ಎಟಿಎಂ ಬಳಕೆ ವೆಚ್ಚ ಏರಿಕೆ, ಈಗ ಐಸಿಐಸಿಐ ಸರದಿ

ಬೆಂಗಳೂರು, ಡಿ.9: ಎಟಿಎಂ ಬಳಕೆ ಉಚಿತ ಮಿತಿಗೆ ಆರ್ ಬಿಐ ಕಡಿವಾಣ ಹಾಕಿದ ಮೇಲೆ ಒಂದೊಂದಾಗಿ ಬ್ಯಾಂಕುಗಳು ನಿರ್ವಹಣಾ ವೆಚ್ಚವನ್ನು ಏರಿಕೆ ಮಾಡುತ್ತಿವೆ. ಎಚ್ ಡಿಎಫ್ ಸಿ, ಏಕ್ಸಿಸ್ ಬ್ಯಾಂಕ್ ನಂತರ ಐಸಿಐಸಿಐ ಬ್ಯಾಂಕ್ ಕೂಡಾ ತನ್ನ ಗ್ರಾಹಕರ ಮೇಲೆ ಬಳಕೆ ವೆಚ್ಚದ ಹೊರೆ ಹಾಕುತ್ತಿದೆ.

ಡಿ.1 ರಿಂದ 5 ಬಾರಿಗಿಂತ ಹೆಚ್ಚು ಎಟಿಎಂ ಬಳಕೆ ಮಾಡಿದರೆ ಹೆಚ್ಚಿನ ಪ್ರಮಾಣದ ನಿರ್ವಹಣೆ ವೆಚ್ಚ ನೀಡಬೇಕಾಗುತ್ತದೆ ಎಂದು ಈಗಾಗಲೇ ಎಚ್ ಡಿಎಫ್ ಸಿ ಹಾಗೂ ಎಕ್ಸಿಸ್ ಬ್ಯಾಂಕ್ ಘೋಷಿಸಿದೆ. ಈಗ ಐಸಿಐಸಿಐ ಬ್ಯಾಂಕ್ ಕೂಡಾ ಇದೇ ಹಾದಿ ತುಳಿದಿದ್ದು, ಜನವರಿ 1, 2015ರಿಂದ ಉಳಿತಾಯ ಖಾತೆ ಹೊಂದಿರುವ ತನ್ನ ಎಲ್ಲಾ ಗ್ರಾಹಕರಿಗೆ ಎಟಿಎಂ ಬಳಕೆ ವೆಚ್ಚ ಏರಿಕೆ ಮಾಡಿರುವುದಾಗಿ ಘೋಷಿಸಿದೆ.

ICICI Bank to Hike ATM charges from Jan 1, 2015

ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದ ಸುತ್ತೋಲೆ ಪ್ರಕಾರ ಗ್ರಾಹಕರು ಒಂದು ತಿಂಗಳಿನಲ್ಲಿ ತಮ್ಮ ಬ್ಯಾಂಕುಗಳ ಎಟಿಎಂಗಳನ್ನು 5ಕ್ಕಿಂತ ಹೆಚ್ಚು ಬಾರಿ ಬಳಕೆ ಮಾಡಿದರೆ ಅಥವಾ ಇತರೆ ಬ್ಯಾಂಕ್ ಎಟಿಎಂನಲ್ಲಿ 3ಕ್ಕಿಂತ ಹೆಚ್ಚು ಬಾರಿ ವ್ಯವಹಾರ ನಡೆಸಿದರೆ 20 ರು ಅಧಿಕ ವೆಚ್ಚ ತೆರಬೇಕಾಗುತ್ತದೆ.

ಈ ವೆಚ್ಚದಲ್ಲಿ ಎಟಿಎಂ ಸೇವಾ ತೆರಿಗೆ ಕೂಡಾ ಸೇರಿದೆ ಹಾಗೂ non-financial ವ್ಯವಹಾರಕ್ಕೆ ಪ್ರತಿ ಬಾರಿ 8.50 ರು ವೆಚ್ಚವಾಗುತ್ತಿದೆ. ಬೆಂಗಳೂರು, ಚೆನ್ನೈ, ಮುಂಬೈ,ನವದೆಹಲಿ,ಕೋಲ್ಕತ್ತಾ, ಹೈದರಾಬಾದ್ ನಲ್ಲಿ ಮೊದಲಿಗೆ ಹೊಸ ದರ ಜಾರಿಗೆ ಬರಲಿದೆ.[ಮಿತಿ ಮೀರಿದ ಎಟಿಎಂ ಬಳಕೆ ಕೈ ಕಚ್ಚಲಿದೆ]

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾತ್ರ ತನ್ನ ಗ್ರಾಹಕರಿಗೆ ಎಟಿಎಂ ವ್ಯವಹಾರ(Financial ಅಥವಾ non-financial)ಕ್ಕೆ ನಿರ್ಬಂಧ ಹೇರುವುದಿಲ್ಲ ಎಂದು ಪ್ರಕಟಿಸಿದೆ. [ಬೇರೆ ಬ್ಯಾಂಕ್ ಎಟಿಎಂಗೆ ಹೋಗೋ ಮುನ್ನ ಓದಿ]

ಒಂದು ಬ್ಯಾಂಕಿನ ಗ್ರಾಹಕರು ಬೇರೊಂದು ಎಟಿಎಂನಲ್ಲಿ ದುಡ್ಡು ಡ್ರಾ ಮಾಡಿದರೆ ಬ್ಯಾಂಕಿನವರು ಇಷ್ಟು ಹಣವನ್ನ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಹೀಗೆ ಪ್ರತಿ ಬಾರಿ ದುಡ್ಡು ಡ್ರಾ ಮಾಡಿದಾಗಲೂ ಬ್ಯಾಂಕಿಗೆ ಹೊರೆ ಬೀಳುತ್ತಲೇ ಹೋಗುತ್ತದೆ. ಹೀಗಾಗಿ, ಬ್ಯಾಂಕುಗಳಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತಿದೆ

ಎಟಿಎಂನಲ್ಲಿ ಗ್ರಾಹಕರು ಹಣ ಪಡೆಯುವುದು, ಬ್ಯಾಲೆನ್ಸ್ ಬಗ್ಗೆ ತಿಳಿದುಕೊಳ್ಳುವುದು, ಅಕೌಂಟ್ ಸ್ಟೇಟ್ ಮೆಂಟ್ ಪಡೆದುಕೊಳ್ಳುವುದು, ಚೆಕ್ ಬುಕ್ ಮನವಿ ಸಲ್ಲಿಸುವುದು ಎಲ್ಲವೂ ಮಿತಿ ಮೀರಿದರೆ ಕೈಕಚ್ಚಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+