Get Updates
Get notified of breaking news, exclusive insights, and must-see stories!

ಸಮುದ್ರದ ಪ್ಲಾಸ್ಟಿಕ್‌ ತ್ಯಾಜ್ಯ ಬಳಸಿ ತಯಾರಾದ ಎಚ್‌ಪಿ PC ಬಿಡುಗಡೆ

ಬೆಂಗಳೂರು, ಫೆಬ್ರವರಿ 23: ಎಚ್‌ಪಿ ಸಂಸ್ಥೆ ತನ್ನ ಪೆವಿಲಿಯನ್ ಸರಣಿಗೆ ಅಪ್‌ಡೇಟ್ ಘೋಷಿಸಿದೆ. HP Pavilion 13, HP Pavilion 14, and HP Pavilion ಹಾಗೂ 15 Laptop ಗಳು ಅತ್ಯಾಕರ್ಷಕವಾಗಿವೆ. ಬಳಕೆದಾರರು ಬಳಸಿ ಎಸೆದು ಸಮುದ್ರಕ್ಕೆ ಸೇರಿರುವ ಪ್ಲಾಸ್ಟಿಕ್‌ಗಳಿಂದ ಇವುಗಳನ್ನು ಮಾಡಲಾಗಿದೆ. ಈ ಪೆವಿಲಿಯನ್ ಸರಣಿಯು ವಿಶಿಷ್ಟ ಬಣ್ಣಗಳಲ್ಲಿ ಲಭ್ಯವಿದ್ದು 11th Gen Intel® CoreTM ಪ್ರೋಸೆಸರ್ ಹಾಗೂ Intel® Iris® Xe ಗ್ರಾಫಿಕ್ಸ್ ಒಳಗೊಂಡಿದೆ.

ಈ ಹೊಸ ಪೆವಿಲಿಯನ್ ನೋಟ್‌ಬುಕ್‌ಗಳು ಸಮುದ್ರ ಹಾಗೂ ತ್ಯಾಜ್ಯ ಗುಂಡಿಗಳಿಂದ ಸಂಗ್ರಹಿಸಿದ ಸುಮಾರು 92,000 ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ನಿರ್ಮಿಸಲಾದ ಸ್ಪೀಕರ್ ಹೌಸಿಂಗ್ ಒಳಗೊಂಡಿದ್ದು, ಹೊಸ ಸಾಧನದ ಪ್ಯಾಕೇಜಿಂಗ್‌ಗೆ ಬಳಸಲಾದ ಹೊರ ಆವರಣದ ಬಾಕ್ಸ್ ಮತ್ತು ಫೈಬರ್ ಕುಷನ್ ಕೂಡ ಶೇ. 100ರಷ್ಟು ಸುಸ್ಥಿರವಾಗಿವೆ ಹಾಗೂ ಮರುಬಳಕೆ ಮಾಡುವಂಥವಾಗಿವೆ. ಈ ಲ್ಯಾಪ್‌ಟಾಪ್‌ಗಳು EPEAT Silver ನೋಂದಣೀಯಾಗಿವೆ ಹಾಗೂ Energy Star ಪ್ರಮಾಣಿತವಾಗಿವೆ ಎಂದು ವಿಕ್ರಂ ಬೇಡಿ, ಹಿರಿಯ ನಿರ್ದೇಶಕರು, ಪರ್ಸನಲ್ ಸಿಸ್ಟಮ್ಸ್, ಎಚ್‌ಪಿ ಇಂಡಿಯಾ ಮಾರ್ಕೆಟ್ ಹೇಳಿದ್ದಾರೆ.

HP Pavilion 13 ನೈಸರ್ಗಿಕ ರಜತ ವರ್ಣದಲ್ಲಿ 8:30 ಗಂಟೆಗಳ ಬ್ಯಾಟರಿ ಬ್ಯಾಕ್-ಅಪ್ ಹಾಗೂ Wi-Fi 6 ಜತೆಗೆ ಶಕ್ತಿಶಾಲಿಯಾಗಿದೆ.

ಹೊಸ ಪೆವಿಲಿಯನ್ ಪಿಸಿಗಳು ಕಲಾತ್ಮಕವಾಗಿವೆ. ಇದನ್ನು ಎಲ್ಲ ಮೂರು ಬದಿಗಳಿಂದ ಸುಲಭವಾಗಿ ತೆರೆಯುವಂತೆ ವಿನ್ಯಾಸಗೊಳಿಸಲಾಗಿದೆ. ಲೋಹದ 3ಡಿ ಚಾಸ್ಸಿಯನ್ನು ಹೊಂದಿದ್ದು, ತೆಳುವಾಗಿ, ಅಚ್ಚುಕಟ್ಟಾಗಿ, ಆಕರ್ಷಕವಾಗಿವೆ. ಸೆರಾಮಿಕ್ ವೈಟ್‌ನಲ್ಲಿ ಎಇಡಿ ಫಿನಿಶ್ ನೀಡಲಾಗಿದೆ.

ಪೆವಿಲಿಯನ್ ಸರಣಿಯಲ್ಲಿ ಉತ್ತಮ ಪ್ರೊಸೆಸರ್

ಪೆವಿಲಿಯನ್ ಸರಣಿಯಲ್ಲಿ ಉತ್ತಮ ಪ್ರೊಸೆಸರ್

Pavilion 15 ಶೇ. 86ರಷ್ಟು ಸ್ಕ್ರೀನ್ ಟು ಬಾಡಿ ಅನುಪಾತ (STBR) ಹೊಂದಿದೆ. ಉದ್ದ-ಅಗಲದ ಆಯಾಮಗಳನ್ನೂ ಸುಧಾರಿಸಲಾಗಿದೆ. ಮೂರು ಕಡೆಗಳಲ್ಲಿ ಮೈಕ್ರೋ ಅಂಚುಗಳುಳ್ಳ ಡಿಸ್‌ಪ್ಲೇ ಹೊಂದಿದೆ. Pavilion 13 Full HD ಡಿಸ್‌ಪ್ಲೇ ಒದಗಿಸುತ್ತಿದ್ದರೆ, Pavilion 14 ಹಾಗೂ Pavilion 15 ಒಂದೋ HD ಅಥವಾ Full HD ಪ್ಯಾನೆಲ್ ಹೊಂದಿವೆ. ಈ ಸಾಧನಗಳು Microsoft High Dynamic Range (HDR) ಸ್ಟ್ರೀಮಿಂಗ್ ಸಾಮರ್ಥ್ಯ, ಹೈ ಡೆಫಿನಿಶನ್ ವೀಡಿಯೋ ಕೋಡಿಂಗ್ (HEVC), FHD ಪ್ಯಾನೆಲ್ ಒಳಗೊಂಡಿದ್ದು, ವರ್ಣರಂಜಿತ ದೃಶ್ಯಾತ್ಮಕ ಅನುಭವಗಳಿಗೆ ಸಾಕ್ಷಿಯಾಗುತ್ತದೆ. ಅನುಭವವನ್ನು ಪರಿಪೂರ್ಣವಾಗಿಸಲು ಎಚ್‌ಪಿ 16GB RAM/512SSD ಹಾಗೂ FPR ಒಳಗೊಂಡಿದೆ.

ನೈಸರ್ಗಿಕ ಬೆಳ್ಳಿ, ಸೆರಾಮಿಕ್ ವೈಟ್ ವರ್ಣ ಸಂಯೋಜನೆಗಳಲ್ಲಿ ಇವು ಲಭ್ಯವಿವೆ. Pavilion14 ಟ್ರಾಂಕ್ವಿಲ್ ಪಿಂಕ್ ಬಣ್ಣದಲ್ಲೂ ಲಭ್ಯವಿದೆ. Pavilion 15 ಫಾಗ್ ಬ್ಲೂ ಸಹಿತ ನಾಲ್ಕು ವರ್ಣಗಳಲ್ಲಿ ಲಭ್ಯವಿದೆ.

ಅಂಚಿನಿಂದ ಅಂಚಿನ ವರೆಗೆ ದೊಡ್ಡ ಗಾತ್ರದ, ಆಧುನಿಕ ಹಾಗೂ ನಿಖರವಾದ ಮಲ್ಟಿ ಟಚ್ ಸೌಲಭ್ಯದ ಟಚ್ ಪ್ಯಾಡ್, ಸುಲಭದ ನ್ಯಾವಿಗೇಶನ್ ಹಾಗೂ ಸುರಕ್ಷಿತ ಲಾಗ್-ಇನ್ ಹಾಗೂ ಐಚ್ಛಿಕ ಫಿಂಗರ್ ಪ್ರಿಂಟ್ ರೀಡರ್ ಜತೆಗೆ ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ.

ಈ ಪೆವಿಲಿಯನ್ ಪಿಸಿಗಳು 11th Gen Intel® CoreTM ಪ್ರೋಸೆಸರ್ಸ್ ಹಾಗೂ Intel® Iris® Xe ಗ್ರಾಫಿಕ್ಸ್ ಒಳಗೊಂಡಿವೆ. Pavilion 14 ಹಾಗೂ Pavilion 15 NVIDIA® GeForce® MX450 ವರೆಗಿನ ಆಯ್ಕೆಗಳನ್ನು ಒದಗಿಸುತ್ತದೆ.

ಇತರ ವೈಶಿಷ್ಟ್ಯಗಳು

ಇತರ ವೈಶಿಷ್ಟ್ಯಗಳು

  • ಡ್ಯುಯಲ್ ಚಾನೆಲ್ ಮೆಮೊರೆ ತಂತ್ರಜ್ಞಾನ, Intel® OptaneTM ಮೆಮೊರಿ ಹಾಗೂ 1 ಟಿಬಿ ವರೆಗಿನ ಸಂಗ್ರಹ ಸಾಮರ್ಥ್ಯವಿರುವ ಎಲ್ಲ ಮೂರು ಸಾಧನಗಳಲ್ಲೂ ಫೈಲ್‌ಗಳನ್ನು ತ್ವರಿತವಾಗಿ ತೆರೆಯಬಹುದು, ಸಂಗ್ರಹಿಸಬಹುದು.
  • ಬ್ಯಾಟರಿ ಬಾಳಿಕೆ: ಎಚ್‌ಪಿ ಲ್ಯಾಪ್‌ಟಾಪ್‌ಗಳು ಒಂದು ದಿನದ ಕೆಲಸಕ್ಕೆ ಸಾಕಾಗುವಷ್ಟು ಬ್ಯಾಟರಿ ಬಾಳಿಕೆ ಹೊಂದಿವೆ. Pavilion 13 ಸುಮಾರು 8.5 ಗಂಟೆ, Pavilion 14 ಹಾಗೂ Pavilion 15 ಸುಮಾರು 8.75 ಗಂಟೆಗಳಷ್ಟು ಬಾಳಿಕೆ ಬರುತ್ತದೆ.
  • ಬ್ಯಾಟರಿ ಜೀವಿತಾವಧಿಯನ್ನು ಹಾಗೂ ಕ್ಷಮತೆಯನ್ನು ಹೆಚ್ಚಿಸಲು ಅಡಾಪ್ಟೆಟಿವ್ ಬ್ಯಾಟರಿ ಆಪ್ಟಿಮೈಜರ್ ಲಭ್ಯವಿದೆ.
  • ಉತ್ಪಾದಕ ಪೋರ್ಟ್‌ಗಳು: HDMI 2.0 ಪೋರ್ಟ್ ಬಾಹ್ಯ 5K ಮಾನಿಟರ್ ಜತೆ ಸುಲಭವಾಗಿ ಸಂಪರ್ಕ ಸಾಧಿಸುತ್ತದೆ. ಹಾಗೂ SuperSpeed USB-C® ಪೋರ್ಟ್ ಡಾಟಾ, ಡಿಸ್‌ಪ್ಲೇಗಳನ್ನು ಬೆಂಬಲಿಸುತ್ತದೆ.
ನಾಲ್ಕು ಪಟ್ಟು ವೇಗದ ವೈ-ಫೈ ಸಂಪರ್ಕವನ್ನು ಒದಗಿಸುತ್ತವೆ

ನಾಲ್ಕು ಪಟ್ಟು ವೇಗದ ವೈ-ಫೈ ಸಂಪರ್ಕವನ್ನು ಒದಗಿಸುತ್ತವೆ

  • ಹೆಚ್ಚು ವೇಗದೊಂದಿಗೆ ಸದಾ ಸಂಪರ್ಕದಲ್ಲಿರಿ: Wi-Fi 6 ಜತೆಗೆ, ಪೆವಿಲಿಯನ್ ಪಿಸಿಗಳು ನಾಲ್ಕು ಪಟ್ಟು ವೇಗದ ವೈ-ಫೈ ಸಂಪರ್ಕವನ್ನು ಒದಗಿಸುತ್ತವೆ.
  • ಸುಲಭ ಬಳಕೆ, ಯಾವುದೇ ಸಂದರ್ಭದಲ್ಲಿ: ಎಚ್‌ಪಿಯ ಮಾಡರ್ನ್ ಸ್ಟ್ಯಾಂಡ್ ಬೈ ವ್ಯವಸ್ಥೆ ಇರುವ ಕಾರಣ ಲ್ಯಾಪ್‌ಟಾಪ್ ತೆರೆದೊಡನೆಯೇ ಸ್ಲೀಪ್ ಮೋಡ್‌ನಿಂದ ಹೊರಬಂದು ಪವರ್ ಸ್ಲೀಪ್ ಸ್ಥಿತಿಯಲ್ಲೂ ಸ್ವೀಕರಿಸಿದ ಇ-ಮೇಲ್ ಹಾಗೂ ಪ್ರಕಟಣೆಗಳನ್ನು ನೋಡಲು, ಸಂಗೀತ ಕೇಳಲು ಸಹಾಯ ಮಾಡುತ್ತದೆ.
  • ಅದ್ಭುತ ದೃಕ್-ಶ್ರವಣ ಅನುಭವ: ಎಚ್‌ಪಿ ಡ್ಯುಯಲ್ ಸ್ಪೀಕರ್‌ಗಳು, ಎಚ್‌ಪಿ ಆಡಿಯೋ ಬೂಸ್ಟ್ ಹಾಗೂ ಬಿ ಅಂಡ್ ಒ ದಿಂದ ಟ್ಯೂನ್ ಮಾಡುವ ಸೌಲಭ್ಯವು ಉತ್ತಮವಾದ ಶ್ರವಣ ಅನುಭವವನ್ನು ನೀಡುವುದು. ಎಚ್‌ಪಿ ವೈಡ್ ವಿಜನ್ ಎಚ್‌ಡಿ ಕ್ಯಾಮೆರಾ 88 ಡಿಗ್ರಿಗಳ ವರೆಗಿನ ಕೋನದ ವಿಶಾಲವಾದ ಚಿತ್ರಗಳನ್ನು ಸುಸ್ಪಷ್ಟವಾದ ವಿವರಗಳೊಂದಿಗೆ ನೀಡುತ್ತದೆ.

HP Pavilion 14 ಕೆಲಸ ಹಾಗೂ ಆಟಗಳಿಗಾಗಿ ವಿನ್ಯಾಯಗೊಳಿಸಲಾಗಿದೆ. ಎಲ್ಲ ಪೋರ್ಟ್‌ಗಳು ಉತ್ಪಾದಕವಾಗಿವೆ. ವೀಡಿಯೋ ಚಾಟ್ ಹಾಗೂ ಡಿಜಿಟಲ್ ಲರ್ನಿಂಗ್‌ಗೆ ಅನುಕೂಲವಾಗುವಂತೆ ಎಚ್‌ಪಿ ವೈಡ್ ವಿಜನ್ ಎಚ್‌ಡಿ ಕ್ಯಾಮೆರಾ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಎಲ್ಲ HP World ಸ್ಟೋರ್ ಗಳಲ್ಲಿ ಹಾಗೂ ಆನ್ ಲೈನಲ್ಲಿ hp ವೆಬ್ ತಾಣದಲ್ಲಿ ಲಭ್ಯ.

· HP Pavilion Laptop 13-bb0075TU ರೂ. 71999 ಆರಂಭಿಕ ಬೆಲೆಯೊಂದಿಗೆ ಲಭ್ಯ. ಸ್ಕ್ರೀನ್ ಗಾತ್ರ 13 ಇಂಚು, i5 ಮತ್ತು i7 ಮಾದರಿಗಳಲ್ಲಿ ಲಭ್ಯ, 1 ಟಿಬಿ ಸಂಗ್ರಹ ಸಾಮರ್ಥ್ಯ. ಬಣ್ಣಗಳು: ಸಿಲ್ವರ್ / ಸೆರಾಮಿಕ್ ವೈಟ್

· HP Pavilion Laptop 14-dv0053TU ರೂ. 62999 ಆರಂಭಿಕ ಬೆಲೆಯೊಂದಿಗೆ ಲಭ್ಯ. ಸ್ಕ್ರೀನ್ ಗಾತ್ರ 14 ಇಂಚು. i5 ಮತ್ತು i7 ಮಾದರಿಗಳಲ್ಲಿ ಲಭ್ಯ, 1 ಟಿಬಿ ಸಂಗ್ರಹ ಸಾಮರ್ಥ್ಯ. ಬಣ್ಣಗಳು: ಸಿಲ್ವರ್ / ಸೆರಾಮಿಕ್ ವೈಟ್ ಹಾಗೂ ಟ್ರಾಂಕ್ವಿಲ್ ಪಿಂಕ್

· HP Pavilion Laptop 14-dv0084TX ರೂ. 67999 ಆರಂಭಿಕ ಬೆಲೆಯೊಂದಿಗೆ ಲಭ್ಯ. ಸ್ಕ್ರೀನ್ ಗಾತ್ರ 14 ಇಂಚು. i5 GFX ಹಾಗೂ Iris Plus GFX ನಿಂದ ಶಕ್ತಿಶಾಲಿಯಾಗಿದೆ. ಬಣ್ಣ: ಸಿಲ್ವರ್

· HP Pavilion Laptop 15-eg0103TX ರೂ. 69999 ಆರಂಭಿಕ ಬೆಲೆಯೊಂದಿಗೆ ಲಭ್ಯ. ಸ್ಕ್ರೀನ್ ಗಾತ್ರ 15 ಇಂಚು. i5 GFX ಹಾಗೂ Iris Plus GFX ಹೊಂದಿದೆ. ಬಣ್ಣ: ಸಿಲ್ವರ್ / ಸೆರಾಮಿಕ್ ವೈಟ್ / ಫಾಗ್ ಬ್ಲೂ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+