ಹಳೆಯ 'ಹುಂಡೈ ಐ 10' ಕಾರು ಮಾರಾಟ ಸ್ಥಗಿತ
2007ರಲ್ಲಿ ಬಿಡುಗಡೆಯಾ ಭಾರೀ ಜನಪ್ರಿಯತೆ ಗಳಿಸಿ ಜನರ ವಿಶ್ವಾಸಾರ್ಹ ಕಾರು ಬ್ರಾಂಡ್ ಗಲ್ಲೊಂದಾಗಿದ್ದ ಹುಂಡೈ ಐ 10.
ನವದೆಹಲಿ, ಮಾರ್ಚ್ 9: ದಕ್ಷಿಣ ಕೊರಿಯಾ ಮೂಲದ ಹುಂಡೈ ಕಾರು ತಯಾರಿಕಾ ಕಂಪನಿಯು ತನ್ನ ಜನಪ್ರಿಯ ಕಾರು ಐ 10 ಮಾದರಿಯ ಈವರೆಗಿನ ಮಾಡೆಲ್ ಗಳ ತಯಾರಿಕೆಯನ್ನು ಸ್ಥಗಿತಗೊಳಿಸಿರುವುದಾಗಿ ಪ್ರಕಟಿಸಿದೆ.
2007ರಲ್ಲಿ ಬಿಡುಗಡೆಯಾಗಿದ್ದ ಹುಂಡೈ ಐ 10 ಭಾರೀ ಜನಪ್ರಿಯತೆ ಗಳಿಸಿ ಜನರ ವಿಶ್ವಾಸಾರ್ಹ ಕಾರು ಬ್ರಾಂಡ್ ಗಲ್ಲೊಂದಾಗಿತ್ತು. ಆ ಮಾದರಿಯ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿ ಸದ್ಯದ ಮಾರುಕಟ್ಟೆಗೆ ತಕ್ಕಂತೆ ಕಾರನ್ನು ನವೀಕರಿಸಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.

'ಐ 10' ಮಾಡೆಲ್ ಅನ್ನು ಕೊಂಡಾಡಿರುವ ಹುಂಡೈ ಕಂಪನಿ, ಭಾರತ ಹಾಗೂ ವಿಶ್ವದಾದ್ಯಂತ ಈ ಮಾದರಿಯ ಸುಮಾರು 16.95 ಲಕ್ಷ ಕಾರುಗಳನ್ನು ಮಾರಾಟ ಮಾಡಿರುವುದಾಗಿ ಕಂಪನಿ ಹೇಳಿದೆಯಲ್ಲದೆ, ಭಾರತದಲ್ಲಿ ತನ್ನ ವ್ಯಾಪಾರ ಆರಂಭಿಸಿದಾಗ ತಮ್ಮ ಕಂಪನಿ ಭದ್ರವಾಗಿ ನೆಲೆಯೂರಲು ಐ 10 ಹೆಚ್ಚು ಸಹಾಯ ಮಾಡಿತ್ತೆಂದು ಸ್ಮರಿಸಿಕೊಂಡಿದೆ.












Click it and Unblock the Notifications