Get Updates
Get notified of breaking news, exclusive insights, and must-see stories!

ಚಿನ್ನ ಖರೀದಿಸುವವರೇ ಗಮನಿಸಿ: 2024ರಲ್ಲಿ ಚಿನ್ನದ ಬೆಲೆ 70,000 ರೂ. ಸಾಧ್ಯತೆ

ನವದೆಹಲಿ, ಜನವರಿ 02: 2024 ರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 70,000 ರೂಪಾಯಿಗಳನ್ನು ತಲುಪುವ ನಿರೀಕ್ಷೆಯಿದೆ ಎಂದು ಉದ್ಯಮ ಸಂಸ್ಥೆ ಆಲ್ ಇಂಡಿಯಾ ಜೆಮ್ ಮತ್ತು ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ (ಜಿಜೆಸಿ) ಮಂಗಳವಾರ ತಿಳಿಸಿದೆ.

ಅಂತಾರಾಷ್ಟ್ರೀಯ ವಲಯದಲ್ಲಿ ಆರ್ಥಿಕ ಅನಿಶ್ಚಿತತೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಹಳದಿ ಲೋಹದ ದರಗಳಲ್ಲಿ ಏರಿಕೆಯಾಗಬಹುದು ಎಂದು ಜಿಜೆಸಿ ಊಹಿಸಿದೆ. ವಿವಿಧ ಕಾರಣಗಳಿಂದ ಜನರು ತಮ್ಮ ಕಷ್ಟಪಟ್ಟು ಗಳಿಸಿದ ಹಣವನ್ನು ಚಿನ್ನದಲ್ಲಿ ಹೂಡಿಕೆ ಮಾಡಲು ಪರಿಗಣಿಸುತ್ತಾರೆ. ಏಕೆಂದರೆ ಇದು ಯಾವಾಗಲೂ ಸುರಕ್ಷಿತ ಹೂಡಿಕೆ ಮತ್ತು ಹಣದುಬ್ಬರದ ವಿರುದ್ಧ ಪರಿಪೂರ್ಣ ಕೊನೆ ಎಂದು ಪರಿಗಣಿಸಲಾಗುತ್ತದೆ ಎಂದು ಉದ್ಯಮ ಸಂಸ್ಥೆ ಹೇಳಿದೆ.

In 2024, the price of gold is likely to reach 70,000 rupees per 10 grams

"ಗ್ರಾಹಕರು ಹೆಚ್ಚಿನ ಸರಕುಗಳ ಬೆಲೆಗಳು ಮತ್ತು ವಿಶ್ವದಾದ್ಯಂತ ಹೆಚ್ಚಿದ ಬಡ್ಡಿದರಗಳನ್ನು ಎದುರಿಸುತ್ತಾರೆ, ಹೀಗಾಗಿ ಹಣಕಾಸು ಮಾರುಕಟ್ಟೆಗಳು ಅಧಿಕ ಚಟುವಟಿಕೆಯಿಂದಿರುತ್ತದೆ" ಎಂದು ಜಿಜೆಸಿ ಅಧ್ಯಕ್ಷ ಸಾಯಮ್ ಮೆಹ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2024ರಲ್ಲಿ ಚಿನ್ನದ ಬೆಲೆ:

ಆರ್ಥಿಕ ಅನಿಶ್ಚಿತತೆಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಚಿನ್ನದ ಬೆಲೆಗಳು ಹೆಚ್ಚಾಗಲಿವೆ. ಆರ್ಥಿಕ ಹಿಂಜರಿತದ ಸಮಯದಲ್ಲಿ ಚಿನ್ನವು ಪ್ರಮುಖ ಬೇಡಿಕೆ ಬರುತ್ತದೆ. ಬೆಲೆಗಳು 2024 ರಲ್ಲಿ ಔನ್ಸ್‌ಗೆ 2,300 ಡಾಲರ್‌ ಅಥವಾ 10 ಗ್ರಾಂಗೆ 70,000 ರೂ. ಆಗಲಿದೆ. ವಿಶ್ವದ ಆರ್ಥಿಕ ಸ್ಥಿತಿಯು ಹದಗೆಟ್ಟರೆ ಚಿನ್ನದ ಬೆಲೆಗಳು ತ್ವರಿತ ದರದಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಸಾಯಮ್ ಮೆಹ್ರಾ ಹೇಳಿದ್ದಾರೆ.

"ಆರ್ಥಿಕ ಪರಿಸ್ಥಿತಿಗಳು ಹದಗೆಟ್ಟರೆ, ರಕ್ಷಣಾತ್ಮಕ ಸ್ವತ್ತುಗಳಿಗೆ ಹೆಚ್ಚಿದ ಬೇಡಿಕೆಯನ್ನು ಹೆಚ್ಚಾಗಬಹುದು. ಇದರಿಂದ ಚಿನ್ನದ ಬೆಲೆಗಳು ಏರಿಕೆಯಾಗಬಹುದು. ಹಿಂದಿನ ಎಲ್ಲಾ ಮುನ್ಸೂಚನೆಗಳನ್ನು ಮೀರಿ ಸಂಭಾವ್ಯ ಏರಿಕೆ ಕೂಡ ಆಗಬಹುದು" ಎಂದು ಅವರು ಹೇಳಿದರು.

ಗಮನಾರ್ಹವಾಗಿ, ಅನೇಕ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ಆರ್ಥಿಕ ಕುಸಿತದ ಹೊರತಾಗಿಯೂ, ಚಿನ್ನವು 2023 ರಲ್ಲಿ 13 ಪ್ರತಿಶತದಷ್ಟು ಆದಾಯವನ್ನು ನೀಡಿತು. "ವಿದೇಶಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಇರಲಿದೆ. ಭಾರತೀಯ ಗ್ರಾಹಕರಿಗೆ ಚಿನ್ನವು ಎಲ್ಲ ಕಾಲದ ಆಕರ್ಷಣೆಯಾಗಿದೆ. ಈ ವರ್ಷದಲ್ಲಿ 10 ಗ್ರಾಂಗೆ 64,460 ರೂ.ಗಳ ಸಾರ್ವಕಾಲಿಕ ಗರಿಷ್ಠ ದಾಖಲೆಯನ್ನು ತಲುಪಿದೆ. ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸ್ಪಾಟ್ ಚಿನ್ನವು ಏರಿಕೆಯಾಗಿದೆ ಎಂದು ಮೆಹ್ರಾ ಹೇಳಿದರು.

ಭಾರತದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ದರಗಳು

ಚೆನ್ನೈ: 22 ಕ್ಯಾರೆಟ್‌ಗೆ 59,200 ಮತ್ತು 24 ಕ್ಯಾರೆಟ್‌ಗೆ 64,580 ರೂ.
ಮುಂಬೈ: 22 ಕ್ಯಾರೆಟ್‌ಗೆ 58,750 ಮತ್ತು 24 ಕ್ಯಾರೆಟ್‌ಗೆ 64,090 ರೂ.
ದೆಹಲಿ: 22 ಕ್ಯಾರೆಟ್‌ಗೆ 58,900 ಮತ್ತು 24 ಕ್ಯಾರೆಟ್‌ಗೆ 64,240 ರೂ.
ಕೋಲ್ಕತ್ತಾ: 22 ಕ್ಯಾರೆಟ್‌ಗೆ 58,750 ಮತ್ತು 24 ಕ್ಯಾರೆಟ್‌ಗೆ 64,090 ರೂ.
ಬೆಂಗಳೂರು: 22 ಕ್ಯಾರೆಟ್‌ಗೆ 58,750 ಮತ್ತು 24 ಕ್ಯಾರೆಟ್‌ಗೆ 64,090 ರೂ.
ಹೈದರಾಬಾದ್: 22 ಕ್ಯಾರೆಟ್‌ಗೆ 58,750 ಮತ್ತು 24 ಕ್ಯಾರೆಟ್‌ಗೆ 64,090 ರೂ.
ಕೇರಳ: 22 ಕ್ಯಾರೆಟ್‌ಗೆ 58,750 ಮತ್ತು 24 ಕ್ಯಾರೆಟ್‌ಗೆ 64,090 ರೂ.
ಅಹಮದಾಬಾದ್: 22 ಕ್ಯಾರೆಟ್‌ಗೆ 58,800 ಮತ್ತು 24 ಕ್ಯಾರೆಟ್‌ಗೆ 64,140 ರೂ.
ಲಕ್ನೋ: 22 ಕ್ಯಾರೆಟ್‌ಗೆ 58,900 ಮತ್ತು 24 ಕ್ಯಾರೆಟ್‌ಗೆ 64,240 ರೂ.
ಪಾಟ್ನಾ: 22 ಕ್ಯಾರೆಟ್‌ಗೆ 58,800 ಮತ್ತು 24 ಕ್ಯಾರೆಟ್‌ಗೆ 64,140 ರೂ.
ಭುವನೇಶ್ವರ: 22 ಕ್ಯಾರೆಟ್‌ಗೆ 58,750 ಮತ್ತು 24 ಕ್ಯಾರೆಟ್‌ಗೆ 64,090 ರೂ.
ಮೈಸೂರು: 22 ಕ್ಯಾರೆಟ್ ಗೆ 58,750 ರೂ., 24 ಕ್ಯಾರೆಟ್ ಗೆ 64,090 ರೂ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+