ಬೆಂಗಳೂರಿನಲ್ಲಿ IKEA ಮೊದಲ ಮಾರಾಟ ಮಳಿಗೆ : ಜೂನ್ 22ಕ್ಕೆ ಆರಂಭ

ಬೆಂಗಳೂರು, ಮೇ 31: ಸ್ವೀಡನ್ ಮೂಲದ ಪ್ರಸಿದ್ಧ ಪೀಠೋಪಕರಣಗಳ ಮಾರಾಟ ಕಂಪನಿ ಐಕಿಯ (IKEA) ಬೆಂಗಳೂರಿನಲ್ಲಿ ಮೊದಲ ಮಾರಾಟ ಮಳಿಗೆ ನಿರ್ಮಾಣ ಮಾಡಿದ್ದು, ಜೂನ್ 22ರಿಂದ ಈ ಮಳಿಗೆ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದೆ.

ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ ಸಮೀಪದಲ್ಲಿ12.2 ಎಕರೆ ಜಾಗದಲ್ಲಿ 4.60 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಬೃಹತ್ ಮಾರಾಟ ಮಳಿಗೆಯಲ್ಲಿ 8,000 ವಿವಿಧ ಬಗೆಯ ವಿನ್ಯಾಸಗಳ ಗೃಹೋಪಕರಣಗಳು ಲಭ್ಯವಿರುತ್ತವೆ ಎಂದು ಕಂಪನಿ ತಿಳಿಸಿದೆ. ಕೋವಿಡ್ ಕಾರಣದಿಂದ ನಿರ್ಮಾಣ ಕಾರ್ಯ ವಿಳಂಬವಾಗಿತ್ತು, ಈಗ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಕ್ತಾಯವಾಗಿದ್ದು ಉದ್ಘಾಟನೆಗೆ ಸಿದ್ಧವಾಗಿದೆ.

ಐಕಿಯ ಇಂಡಿಯಾ ಕರ್ನಾಟಕ ರಾಜ್ಯಕ್ಕೆ ಮಾರ್ಕೆಟ್ ಮ್ಯಾನೇಜರ್‌ ಆಗಿ ಆಂಜೆ ಹೈಮ್ ನೇಮಕ ಮಾಡಿದೆ. ಬೆಂಗಳೂರಿನಲ್ಲಿ ಆರಂಭವಾಗಲಿರುವ ನೂತನ ಮಳಿಗೆ ಕುರಿತು ಮಾತನಾಡಿರುವ ಹೈಮ್ "ನಾಗಸಂದ್ರದಲ್ಲಿ ನಿರ್ಮಾಣವಾಗಿರುವ ಇಕಿಯಾ ಒಂದೇ ಮಳಿಗೆಯಲ್ಲಿ ಎಲ್ಲಾ ಗೃಹೋಪಯೋಗಿ ಅಗತ್ಯಗಳನ್ನು ಪೂರೈಸುತ್ತದೆ. ಬೆಂಗಳೂರಿನ ನಾಗರಿಕರ ನಿರೀಕ್ಷೆ ಮತ್ತು ಕನಸುಗಳಿಗೆ ತಕ್ಕಂತೆ ಗೃಹೋಪಯೋಗಿ ವಸ್ತುಗಳನ್ನು ಪೂರೈಸುವ ಗುರಿ ಹೊಂದಿದೆ" ಎಂದು ಹೇಳಿದ್ದಾರೆ.

ಪೀಠೋಪಕರಣಗಳಿಗಾಗಿ ಬೃಹತ್ ಮಳಿಗೆ

ಪೀಠೋಪಕರಣಗಳಿಗಾಗಿ ಬೃಹತ್ ಮಳಿಗೆ

"ನಾಗಸಂದ್ರ ಮೆಟ್ರೋ ನಿಲ್ದಾಣಕ್ಕೆ ಸಮೀಪದಲ್ಲಿ 12.2 ಎಕರೆಯಲ್ಲಿ 4,60,000 ಸದರಿ ಅಡಿ ವಿಸ್ತೀರ್ಣದಲ್ಲಿ ಐಕಿಯ ಮಳಿಗೆ ನಿರ್ಮಾಣವಾಗಿದೆ. ಉತ್ತಮ ಗುಣಮಟ್ಟದ, ದೀರ್ಘ ಬಾಳಿಕೆಯ, ಉತ್ತಮ ವಿನ್ಯಾಸದ 8000 ಕ್ಕೂ ಅಧಿಕ ಗೃಹೋಪಯೋಗಿ ಪೀಠೋಪಕರಣಗಳು ಕೈಗೆಟುಕುವ ದರದಲ್ಲಿ ಲಭ್ಯವಾಗಲಿವೆ" ಎಂದು ಅವರು ಮಾಹಿತಿ ನೀಡಿದರು.

ಐಕಿಯ ಮಳಿಗೆಯಲ್ಲಿ ಮಕ್ಕಳು ಆಟವಾಡುವ ಮೈದಾನದ ಜೊತೆಗೆ, 1000 ಆಸನ ಸಾಮರ್ಥ್ಯದ ರೆಸ್ಟೋರೆಂಟ್ ನಿರ್ಮಾಣ ಮಾಡಲಾಗಿದೆ. ಇಲ್ಲಿ ಸ್ವೀಡಿಷ್ ಮತ್ತು ಭಾರತೀಯ ಆಹಾರಗಳನ್ನು ಇಲ್ಲಿ ಸವಿಯಬಹುದಾಗಿದೆ ಎಂದು ಹೇಳಿದರು.

ಐಕಿಯ ಕಂಪನಿಯ ದೇಶದ ಮೂರನೇ ಮಳಿಗೆ

ಐಕಿಯ ಕಂಪನಿಯ ದೇಶದ ಮೂರನೇ ಮಳಿಗೆ

2021ರಲ್ಲಿ ಐಕಿಯ ಇ-ಕಾಮರ್ಸ್ ಮೂಲಕ ಬೆಂಗಳೂರಿನಲ್ಲಿ ಪೀಠೋಪಕರಣಗಳ ಮಾರಾಟ ಆರಂಭಿಸಿತ್ತು. ಕೋವಿಡ್-19 ಸಾಂಕ್ರಾಮಿಕ ಕಾರಣದಿಂದಾಗಿ ಬೆಂಗಳೂರಿನಲ್ಲಿ ಮಾರಾಟ ಮಳಿಗೆ ನಿರ್ಮಾಣ ಕಾಮಗಾರಿ ವಿಳಂಬವಾಗಿತ್ತು.

ಐಕಿಯ ಈಗಾಗಲೇ ಹೈದರಾಬಾದ್, ಮುಂಬೈ, ಪುಣೆ ಮತ್ತು ಗುಜರಾತಿನ ಮೂರು ನಗರಗಳಲ್ಲಿ ಆನ್‌ಲೈನ್ ಡೆಲಿವರಿ ಸೌಲಭ್ಯ ಒದಗಿಸುತ್ತಿದೆ. ದೇಶದಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅನುಮೋದನೆ ಪಡೆದ ಐದು ವರ್ಷಗಳ ನಂತರ 2018ರಲ್ಲಿ ಇಕಿಯಾ ಸಂಸ್ಥೆ ಹೈದರಾಬಾದ್‌ನಲ್ಲಿ ಮೊದಲ ಮಳಿಗೆ ಪ್ರಾರಂಭಿಸಿತ್ತು. ನಂತರ ಐಕಿಯ ಸಂಸ್ಥೆ ಮುಂಬೈ ನಗರದಲ್ಲಿ ಎರಡನೇ ಮಳಿಗೆ ತೆರೆದಿತ್ತು. ಈಗ ಬೆಂಗಳೂರಿನಲ್ಲಿ ದೇಶದ ಮೂರನೇ ಮಳಿಗೆ ಉದ್ಘಾಟನೆಗೆ ಸಿದ್ಧವಾಗಿದೆ.

10,500 ಕೋಟಿ ರೂ. ಹೂಡಿಕೆ

10,500 ಕೋಟಿ ರೂ. ಹೂಡಿಕೆ

2025 ರ ಹೊತ್ತಿಗೆ ಭಾರತದಲ್ಲಿ 30 ಮಳಿಗೆಗಳ ಸ್ಥಾಪನೆಗೆ ಯೋಜನೆ ರೂಪಿಸಿರುವುದಾಗಿ ಐಕಿಯ ಹೇಳಿಕೊಂಡಿದೆ. 2013ರಲ್ಲಿ, ಕೇಂದ್ರ ಸರ್ಕಾರದಿಂದ ದೇಶದಲ್ಲಿ 10,500 ಕೋಟಿ ರೂ. ಹೂಡಿಕೆ ಮಾಡಲು ಅನುಮತಿ ಪಡೆದಿತ್ತು.

ಐಕಿಯ ಒಡೆತನ ಹೊಂದಿರುವ ಇಂಕಾ ಗ್ರೂಪ್‌ನ ಸಿಇಒ ಜೆಸ್ಟರ್ ಬ್ರೋಡಿನ್ ಪೀಠೋಪಕರಣ ಮಳಿಗೆ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ. ಐಕಿಯ ಸಂಸ್ಥೆಯ ಭಾರತದ ಪ್ರಧಾನ ಕಚೇರಿ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ.

ಕಡಿಮೆ ದರದಲ್ಲಿ ಗುಣಮಟ್ಟದ ಪೀಠೋಪಕರಣ

ಕಡಿಮೆ ದರದಲ್ಲಿ ಗುಣಮಟ್ಟದ ಪೀಠೋಪಕರಣ

ಕಡಿಮೆ ಸ್ಥಳಾವಕಾಶಗಳಿಗಾಗಿ ಜಾಣ್ಮೆಯಿಂದ ಪೀಠೋಪಕರಣಗಳನ್ನು ವಿನ್ಯಾಸಗೊಳಿಸುತ್ತದೆ. ಕಡಿಮೆ ವೆಚ್ಚದಲ್ಲಿ ಮನೆಗಳ ನಿರ್ಮಾಣ ಮಾಡುವವರಿಗೆ ಐಕಿಯ ಗೃಹೋಪಯೋಗಿ ಪೀಠೋಪಕರಣಗಳು ಗ್ರಾಹಕರಿಗೆ ಇಷ್ಟವಾಗುತ್ತವೆ ಎನ್ನುವ ಆಲೋಚನೆಯಿಂದ ಸಂಸ್ಥೆ ಬೃಹತ್ ಬಂಡವಾಳ ಹೂಡಿದೆ.

ಬೆಂಗಳೂರಿನಲ್ಲಿ ಬ್ರಿಗೇಡ್ ಸಮೂಹ ನಿರ್ಮಿಸಿರುವ ಮನೆಗಳಲ್ಲಿ ಐಕಿಯ ಸಂಸ್ಥೆಯ ಪೀಠೋಪಕರಣಗಳನ್ನೇ ಬಳಸಿದೆ. ಉತ್ತಮ ಗುಣಮಟ್ಟ ಪೀಠೋಪಕರಣಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುವುದರಿಂದ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+