ನಿಮ್ಮ ತೆರಿಗೆ ಮರುಪಾವತಿ ನೇರವಾಗಿ ಬ್ಯಾಂಕ್ ಖಾತೆಗೆ
ನವದೆಹಲಿ, ಜೂ. 25: ನೀವು ತುಂಬಿದ ಹೆಚ್ಚುವರಿ ತೆರಿಗೆ ಹಣ ಇನ್ನು ಮುಂದೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಸೇರಲಿದೆ. ಆದಾಯ ತೆರಿಗೆ ಪದ್ಧತಿಯನ್ನು ಸರಳಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಮತ್ತು ಕೇಂದ್ರ ನೇರ ತೆರಿಗೆ ಮಂಡಳಿ ಇಂಥದ್ದೊಂದು ಹೊಸ ಕ್ರಮ ಜಾರಿಗೆ ಮುಂದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಬಿಡಿಟಿ ಅಧ್ಯಕ್ಷೆ ಅನಿತಾ ಕಪೂರ್, ಚೆಕ್ ಮೂಲಕ ಪಾವತಿ ಮಾಡುವ ಕ್ರಮಕ್ಕೆ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತೀಲಾಂಜಲಿ ನೀಡಲು ನಿರ್ಧಾರ ಮಾಡಿದೆ. ಆದಾಯ ತೆರಿಗೆ ನೀಡಿಕೆ ಮತ್ತು ಮರುಪಾವತಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಶೀಘ್ರ ಇತ್ಯರ್ಥಗೊಳಿಸಲು ವಿನೂತನ ಕ್ರಮ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.[ಆನ್ ಲೈನ್ ನಲ್ಲಿ ಆದಾಯ ತೆರಿಗೆ ತುಂಬಲು ಸರಳ ವಿಧಾನ]

ಆದಾಯ ತೆರಿಗೆ ಮರುಪಾವತಿ ಮೊತ್ತವನ್ನು ಚೆಕ್ ಗಳು ಅಂಚೆ ಮೂಲಕ ಪಾವತಿದಾರರ ಮನೆ ಸೇರುತ್ತಿದೆ. ಕೆಲವೊಮ್ಮೆ ಗ್ರಾಹಕರ ಕೈಗೆ ಚೆಕ್ ದೊರೆಯುತ್ತಿಲ್ಲ. ಅಲ್ಲದೇ ದಿನಾಂಕ ಮುಗಿದ ಮೇಲೆ ಚೆಕ್ ಸಿಕ್ಕ ಉದಾಹರಣೆಗಳು ಇವೆ. ವಿಳಾಸ ಬದಲಾವಣೆಯನ್ನು ನೋಂದಣಿ ಮಾಡಿಸದ ಸಂದರ್ಭ ಸಮಸ್ಯೆಯಾಗಿದ್ದು ಇದೆ.[ವಿಳಂಬವಾಗಿದ್ದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಪಾವತಿ ಹೇಗೆ?]
ಇದೆಲ್ಲವನ್ನು ಮನಗಂಡಿರುವ ಮಂಡಳಿ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ ನಿರ್ಧಾರಕ್ಕೆ ಬಂದಿದೆ. ವ್ಯವಸ್ಥೆ ಸಾಕಾರಕ್ಕೆ ಗ್ರಾಹಕರ ಸಹಕಾರವೂ ಅಗತ್ಯವಾಗದೆ, ಎಲ್ಲರೂ ತಮ್ಮಬ್ಯಾಂಕ್ ಖಾತೆಯ ಅಂಕೆ ನೀಡಬೇಕಾಗುವುದು. ಇಲಾಖೆ ಇಲ್ಲಿ ವ್ಯಕ್ತಿಗಳ ಹೆಸರನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆರ್ ಬಿಐ ಮತ್ತು ಇತರ ಪ್ರಮುಖ ಬ್ಯಾಂಕ್ ಗಳೊಂದಿಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಪೂರ್ ತಿಳಿಸಿದ್ದಾರೆ.












Click it and Unblock the Notifications