1,499 ರೂ. ಕೊಟ್ಟರೆ ಇಂಡಿಗೋ ವಿಮಾನ ಏರಬಹುದು
ಬೆಂಗಳೂರು, ಫೆ. 6: ವಿಮಾನಯಾನ ಸಂಸ್ಥೆಗಳ ದರ ಸಮರ ಮುಂದುವರಿದಿದೆ. ಪ್ರೇಮಿಗಳ ದಿನಕ್ಕೆ ಸ್ಪೈಸ್ ಜೆಟ್ ವಿಶೇಷ ಆಫರ್ ನೀಡಿದ್ದರ ಬೆನ್ನಲ್ಲೆ ಇಂಡಿಯೋ ಸಹ ದರ ಇಳಿಕೆ ಮಾಡಿದೆ.
ಪ್ರೇಮಿಗಳ ದಿನದ ಅಂಗವಾಗಿ ದೇಶದ ಒಳಗಡೆ ಸಂಚರಿಸುವವರಿಗೆ ಸ್ಪೈಸ್ ಜೆಟ್ 1,599 ರೂ . ನಿಗದಿ ಮಾಡಿತ್ತು. ಆದರೆ ಇದೀಗ ಇಂಡಿಗೋ 1,499 ರೂ. ಗೆ ಹಾರಾಡುವ ಅವಕಾಶ ಒದಗಿಸಿದೆ. ಅಂದರೆ ನೂರು ರೂಪಾಯಿ ಕಡಿಮೆ ಪಡೆದು ಸೇವೆ ಒದಗಿಸಲು ಮುಂದಾಗಿದೆ.[ಪ್ರೇಮಿಗಳ ದಿನದಂದು ಸ್ಪೈಸ್ ಜೆಟ್ ನಲ್ಲಿ ಹಾರಾಡಿ]

ಆದರೆ ಕೆಲ ನಿರ್ದಿಷ್ಟ ಮಾರ್ಗಗಳಿಗೆ ಮಾತ್ರ ಆಫರ್ ಘೋಷಿಸಲಾಗಿದೆ. ದೆಹಲಿ-ಜೈಪುರದಂಥ ಪ್ರಮುಖ ಮಾರ್ಗಕ್ಕೆ ಆಫರ್ ನೀಡಲಾಗಿದ್ದು, ಪ್ರಯಾಣಕ್ಕೂ 90 ದಿನಗಳ ಮುನ್ನ ಟಿಕೆಟ್ ಬುಕಿಂಗ್ ಮಾಡಬೇಕು.
ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರನ್ನು ಆಕರ್ಷಿಸಲು ಮುಗಿಬಿದ್ದು ಡಿಸ್ಕೌಂಟ್ ನೀಡುತ್ತಿವೆ. ಏರ್ ಏಷ್ಯಾ, ಜೆಟ್ ಏರ್ ವೇಸ್ ಗಳು ಸಹ ಮುಂಗಡ ಬುಕಿಂಗ್ ಗೆ ವಿಶೇಷ ಆಫರ್ ಕಲ್ಪಿಸಿವೆ. ವಿಮಾನಯಾನ ಸಂಸ್ಥೆಗಳು ಬೇಸಿಗೆಯಲ್ಲಿ ಜನರ ಕೊರತೆ ಎದುರಿಸುತ್ತಿರುವುದನ್ನು ನೀಗಿಸಿಕೊಳ್ಳಲು ಇಂಥ ಕ್ರಮಕ್ಕೆ ಮುಂದಾಗಿವೆ ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications