ಸ್ವಾತಂತ್ರ್ಯೋತ್ಸವ ಸಂಭ್ರಮ : ಆನ್ಲೈನ್ ಶಾಪಿಂಗ್ ಶೇ 80ರಷ್ಟು ರಿಯಾಯಿತಿ
ಬೆಂಗಳೂರು, ಆಗಸ್ಟ್ 13: ಪ್ರತಿ ಬಾರಿಯಂತೆ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಅಂಗವಾಗಿ ಇ ಕಾಮರ್ಸ್ಸ್ ಸಂಸ್ಥೆಗಳು ಶೇ 80ರ ತನಕ ರಿಯಾಯಿತಿ ಘೋಷಿಸಿವೆ. ಸ್ನಾಪ್ ಡೀಲ್, ಅಮೆಜಾನ್, ಫ್ಲಿಫ್ ಕಾರ್ಟ್ ಸೇರಿದಂತೆ ಅನೇಕ ಸಂಸ್ಥೆಗಳ ಕೊಡುಗೆಗಳಿಗೆ ಗ್ರಾಹಕರು ಮಾರು ಹೋಗಿದ್ದಾರೆ.
ಸ್ಮಾರ್ಟ್ ಫೋನ್, ಎಲೆಕ್ಟ್ರಾನಿಕ್ಸ್ ಉತ್ಪನ್ನ, ಬಟ್ಟೆ, ಗೃಹ ಉಪಯೋಗಿ ಉತ್ಪನ್ನಗಳು ಸೇರಿದಂತೆ ವಿವಿಧ ವಸ್ತುಗಳ ಮೇಲೆ ರಿಯಾಯಿತಿಗಳು ಸಿಗುತ್ತಿವೆ.
73ನೇ ಸ್ವಾತಂತ್ರೋತ್ಸವ ಸಂಭ್ರಮಾಚಾಣೆ ಅಂಗವಾಗಿ ಭಾರತದ ಮೂರು ಪ್ರಮುಖ ಇ ಕಾಮರ್ಸ್ ತಾಣಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಹಾಗೂ ಸ್ನಾಪ್ ಡೀಲ್ ಸಂಸ್ಥೆಗಳು ವಿವಿಧ ರೀತಿಯ ಆಫರ್ ಗಳನ್ನು ಮುಂದಿಟ್ಟಿವೆ. ಸ್ನಾಪ್ ಡೀಲ್' ವಿಷ್ ಫಾರ್ ಇಂಡಿಯಾ', ಅಮೆಜಾನ್ ನಿಂದ ಗ್ರೇಟ್ ಇಂಡಿಯನ್ ಸೇಲ್, ಫ್ಲಿಪ್ ಕಾರ್ಟ್ ನಿಂದ ದಿ ಫ್ರೀಡಂ ಸೇಲ್ ಸದ್ಯ ಜಾರಿಯಲ್ಲಿದೆ.
ಸ್ಯ್ನಾಪ್ ಡೀಲ್ ಸೇಲ್ ಆಗಸ್ಟ್ 15 ರ ವರೆಗಿರಲಿದೆ. ಫ್ಲಿಪ್ಕಾರ್ಟ್ ಎಲ್ಲ ದೊಡ್ಡ ಕಂಪನಿಗಳ ಸ್ಮಾರ್ಟ್ಫೋನ್ ಮೇಲೆ ರಿಯಾಯಿತಿ ನೀಡ್ತಿದೆ. ಸಿಟಿ ಬ್ಯಾಂಕ್ ಕಾರ್ಡ್ ಬಳಸಿದ್ರೆ ಶೇಕಡಾ 10 ರಷ್ಟು ಕ್ಯಾಶ್ ಬ್ಯಾಕ್ ಸಿಗಲಿದೆ.
ಸ್ಯ್ನಾಪ್ ಡೀಲ್, ಇಂಡಸ್ ಇಂಡ್ ಬ್ಯಾಂಕ್ ಗ್ರಾಹಕರಿಗೆ ಆಫರ್ ನೀಡ್ತಿದೆ. ಈ ಗ್ರಾಹಕರಿಗೆ ಶೇಕಡಾ 20 ರಷ್ಟು ಹೆಚ್ಚುವರಿ ಡಿಸ್ಕೌಂಟ್ ಸಿಗುತ್ತಿದೆ. ಅಮೆಜಾನ್ ಎಸ್ ಬಿ ಐ ಗ್ರಾಹಕರಿಗೆ ಆಫರ್ ಇದೆ.

ಬಿಗ್ ಬಜಾರ್ ನಿಂದ ಮಹಾ ಉಳಿತಾಯ ಯೋಜನೆ
*ಎಸ್ಬಿಐ ಕಾರ್ಡುದಾರರಿಗೆ ಎಲ್ಲಾ ಖರೀದಿ ಮೇಲೆ ಶೇ10ರಷ್ಟು ರಿಯಾಯಿತಿ.
* ಬಿಗ್ ಬಜಾರ್ ಅಲ್ಲದೆ ಬ್ರಾಂಡ್ ಫ್ಯಾಕ್ಟರಿ, ಸೆಂಟ್ರಲ್, ಈಸಿಡೇ, ನೀಲ್ ಗಿರೀಸ್, ಹೆರಿಟೇಜ್ ಫ್ರೆಜ್ ಹಾಗೂ ಪುಡ್ ವರ್ಲ್ಡ್ ಗಳಲ್ಲೂ ಆಗಸ್ಟ್ 11ರಿಂದ ಐದು ದಿನಗಳ ರಿಯಾಯಿತಿ ಮಾರಾಟ.
* ಬಿಗ್ ಬಜಾರ್ ನಿಂದ 1,200 ರುನಿಂದ 3,000 ರು ತನಕ ಕ್ಯಾಶ್ ಬ್ಯಾಕ್
* ಪೇಟಿಯಂ ಬಳಕೆ ಮಾಡಿ ಮಾಡುವ ಎಲ್ಲಾ ಖರೀದಿಗೂ 1,200 ರು ತನಕ ಕ್ಯಾಶ್ ಬ್ಯಾಕ್ ಪಡೆಯಬಹುದು.

ಸ್ನಾಪ್ ಡೀಲ್ : ವಿಶ್ ಫಾರ್ ಇಂಡಿಯಾ ಸೇಲ್
* ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ3 ಸ್ಮಾರ್ಟ್ ಫೋನ್ (8,290 ರು, 700ರು ರಿಯಾಯಿತಿ)
* ಡೆಲ್ ಇನ್ಸ್ ಸ್ಪಿರನ್ 3558 ನೋಟ್ ಬುಕ್ 25,699 ರು (5,598 ರು ರಿಯಾಯಿತಿ)
* ಮೈಕ್ರೋ ಮ್ಯಾಕ್ಸ್ ಎಚ್ ಡಿ ಎಲ್ ಇಡಿ ಟಿವಿ 20,490 ರು (19,500 ರು ರಿಯಾಯಿತಿ)
* ಇದಲ್ಲದೆ, ಹಳೆ ವಸ್ತುಗಳ ಅಪ್ಗ್ರೇಡ್ ಗಳ ಮೇಲೂ ರಿಯಾಯಿತಿ ಸಿಗಲಿದೆ.

ಅಮೆಜಾನ್ ನಿಂದ ಗ್ರೇಟ್ ಇಂಡಿಯನ್ ಸೇಲ್
* ಶಿಯೋಮಿ ಮಿ 5 ಸ್ಮಾರ್ಟ್ ಫೋನ್ 22,999
* ಅಮೆಜಾನ್ ಕಿಂಡ್ಲ್ ಇ ಬುಕ್ ರೀಡರ್ ಮೇಲೆ 4,999 ರು ರಿಯಾಯಿತಿ
* ಲಾಜಿಟೆಕ್ ಮಲ್ಟಿ ಪರ್ಪಸ್ ಕೀಬೋರ್ಡ್ 1,799ರು
* ಬೂಮ್ ಬ್ಲೂಟೂಥ್ ಸ್ಪೀಕರ್ಸ್ 10,000ರು
* ಸ್ಮಾರ್ಟ್ ಫೋನ್, ಎಲೆಕ್ಟ್ರಾನಿಕ್ಸ್ ಉತ್ಪನ್ನ, ಗೃಹ ಉಪಯೋಗಿ ಉತ್ಪನ್ನಗಳು ಸೇರಿದಂತೆ ವಿವಿಧ ವಸ್ತುಗಳ ಮೇಲೆ ರಿಯಾಯಿತಿಗಳು ಸಿಗುತ್ತಿವೆ.
* ಎಸ್ಬಿಐ ಕಾರ್ಡುದಾರರಿಗೆ ಎಲ್ಲಾ ಖರೀದಿ ಮೇಲೆ ಶೇ10ರಷ್ಟು ರಿಯಾಯಿತಿ

ಫ್ಲಿಪ್ ಕಾರ್ಟ್ ಫ್ರೀಡಂ ಸೇಲ್
* ಎಚ್ ಡಿಎಫ್ ಕ್ರೆಡಿಟ್ ಕಾರ್ಡ್ ಬಳಕೆದಾರರು 4,999ರು ಗಿಂತ ಹೆಚ್ಚಿನ ಖರೀದಿಗೆ ಶೇ10ರಷ್ಟು ರಿಯಾಯಿತಿ ಪಡೆಯಲಿದ್ದಾರೆ.
* ಸ್ಮಾರ್ಟ್ ಫೋನ್ ವಿನಿಮಯ ಆಫರ್ ಗಳಿದ್ದು, 999 ರು ನಿಂದ ಆರಂಭವಾಗಲಿದೆ.
* ಶಿಯೋಮಿ ಮಿ 5 ಮೇಲೆ 2000 ರು ರಿಯಾಯಿತಿ
* ಆಪಲ್ ವಾಚ್ ಮೇಲೆ 3,000 ರು ರಿಯಾಯಿತಿ
* ಜಿಯೋ ಇನ್ಫೋಕಾಮ್ ಫ್ಲೇಮ್, ವಿಂಡ್ ಮೊಬೈಲ್ ಮೇಲೆ ವಿನಾಯಿತಿ ಪ್ಲಸ್ 4ಜಿ ಆಫರ್












Click it and Unblock the Notifications