50,000 ರೂಪಾಯಿಗಳ ವಹಿವಾಟಿಗೆ ಐಡಿ ಕಾರ್ಡ್ ಕಡ್ಡಾಯ!
ಬೆಂಗಳೂರು, ಅಕ್ಟೋಬರ್ 24: ಮನಿಲಾಂಡ್ರಿಂಗ್, ಕಪ್ಪು ಹಣದ ಮೇಲೆ ನಿಯಂತ್ರಣ ಸಾಧಿಸಲು ವಿತ್ತ ಸಚಿವಾಲಯ ಮತ್ತೊಂದು ಕಠಿಣ ಕ್ರಮ ಕೈಗೊಂಡಿದೆ. 50,000 ರೂಪಾಯಿಗಿಂತ ಅಧಿಕ ಮೊತ್ತದ ಹಣಕಾಸು ವ್ಯವಹಾರಕ್ಕೆ ಮೂಲ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ.
ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ 50,000 ರೂಪಾಯಿಗಿಂತ ಅಧಿಕ ಮೊತ್ತದ ಎಲ್ಲಾ ಹಣಕಾಸು ವಹಿವಾಟಿಗೆ ಈ ನಿಯಾಮ ಕಡ್ಡಾಯವಾಗಿದೆ. ಕಪ್ಪು ಹಣ ನಿಯಂತ್ರಣಕ್ಕಾಗಿ ಸರ್ಕಾರ ಈ ನಿಯಮವನ್ನು ಜಾರಿ ಮಾಡಿದೆ.

ಅಧಿಕೃತವಾಗಿ ಮಾನ್ಯ ಮಾಡಿರುವ ಗುರುತಿನ ದಾಖಲೆಯನ್ನು ಕಡ್ಡಾಯವಾಗಿ ಸಲ್ಲಿಸಲೇಬೇಕು. ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್(PMLA) ಅಡಿಯಲ್ಲಿ ಈ ಹೊಸ ನಿಯಮ ಜಾರಿಗೆ ಬಂದಿದೆ. ಸ್ಟಾಕ್ ಬ್ರೋಕರ್ ಗಳು ಕೂಡ ತಮ್ಮ ಗ್ರಾಹಕರ ಐಡಿ ಪ್ರೂಫ್ ಗಳನ್ನು ಪರಿಶೀಲಿಸಬೇಕಿದೆ.
ಚಿಟ್ ಫಂಡ್ ಕಂಪನಿಗಳು, ಕೋ ಆಪರೇಟಿವ್ ಬ್ಯಾಂಕ್ ಗಳು, ಹೌಸಿಂಗ್ ಫೈನಾನ್ಸ್ ಸಂಸ್ಥೆಗಳು, ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿಗಳಿಗೂ ಹೊಸ ನಿಯಮ ಅನ್ವಯವಾಗಲಿದೆ. ವಿದ್ಯುತ್ ಬಿಲ್, ನೀರಿನ ಬಿಲ್, ಟೆಲಿಫೋನ್ ಬಿಲ್, ಪೋಸ್ಟ್ ಪೇಯ್ಡ್ ಮೊಬೈಲ್ ಬಿಲ್ ಗಳನ್ನು ಕೂಡ ದಾಖಲೆಯಾಗಿ ಸಲ್ಲಿಸಬಹುದಾಗಿದೆ.












Click it and Unblock the Notifications