ಉತ್ಪಾದನಾ ಘಟಕಗಳ ಪೈಕಿ ಬಾಷ್ ಸಂಬಳವೇ ಅಧಿಕ!
ಬೆಂಗಳೂರು, ಡಿ.11: ಬಾಷ್ ಲಿಮಿಟೆಡ್ ಬೆಂಗಳೂರು ಘಟಕವು ಕಾರ್ಮಿಕ ಸಂಘವಾದ ಮೈಕೊ ಎಂಪ್ಲಾಯೀಸ್ ಅಸೋಸಿಯೇಶನ್ (ಎಂ.ಇ.ಎ) ಜೊತೆ ಕೊನೆಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಬಂದಿದೆ. ಹೀಗಾಗಿ ಈ ವಾರದಿಂದ ಬಾಷ್ ನಲ್ಲಿ ಉತ್ಪಾದನೆ ಹೆಚ್ಚಳ, ಹೆಚ್ಚಿನ ಕಾರ್ಯಕ್ಷಮತೆ, ಉದ್ಯೋಗಿಗಳಲ್ಲಿ ಸಂತಸ ಎದ್ದು ಕಾಣುತ್ತಿದೆ.
2013-2016ರ ಅವಧಿಗೆ ಅನ್ವಯವಾಗುವ ವೇತನ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಕಾರ್ಮಿಕ ಸಂಘವು ಸೆಪ್ಟೆಂಬರ್ 16, 2014ರಿಂದ ಆರಂಭಿಸಿದ ದೀರ್ಘ ಕಾಲದ ಅನಧಿಕೃತ ಮುಷ್ಕರವು ಅಂತಿಮಗೊಂಡಿದೆ.
ಬಾಷ್ ಕಾರ್ಮಿಕರಲ್ಲಿ ಸಂತಸ : ಕಾರ್ಮಿಕರ ಸಂಘವು ಕೊನೆಯದಾಗಿ ಕಂಪನಿಯು ನೀಡಿದ ವೇತನದ ಮತ್ತು ಇತರ ಸೌಲಭ್ಯಗಳ ಪ್ರಸ್ತಾವವನ್ನು ಸ್ವೀಕರಿಸಲು ಒಪ್ಪಿದೆ ಮತ್ತು ಒಬ್ಬ ಸಾಮಾನ್ಯ ಕಾರ್ಮಿಕನಿಗೆ ನಿಯೋಜಿತ ಸರಾಸರಿ ಮಾಸಿಕ ಲಾಭವು (ಸಿ.ಟಿ.ಸಿ.) ರೂ. 64,000ರಿಂದ ರೂ. 86,000ಕ್ಕೆ ಹೆಚ್ಚಳವಾಗಲಿದೆ. ಇದಕ್ಕೆ ಅವರು ಐ.ಇ. ಸ್ಟಾಂಡರ್ಡ್ ನಂತೆ ದಿನಕ್ಕೆ ಎಂಟು ಗಂಟೆಗಳ ಅವಧಿಯ ಪಾಳಿಯಲ್ಲಿ 7.5 ಗಂಟೆಗಳ ಕಾಲ ಕೆಲಸವನ್ನು ಮಾಡಬೇಕು.
'ನಮ್ಮ ಎಲ್ಲಾ ಕಾರ್ಮಿಕರು ಪುನಃ ಕೆಲಸಕ್ಕೆ ಹಾಜರಾಗುತ್ತಿರುವುದನ್ನು ನೋಡಲು ನಾನು ಸಂತೋಷಪಡುತ್ತೇನೆ. ಮುಷ್ಕರದಿಂದ ಪ್ರತಿಕೂಲ ಪರಿಣಾಮಗಳು ಉಂಟಾದರೂ ಕೂಡಾ ಕಂಪನಿಯು ಕಾರ್ಮಿಕರಿಗೆ ಧಾರಾಳವಾಗಿ ಕೊಡುಗೆಯನ್ನು ನೀಡುತ್ತಿದೆ ಮತ್ತು ಅವರು ಹೊಸದಾಗಿ ಪರಿಚಯಿಸಿದ ಉತ್ಪಾದನಾ ಪ್ರಮಾಣವನ್ನು ಅನುಸರಿಸುತ್ತಾರೆ ಎಂದು ನಿರೀಕ್ಷಿಸುತ್ತೇನೆ' ಎಂದು ಬಾಷ್ ಲಿಮಿಟೆಟ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಸ್ಟಿಫನ್ ಬರ್ನ್ಸ್ ಹೇಳಿದ್ದಾರೆ.

ಉತ್ತಮ ಸೌಲಭ್ಯಗಳು: ಸವಾಲಿನ ವ್ಯಾವಹಾರಿಕ ಪರಿಸ್ಥಿತಿ ಇದ್ದರೂ ಕಂಪನಿಯ ತನ್ನ ಕಾರ್ಮಿಕರಿಗೆ ಉತ್ತಮವಾದ ಮತ್ತು ಧಾರಾಳದ ವೇತನ ಬುಟ್ಟಿಯನ್ನು ನೀಡಿದ್ದು, ಅದು ಬರೀ ಹಣಕ್ಕೆ ಸಂಬಂಧಿಸಿದ್ದಾಗಿರದೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಕೂಡಾ ನೀಡುತ್ತಿದೆ. ಪರಸ್ಪರ ಅನ್ಯೋನ್ಯದ ಈ ಬೇಡಿಕೆ ಒಪ್ಪಂದದೊಂದಿಗೆ ಬಾಷ್ ಬೆಂಗಳೂರು ಘಟಕವು ಆ ಪ್ರಕಾರದ ಇತರ ಸ್ಪರ್ಧಾತ್ಮಕ ಉತ್ಪಾದನಾ ಘಟಕಗಳಿಗೆ ಹೋಲಿಸಿದರೆ ಅತ್ಯುತ್ತಮ ಪ್ರತಿಫಲ ನೀಡುತ್ತಿರುವ ಕೈಗಾರಿಕೆಗಳಲ್ಲಿ ಒಂದಾಗಿ ಮುಂದುವರಿಯುತ್ತಿದೆ.
ಅದು ಮಾತ್ರವಲ್ಲದೇ ಕಂಪನಿಯು 370 ತಾತ್ಕಾಲಿಕ ಕಾರ್ಮಿಕರಲ್ಲಿ 100 ಕಾರ್ಮಿಕರನ್ನು ಖಾಯಂಗೊಳಿಸಲು ಒಪ್ಪಿದೆ. ಸುಮಾರು 2575 ಶಾಶ್ವತ ಕಾರ್ಮಿಕರನ್ನು ಹೊಂದಿದೆ. ಅವರ ವೇತನವೂ ಮಧ್ಯಂತರವಾದ ಶ್ರೇಣಿಯಲ್ಲಿದ್ದು, ಸ್ಪರ್ಧಾತ್ಮಕ ಕೈಗಾರಿಕೆಗಳಿಗಿಂತ ಅಧಿಕವಾಗಿದೆ. ಭವಿಷ್ಯದಲ್ಲಿ ಕಾರ್ಮಿಕರ ಸಂಖ್ಯೆಯು ಉತ್ಪಾದನಾ ವಿಧಾನವು ಸ್ವಯಂಗೊಳಿಸುವ ಮತ್ತು ಆಧುನಿಕ ಯಂತ್ರಗಳು ಮತ್ತು ಪ್ರದೂಷಣ ನಿಯಮಾವಳಿಗಳ ವಿಧಾನದಿಂದ ಬದಲಾಗುವ ಸಾಧ್ಯತೆ ಇದೆ.
ಗ್ರಾಹಕರಿಗೆ ನಮ್ಮ ಬದ್ಧತೆಯು ಎಂದಿಗೂ ಪ್ರಮುಖವಾದುದು ಮತ್ತು ನಾವು ಮುಷ್ಕರದ ಸಮಯದಲ್ಲಿ ಕೂಡಾ ಅದನ್ನು ಪೂರೈಕೆಯ ಸರಪಳಿಯಲ್ಲಿ ಹೆಚ್ಚು ಪರಿಣಾಮಗಳಾಗದಂತೆ ನೋಡಿಕೊಂಡಿದ್ದೇವೆ. ಇಂದಿನ ಒಪ್ಪಂದವು ಕಂಪನಿಯು ಭವಿಷ್ಯಕ್ಕಾಗಿ ಮತ್ತು ಭಾರತದ ಅಟೊಮೊಟಿವ್ ಕೈಗಾರಿಕೆಗಳಿಗೆ ಸಮರ್ಥ ನೆರವು ನೀಡಲು ಸಿದ್ಧವಾಗುವಂತೆ ಸೂಕ್ತ ವಿಧಾನಗಳನ್ನು ಅನುಸರಿವುದರ ಮೂಲಕ ಮಾಡಿದೆ ಎಂದು ಬರ್ನ್ಸ್ ಹೇಳಿದರು.
ಬಾಷ್ ಕಂಪನಿ ಷೇರುಗಳು ಬಿಎಸ್ ಇನಲ್ಲಿ ಗುರುವಾರ ಮಧ್ಯಾಹ್ನ 12.40ರ ಸುಮಾರಿಗೆ 19527.15 ರು ನಂತೆ ಮಾರಾಟವಾಗುತ್ತಿದ್ದರೆ, ಎನ್ ಎಸ್ ಇನಲ್ಲಿ 19526 ರು ನಂತೆ ವಹಿವಾಟು ನಡೆಸುತ್ತಿದೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications