85 ಲಕ್ಷ ಷೇರು ಮಾರಾಟ ಮಾಡಿದ ಇನ್ಫೋಸಿಸ್ ಸಹ ಸಂಸ್ಥಾಪಕ ಶಿಬುಲಾಲ್

ಬೆಂಗಳೂರು, ಜುಲೈ 25: ಇನ್ಫೋಸಿಸ್ ಸಹ ಸಂಸ್ಥಾಪಕ ಎಸ್‌.ಡಿ. ಶಿಬುಲಾಲ್ ಅವರ ಕುಟುಂಬದ ಸದಸ್ಯರು ಕಂಪನಿಯಲ್ಲಿ ಹೊಂದಿದ್ದ ತಮ್ಮ 8.5 ಮಿಲಿಯನ್ ಷೇರುಗಳನ್ನು ಅಥವಾ ತಮ್ಮ ಪಾವತಿಸಿದ ಷೇರು ಬಂಡವಾಳದ ಶೇ. 0.20ರಷ್ಟು ಪಾಲನ್ನು ಜುಲೈ 22-24ರ ಅವಧಿಯಲ್ಲಿ ಮಾರಾಟ ಮಾಡಿದ್ದಾರೆ.

Recommended Video

      ಚೀನಾ ವಿರುದ್ಧ ಹೋರಾಟದಲ್ಲಿ ಹುತಾತ್ಮರಾದ ಯೋಧನ ಕುಟುಂಬದ ನೆರವಿಗೆ ನಿಂತ ಸರ್ಕಾರ | Oneindia Kannada

      "ಭಾಗಶಃ ಪಾಲು ಹಣಗಳಿಸುವಿಕೆಯಿಂದ ಬರುವ ಆದಾಯವನ್ನು ಲೋಕೋಪಕಾರಿ ಮತ್ತು ಹೂಡಿಕೆ ಚಟುವಟಿಕೆಗಳ ಸಂಯೋಜನೆಗೆ ಬಳಸಿಕೊಳ್ಳಲಾಗುವುದು" ಎಂದು ಶಿಬುಲಾಲ್ ಅವರ ಕುಟುಂಬ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

      Infosys Co Founder Shibulal Family Sells 85 Lakh Shares Of Infosys

      ಶಿಬುಲಾಲ್ ಮಗ ಶ್ರೇಯಸ್ ಅವರು 40 ಲಕ್ಷ (ಶೇ. 0.09) ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅವರ ಒಟ್ಟಾರೆ ಶೇ. 0.66ರಷ್ಟು ಷೇರುಗಳನ್ನು ಹೊಂದಿದ್ದರು, ಈ ಮಾರಾಟದಿಂದ ಅವರ ಬಳಿ ಶೇ. 0.57ರಷ್ಟು ಷೇರುಗಳು ಉಳಿದಂತಾಗಿದೆ. ಕಂಪನಿಯು ಷೇರುಪೇಟೆಗೆ ಈ ಮಾಹಿತಿ ನೀಡಿದೆ.

      ಶಿಬುಲಾಲ್ ಕುಟುಂಬ 2005-06 ರಿಂದ ಲೋಕೋಪಕಾರಿ ಉಪಕ್ರಮಗಳು, ವಿವಿಧ ಸಾಮಾಜಿಕ ಉಪಕ್ರಮಗಳಲ್ಲಿ ವಿಶೇಷವಾಗಿ ಶಿಕ್ಷಣ, ಸಾಮಾಜಿಕ ಕಲ್ಯಾಣ ಮತ್ತು ಸುಸ್ಥಿರ ಅಭಿವೃದ್ಧಿ ಜಾಗದಲ್ಲಿ ತೊಡಗಿಕೊಂಡಿವೆ.

      ಶಿಬುಲಾಲ್ 2011-14ರ ಅವಧಿಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಇನ್ಫೋಸಿಸ್ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅದಕ್ಕೂ ಮೊದಲು, ಅವರು 2007-11ರಲ್ಲಿ ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+