜಗೋಪಾಲ್ ಅವರು ಮೈಸೂರಿನ ತರಬೇತಿ ಕೇಂದ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದರು.

Infosys Senior VP Sanjay Rajagopalan quits

ಜುಲೈ ತಿಂಗಳಿನಲ್ಲಿ ಸಿಕ್ಕಾ ಅವರ ಮತ್ತೊಬ್ಬSAP ಸಹದ್ಯೋಗಿ ಯೂಸುಫ್ ಬಷಿರ್ ಅವರು ಇನ್ಫೋಸಿಸ್ ನ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ್ದರು. ಸಿಕ್ಕಾ ನಿರ್ಗಮನ ನಂತರ ಇನ್ಫೋಸಿಸ್ ಗೆ ಹೊಸ ರೂಪ ನೀಡಲು ಮತ್ತೊಮ್ಮೆ ಮಾಜಿ ಸಿಇಒ ನಂದನ್ ನಿಲೇಕಣಿ ಅವರ ಮೊರೆ ಹೊಕ್ಕಿರುವುದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+