ಐಡಿಯಾದಿಂದ ದಿನಕ್ಕೊಂದು ಜಿಬಿ ಡೇಟಾ ಆಫರ್
ಬೆಂಗಳೂರು, ಡಿಸೆಂಬರ್ 10: ಟೆಲಿಕಾಂ ಕಂಪನಿಗಳು ಪೈಪೋಟಿಗೆ ಬಿದ್ದು ಆಫರ್ ಗಳ ಮೇಲೆ ಆಫರ್ ನೀಡುತ್ತಿದ್ದು, ಏರ್ ಟೆಲ್ ನಂತರ ಐಡಿಯಾ ಸೆಲ್ಯುಲಾರ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಕೊಡುಗೆ ನೀಡುತ್ತಿದೆ.
ಪ್ರಮುಖ ಟೆಲಿಕಾಂ ಕಂಪನಿಯಾಗಿರುವ ಐಡಿಯಾ ಸೆಲ್ಯುಲಾರ್ 509 ರೂ. ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ಇದರಲ್ಲಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 1 ಜಿ.ಬಿ. 3 ಜಿ ಡೇಟಾ, 100 ನ್ಯಾಷನಲ್ ಮೆಸೇಜ್, ಉಚಿತ ಕರೆ ಸೌಲಭ್ಯ ನೀಡಲಾಗಿದೆ.
ಇದರ ಜೊತೆಗೆ ಐಡಿಯಾದಿಂದ ಹೆಚ್ಚುವರಿ 1 ಜಿ.ಬಿ. ಡೇಟಾವನ್ನು 28 ದಿನಗಳವರೆಗೆ ಉಚಿತವಾಗಿ ನೀಡಲಿದೆ. ಮೈ ಐಡಿಯಾ ಅಪ್ಲಿಕೇಷನ್ ಅಥವಾ ಐಡಿಯಾ ವೆಬ್ ಸೈಟ್ ಮೂಲಕ 509 ರೂ. ರೀಚಾರ್ಜ್ ಮಾಡಿಕೊಂಡರೆ ಮಾತ್ರ ಈ ಸೌಲಭ್ಯ ಪಡೆಯಬಹುದಾಗಿದೆ. ಇದರೊಂದಿಗೆ ಐಡಿಯಾ 300 ರೂ.ಗಿಂತ ಹೆಚ್ಚಿನ ಮೊತ್ತದ ರೀಚಾರ್ಜ್ ಗಳಿಗೆ ಶೇ. 100 ರಷ್ಟು ಕ್ಯಾಶ್ ಬ್ಯಾಕ್ ಆಫರ್ ಕೂಡಾ ಇದೆ.

ಇತರೆ ಯೋಜನೆಗಳು:
357 ರು ಪ್ಲಾನ್: 100 ರಷ್ಟು ಕ್ಯಾಶ್ ಬ್ಯಾಕ್, ಇಂಟರ್ನೆಟ್ 1 ಜಿಬಿ ಪ್ರತಿದಿನ, ಉಚಿತ ಎಸ್ಟಿಡಿ/ರೋಮಿಂಗ್ ಕರೆ, 28ದಿನಗಳ ವ್ಯಾಲಿಡಿಟಿ.
449 ಪ್ಲಾನ್: 100 ರಷ್ಟು ಕ್ಯಾಶ್ ಬ್ಯಾಕ್, ಇಂಟರ್ನೆಟ್ 1 ಜಿಬಿ ಪ್ರತಿದಿನ, ಉಚಿತ ಎಸ್ಟಿಡಿ/ರೋಮಿಂಗ್ ಕರೆ, 70 ದಿನಗಳ ವ್ಯಾಲಿಡಿಟಿ.
509 ಪ್ಲಾನ್ : 100 ರಷ್ಟು ಕ್ಯಾಶ್ ಬ್ಯಾಕ್, ಇಂಟರ್ನೆಟ್ 1 ಜಿಬಿ ಪ್ರತಿದಿನ, ಉಚಿತ ಎಸ್ಟಿಡಿ/ರೋಮಿಂಗ್ ಕರೆ, 84ದಿನಗಳ ವ್ಯಾಲಿಡಿಟಿ.
179 ಪ್ಲಾನ್ : ಇಂಟರ್ನೆಟ್ 1 ಜಿಬಿ ಪ್ರತಿದಿನ, ಉಚಿತ ಎಸ್ಟಿಡಿ/ರೋಮಿಂಗ್ ಕರೆ, 28 ದಿನಗಳ ವ್ಯಾಲಿಡಿಟಿ.












Click it and Unblock the Notifications