ವಾಟ್ಸಾಪ್‌ನಲ್ಲಿ ಇನ್ನು ಮುಂದೆ ನಿಮಗೆ ನೀವೇ ಮೆಸೇಜ್ ಮಾಡುವುದು ಹೇಗೆ?

ನವದೆಹಲಿ, ನವೆಂಬರ್ 11: ಮೆಟಾ-ಮಾಲೀಕತ್ವದ ವಾಟ್ಸಾಪ್ ಅಪ್ಲಿಕೇಷನ್‌ನಲ್ಲಿ ಮಿಸ್ಡ್ ಕಾಲ್‌ಗಳಿಗೆ ಡು ನಾಟ್ (ಡೋಂಟ್) ಡಿಸ್ಟರ್ಬ್ ಮೋಡ್ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಾಗುತ್ತಿದೆ. ಈ ವಾಟ್ಸಾಪ್ ಬೀಟಾ ಮೂಲಕ ಕೆಲವು ಬೀಟಾ ಪರೀಕ್ಷಕರಿಗಾಗಿ ಹೊಸ ವೈಶಿಷ್ಟ್ಯವನ್ನು ಹೊರ ತರಲಾಗುತ್ತಿದೆ ಎಂದು WaBetaInfo ವರದಿಯಲ್ಲಿ ಉಲ್ಲೇಕಿಸಲಾಗಿದೆ.

ವಾಟ್ಸಾಪ್ ಬಿಡುಗಡೆಗೊಳಿಸುತ್ತಿರುವ ಡು ನಾಟ್ ಡಿಸ್ಟರ್ಬ್ ಮೋಡ್ ಸೌಲಭ್ಯವು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ. ಈ ವೈಶಿಷ್ಟ್ಯವನ್ನು ಬಳಕೆದಾರರು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದನ್ನು ತಿಳಿಸಲಾಗಿದೆ.

ಒಂದು ಬಾರಿ ಡು ನಾಟ್ ಡಿಸ್ಟರ್ಬ್ ಮೋಡ್ ಅನ್ನು ಬಿಡುಗಡೆಗೊಳಿಸಿದ ನಂತರದಲ್ಲಿ ಅದು ಬಳಕೆದಾರರಿಗೆ 'ಸೈಲೆನ್ಸ್ಡ್ ಬೈ ಡು ನಾಟ್ ಡಿಸ್ಟರ್ಬ್' ಎಂಬ ಸಾಲನ್ನು ತೋರಿಸುತ್ತದೆ. ಈ ಮಾಹಿತಿಯನ್ನು ಕರೆ ಸ್ವೀಕರಿಸುವವರು ಮತ್ತು ಕರೆ ಮಾಡುವವರು ಮಾತ್ರ ನೋಡುತ್ತಾರೆ. ಈಗ ವಾಟ್ಸಾಪ್‌ನಲ್ಲಿ ಡು ನಾಟ್ ಡಿಸ್ಟರ್ಬ್ ಮೋಡ್ ಅನ್ನು ಆನ್ ಮಾಡಿದ ವ್ಯಕ್ತಿಯ ಫೋನ್‌ನಿಂದ ಕರೆ ಮಾಡಿದ ವ್ಯಕ್ತಿಗೆ ರಿಸೀವರ್ ಫೀಚರ್ ಅನ್ನು ಹಾಕಿರುವುದು ತಿಳಿದಿರುವುದಿಲ್ಲ. ಇದೇ ರೀತಿ ವಾಟ್ಸಾಪ್‌ನ ಹೊಸ ವೈಶಿಷ್ಟ್ಯದ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.

ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸುವುದು ಸುಲಭ

ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸುವುದು ಸುಲಭ

ಇತ್ತೀಚಿಗೆ ವಾಟ್ಸಾಪ್‌ನಲ್ಲಿ ಸ್ವಯಂ ಸಂದೇಶವನ್ನು ಕಳುಹಿಸುವ ವೈಶಿಷ್ಟ್ಯವನ್ನು ಪರೀಕ್ಷಿಸಲಾಗಿ. ಈ ಆಪ್ಷನ್ ನಿಮಗೆ ಹೆಚ್ಚು ಸುಲಭವಾಗಿ ಸಂದೇಶಗಳನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ ಎಂದು ವರದಿಯಾಗಿದೆ. WABetaInfo ಪ್ರಕಾರ, ವಾಟ್ಸಾಪ್‌ನಲ್ಲಿ ಇದೀಗ ಆಂಡ್ರಾಯ್ಡ್ ಮತ್ತು ಐಒಎಸ್‌ಗಾಗಿ ಅದರ ಬೀಟಾ ಅಪ್ಲಿಕೇಶನ್‌ಗಳಲ್ಲಿ ಕೆಲವು ಬೀಟಾ ಪರೀಕ್ಷಕರಿಗೆ ಸಂದೇಶಗಳನ್ನು ಕಳುಹಿಸಲು ಕೆಲವು ಸುಧಾರಣೆಗಳನ್ನು ಪರೀಕ್ಷಿಸುತ್ತಿದೆ.

ವಾಟ್ಸಾಪ್‌ನಲ್ಲಿನ ಸಂದೇಶಗಳ ಬಗ್ಗೆ ಪರೀಕ್ಷೆ

ವಾಟ್ಸಾಪ್‌ನಲ್ಲಿನ ಸಂದೇಶಗಳ ಬಗ್ಗೆ ಪರೀಕ್ಷೆ

ಆಂಡ್ರಾಯ್ಡ್ 2.22.24.2 ಅಪ್‌ಡೇಟ್‌ಗಾಗಿ ವಾಟ್ಸಾಪ್‌ನ ಬೀಟಾ ಬಿಡುಗಡೆಯಾದ ನಂತರ ಆಯ್ದ ಬೀಟಾ ಪರೀಕ್ಷಕರ ಗುಂಪಿಗೆ "ನಿಮ್ಮೊಂದಿಗಿನ ಸಂದೇಶಗಳನ್ನು" ಹಂಚಿಕೊಳ್ಳಲಾಗಿದೆ. ಆ ಮೂಲಕ ವಾಟ್ಸಾಪ್‌ನಲ್ಲಿ ಇದೀಗ ಸಣ್ಣ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಏಕೆಂದರೆ ಕೆಲವು ಬೀಟಾ ಪರೀಕ್ಷಕರು ವರದಿಯ ಪ್ರಕಾರ, ಇತ್ತೀಚಿನ ಆವೃತ್ತಿಯ ಆಂಡ್ರಾಯ್ಡ್ ಅಪ್ಲಿಕೇಶನ್‌ಗೆ ನವೀಕರಿಸಿದ ನಂತರ ವಾಟ್ಸಾಪ್‌ನಲ್ಲಿ ಚಾಟ್ ಶೀರ್ಷಿಕೆಯಾಗಿ "ನೀವೇ ಸಂದೇಶ ಕಳುಹಿಸುವ" ಆಯ್ಕೆಯನ್ನು ಸೇರಿಸುವ ಮೂಲಕ ಆ ಚಾಟ್ ಅನ್ನು ಹೈಲೈಟ್ ಮಾಡುತ್ತಿದೆ.

ವಾಟ್ಸಾಪ್‌ನಲ್ಲಿ ನಿಮಗೆ ನೀವೇ ಮೆಸೇಜ್ ಕಳುಹಿಸಿಕೊಳ್ಳಿ

ವಾಟ್ಸಾಪ್‌ನಲ್ಲಿ ನಿಮಗೆ ನೀವೇ ಮೆಸೇಜ್ ಕಳುಹಿಸಿಕೊಳ್ಳಿ

ಬಳಕೆದಾರರ ಅನುಕೂಲಕ್ಕಾಗಿ ವಿನೂತನ ಆಯ್ಕೆಯೊಂದನ್ನು ವಾಟ್ಸಾಪ್ ಪರಿಚಯಿಸುವುದಕ್ಕೆ ಮುಂದಾಗಿದೆ. ವಾಟ್ಸಾಪ್‌ನಲ್ಲಿ ಇನ್ನುಂದೆ ಹೊಸದಾದ ಚಾಟ್ ಆಯ್ಕೆಯನ್ನು ಹೊಂದಿರುತ್ತದೆ. ಆ ಮೂಲಕ ನಿಮಗೆ ನೀವೇ ಮೆಸೇಜ್ ಅನ್ನು ಕಳುಹಿಸಿಕೊಳ್ಳಬಹುದು. ಇದರ ಮಧ್ಯೆ ನೀವು wa.me ಅಥವಾ ನೀವು ಮಾತ್ರ ಇರುವ ಗ್ರೂಪ್ ಅನ್ನು ರಚಿಸಿಕೊಳ್ಳಬಹುದು. ಅದರ ಮೂಲಕ ನಿಮಗೆ ನೀವೇ ಮೆಸೇಜ್ ಕಳುಹಿಸಿಕೊಳ್ಳಲು ವಾಟ್ಸಾಪ್ ಅನ್ನು ಬಳಸಿಕೊಳ್ಳಬಹುದು.

ನವೆಂಬರ್ ಮೊದಲ ವಾರದಲ್ಲಿ ಅಪ್‌ಡೇಟ್‌

ನವೆಂಬರ್ ಮೊದಲ ವಾರದಲ್ಲಿ ಅಪ್‌ಡೇಟ್‌

ಕಳೆದ ನವೆಂಬರ್ ಮೊದಲ ವಾರದಲ್ಲಷ್ಟೇ ವಾಟ್ಸಾಪ್ ಅನ್ನು ಅಪ್‌ಡೇಟ್‌ ಮಾಡಿಕೊಳ್ಳುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗಿತ್ತು. ಆ ಮೂಲಕ ನವೆಂಬರ್ 3ರಿಂದ ವಾಟ್ಸಾಪ್ ಅಪ್‌ಡೇಟ್‌ ಮಾಡಿಕೊಂಡವರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿತ್ತು. ಈ ಹಿಂದೆ ಒಂದು ಗ್ರೂಪ್ ಕ್ರಿಯೇಟ್ ಮಾಡಿದಾಗ ಗರಿಷ್ಠ ಸದಸ್ಯರ ಸಂಖ್ಯೆಯು 200 ಗಡಿ ದಾಟುವಂತಿರಲಿಲ್ಲ. ಆದರೆ ಅಪ್‌ಡೇಟ್‌ ಮಾಡಿಕೊಂಡ ನಂತರ ಒಂದೇ ಗ್ರೂಪಿನಲ್ಲಿ 1024 ಸದಸ್ಯರನ್ನು ಸೇರಿಸುವ ಸೌಲಭ್ಯವನ್ನು ನೀಡಲಾಯಿತು. ಇದರ ಜೊತೆಗೆ ಏಕಕಾಲಕ್ಕೆ 32 ಜನರೊಂದಿಗೆ ವಿಡಿಯೋ ಕಾಲ್ ಮಾಡುವುದಕ್ಕೆ ಸಾಧ್ಯವಾಯಿತು. ಇದರೊಂದಿಗೆ ದೊಡ್ಡ ಪ್ರಮಾಣದ(ಲಾರ್ಜ್ ಫೈಲ್) ಫೈಲ್ಸ್ ಅನ್ನು ಕಳುಹಿಸುವುದಕ್ಕೆ ಅವಕಾಶ ಕಲ್ಪಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+