ಷೇರುಪೇಟೆಯಲ್ಲಿ ಗೂಳಿ ಗುಟುರು: ದಾಖಲೆಯ ಮಟ್ಟದಲ್ಲಿ ಸೆನ್ಸೆಕ್ಸ್ , ನಿಫ್ಟಿ ಜಿಗಿತ
ಮುಂಬೈ, ಡಿಸೆಂಬರ್ 16: ಭಾರತೀಯ ಷೇರುಪೇಟೆಯು ಬುಧವಾರ ಹೊಸ ದಾಖಲೆಯ ಮಟ್ಟವನ್ನು ತಲುಪಿದ್ದು, ಸತತ ನಾಲ್ಕನೇ ದಿನವೂ ಸಕಾರಾತ್ಮಕವಾಗಿ ವಹಿವಾಟು ಕೊನೆಗೊಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 403 ಪಾಯಿಂಟ್ಸ್ ಜಿಗಿತ ಕಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 114 ಪಾಯಿಂಟ್ಸ್ ಏರಿಕೆ ಕಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ 403.29 ಪಾಯಿಂಟ್ಸ್ ಅಥವಾ ಶೇಕಡಾ 0.87ರಷ್ಟು ಏರಿಕೆಗೊಂಡು 46,666.46 ಪಾಯಿಂಟ್ಸ್‌ಗೆ ಕೊನೆಗೊಂಡಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 114.80 ಪಾಯಿಂಟ್ಸ್ ಅಥವಾ ಶೇ. 0.85ರಷ್ಟು ಏರಿಕೆಗೊಂಡು 13,682.70 ಪಾಯಿಂಟ್ಸ್‌ಗೆ ತಲುಪಿದೆ.
ಇಂದು ಸುಮಾರು 1801 ಷೇರುಗಳು ಲಾಭಗಳಿಸಿದರೆ, 1129 ಷೇರುಗಳು ಕುಸಿದವು, ಮತ್ತು 164 ಷೇರುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಎಚ್‌ಡಿಎಫ್‌ಸಿ, ಹಿಂಡಾಲ್ಕೊ, ಟೈಟಾನ್, ಡಿವಿಸ್ ಲ್ಯಾಬೊರೇಟರೀಸ್ ಮತ್ತು ಒಎನ್‌ಜಿಸಿ ನಿಫ್ಟಿಯಲ್ಲಿ ಇಂದು ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಐಸಿಐಸಿಐ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಎನ್‌ಟಿಪಿಸಿ, ಗೇಲ್ ಮತ್ತು ಟೆಕ್ ಮಹೀಂದ್ರಾ ನಷ್ಟ ಅನುಭವಿಸಿದ ಷೇರುಗಳಾಗಿವೆ.
ಪಿಎಸ್‌ಯು ಬ್ಯಾಂಕ್ ಹೊರತುಪಡಿಸಿ ಇತರ ವಲಯ ಸೂಚ್ಯಂಕಗಳು ಲೋಹ ಮತ್ತು ವಾಹನ ಕ್ಷೇತ್ರಗಳ ನೇತೃತ್ವದಲ್ಲಿ ಹಸಿರು ಬಣ್ಣದಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ ಶೇ. 0.8 ರಷ್ಟು ಏರಿಕೆಯಾಗಿದೆ.
ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಪ್ರತಿ ಡಾಲರ್‌ಗೆ 73.58 ರಂತೆ ಅಲ್ಪ ಲಾಭದೊಂದಿಗೆ ಕೊನೆಗೊಂಡಿತು. ಇದು ಹಿಂದಿನ 73.64 ರ ವಿರುದ್ಧ ಪ್ರತಿ ಡಾಲರ್‌ಗೆ 17 ಪೈಸೆ ಹೆಚ್ಚಳವನ್ನು 73.47 ಕ್ಕೆ ತೆರೆಯಿತು ಮತ್ತು 73.47-73.60 ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.












Click it and Unblock the Notifications