ಮತ್ತಷ್ಟು ಎತ್ತರಕ್ಕೆ ಭಾರತೀಯ ಷೇರುಪೇಟೆ: ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ
ಮುಂಬೈ, ಡಿಸೆಂಬರ್ 07: ಭಾರತೀಯ ಷೇರುಪೇಟೆಯು ಸೋಮವಾರ ಮತ್ತೊಂದು ಹೊಸ ದಾಖಲೆಯ ಮಟ್ಟಕ್ಕೆ ಹೋಗಿ ತಲುಪಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ 347 ಪಾಯಿಂಟ್ಸ್ ಏರಿಕೆಗೊಂಡಿದ್ದು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ ಹೊಸ ಹಂತವನ್ನು ಮುಟ್ಟಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.77 ಅಥವಾ 347.42 ಪಾಯಿಂಟ್ಸ್ ಏರಿಕೆಗೊಂಡು 45,426.97 ಕ್ಕೆ ಏರಿಕೆಗೊಂಡಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 97.2 ಪಾಯಿಂಟ್ಸ್ ಜಿಗಿದು 13,355.75 ಹಂತಕ್ಕೆ ಹೋಗಿ ತಲುಪಿದೆ.
ಸುಮಾರು 1,972 ಷೇರುಗಳು ಇಂದು ಏರಿಕೆ ದಾಖಲಿಸಿದ್ದು, 936 ಷೇರುಗಳು ಕುಸಿದವು, ಮತ್ತು 190 ಷೇರುಗಳು ಯಾವುದೇ ಬದಲಾವಣೆ ಕಂಡಿಲ್ಲ.

ಯುಪಿಎಲ್, ಅದಾನಿ ಪೋರ್ಟ್ಸ್, ಎಚ್‌ಯುಎಲ್, ಭಾರ್ತಿ ಏರ್‌ಟೆಲ್ ಮತ್ತು ಕೋಲ್ ಇಂಡಿಯಾ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಕೋಟಕ್ ಮಹೀಂದ್ರಾ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀಲ್, ನೆಸ್ಲೆ ಮತ್ತು ಎಸ್‌ಬಿಐ ಲೈಫ್ ನಷ್ಟ ಅನುಭವಿಸಿದ ಷೇರುಗಳಾಗಿವೆ.
ವಲಯವಾರು ಬೆಳವಣಿಗೆ ಗಮನಿಸಿದರೆ, ಪಿಎಸ್‌ಯು ಬ್ಯಾಂಕ್ ಸೂಚ್ಯಂಕವು ಶೇಕಡಾ 2 ರಷ್ಟು ಏರಿಕೆಯಾದರೆ, ಫಾರ್ಮಾ, ಇನ್ಫ್ರಾ ಮತ್ತು ಎಫ್‌ಎಂಸಿಜಿ ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಹೆಚ್ಚಿಕೆಯಾಗಿವೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ ಶೇಕಡಾ 1ರಷ್ಟು ಗಳಿಸಿವೆ.












Click it and Unblock the Notifications