• search

ವಿಶೇಷ ರೀಚಾರ್ಜ್ : ಜಿಯೋಫೋನ್ ಮಾನ್ಸೂನ್ ಹಂಗಾಮ ಪ್ರಾರಂಭ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು, ಜುಲೈ 22: ಹಳೆಯ ಫೀಚರ್ ಫೋನ್‌ಗಳನ್ನು ಕೇವಲ ರೂ. 501 ವಾಸ್ತವಿಕ ಬೆಲೆಗೆ ಹೊಸ ಜಿಯೋಫೋನ್‌ನೊಡನೆ ವಿನಿಮಯ ಮಾಡಿಕೊಳ್ಳಲು ಅನುವುಮಾಡಿಕೊಡಲಿದೆ ಜಿಯೋಫೋನ್ ಮಾನ್ಸೂನ್ ಹಂಗಾಮ

    25 ಮಿಲಿಯನ್ ಭಾರತೀಯರು ಈಗಾಗಲೇ ಜಿಯೋಫೋನ್ ಬಳಸುತ್ತಿದ್ದು ಇನ್ನೂ ಹಲವು ಮಿಲಿಯನ್ ಜನರು ಜಿಯೋಫೋನ್ ಬಳಕೆ ಪ್ರಾರಂಭಿಸಲು ನೆರವಾಗುವಂತೆ ಮಾನ್ಸೂನ್ ಹಂಗಾಮ ಕೊಡುಗೆಯನ್ನು ಘೋಷಿಸಲಾಗಿದೆ. ಈ ಮೂಲಕ ಜಿಯೋಫೋನ್‌ನ ಪ್ರಾರಂಭಿಕ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗುತ್ತಿದೆ. ಡೇಟಾದ ಶಕ್ತಿಯೊಡನೆ ಜಿಯೋ ಭಾರತವನ್ನು ಬದಲಿಸಲು ಹೊರಟಿದೆ.

    ಹಳೆ ಫೀಚರ್ ಫೋನ್‌ ಕೊಟ್ಟು ಜಿಯೋ ಫೋನ್ ಪಡೆಯಿರಿ

    ಜುಲೈ 20, 2018ರ ಸಂಜೆ 5:01ರಿಂದ ಪ್ರಾರಂಭಿಸಿ ಗ್ರಾಹಕರು ತಮ್ಮ ಯಾವುದೇ ಹಳೆಯ ಫೀಚರ್ ಫೋನ್‌ಗಳನ್ನು ಕೇವಲ ರೂ. 501 ವಾಸ್ತವಿಕ ವೆಚ್ಚ ಪಾವತಿಸಿ ಹೊಸ ಜಿಯೋಫೋನ್‌ನೊಡನೆ (ಸದ್ಯದ ಮಾದರಿ) ವಿನಿಮಯ ಮಾಡಿಕೊಳ್ಳಬಹುದು. ಇಷ್ಟು ಕಡಿಮೆ ಪ್ರಾರಂಭಿಕ ವೆಚ್ಚದಿಂದಾಗಿ ಹಲವಾರು ಬಳಕೆದಾರರು ಮೊತ್ತಮೊದಲ ಬಾರಿಗೆ ಡೇಟಾದ ಶಕ್ತಿ ಹಾಗೂ ಅಂತರಜಾಲದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

    ಮಾನ್ಸೂನ್ ಹಂಗಾಮ ವಿನಿಮಯ ಕೊಡುಗೆಯ ವಿವರಗಳು, ಜಿಯೋ ಸಿಮ್ ಪಡೆಯುವ ಬಗ್ಗೆ, ವಿಶೇಷ ರೀಚಾರ್ಜ್ ಪ್ಲಾನ್,ನಿಮ್ಮ ಹಳೆಯ ಫೋನು ವಿನಿಮಯಕ್ಕೆ ಅರ್ಹವೇ?, ಉತ್ತಮಪಡಿಸಲಾದ ಆಪ್ ಇಕೋಸಿಸ್ಟಮ್ ಬಗ್ಗೆ ಇನ್ನಷ್ಟು ವಿವರಗಳನ್ನು ಮುಂದೆ ಓದಿ..

    ಮಾನ್ಸೂನ್ ಹಂಗಾಮ ವಿನಿಮಯ ಕೊಡುಗೆ

    ಮಾನ್ಸೂನ್ ಹಂಗಾಮ ವಿನಿಮಯ ಕೊಡುಗೆ

    1. ಮಾನ್ಸೂನ್ ಹಂಗಾಮ ವಿನಿಮಯ ಕೊಡುಗೆಯ ಅನ್ವಯ ಜಿಯೋಫೋನ್ ಇದೀಗ ರೂ. 501 ವಾಸ್ತವಿಕ ಬೆಲೆಗೆ ದೊರಕಲಿದೆ.

    2. ಹೀಗೆ ಪಾವತಿಸುವ ರೂ. 501 ಮರಳಿಸಬಹುದಾದ ಸುರಕ್ಷತಾ ಠೇವಣಿಯಾಗಿದ್ದು, ಈ ಮೂಲಕ ಜಿಯೋಫೋನ್ ವಾಸ್ತವದಲ್ಲಿ ಉಚಿತವಾಗಿ ದೊರಕಲಿದೆ.

    3. ರೀಟೇಲ್ ಕೇಂದ್ರದಲ್ಲಿ ಯಾವುದೇ ಹಳೆಯ 2ಜಿ/3ಜಿ/4ಜಿ (VOLTE ಅಲ್ಲದ) ಫೋನನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಈ ಕೊಡುಗೆಯನ್ನು ಥಟ್ಟನೆ ಪಡೆದುಕೊಳ್ಳಬಹುದು.

    4. ವಿನಿಮಯ ಮಾಡುತ್ತಿರುವ ಫೋನು ಕೆಲಸಮಾಡುವಂತಿರಬೇಕು. ಹಾಗೆಯೇ ಅದರ ಚಾರ್ಜರ್ ಅನ್ನು ಕೂಡ ಜೊತೆಯಲ್ಲಿ ನೀಡಬೇಕು.

    5. ಹೊಸ ಜಿಯೋಫೋನ್ ಕೊಳ್ಳುವ ಸಂದರ್ಭದಲ್ಲೇ ಹಳೆಯ ಫೋನನ್ನು ರೀಟೇಲರ್‌ಗೆ ಕೊಡಬೇಕು.

    ಜಿಯೋಫೋನ್ ಜೊತೆಗೆ ಜಿಯೋ ಸಿಮ್

    ಜಿಯೋಫೋನ್ ಜೊತೆಗೆ ಜಿಯೋ ಸಿಮ್

    1. ಜಿಯೋಫೋನ್ ಜೊತೆಗೆ ಗ್ರಾಹಕರು ಹೊಸ ಜಿಯೋ ಸಿಮ್ ಅನ್ನು ಪಡೆಯಲಿದ್ದಾರೆ.

    2. ತಮ್ಮ ಸದ್ಯದ ಮೊಬೈಲ್ ಸಂಖ್ಯೆಯನ್ನೇ ಉಳಿಸಿಕೊಳ್ಳಲು ಬಯಸುವ ಗ್ರಾಹಕರು ಮೊಬೈಲ್ ನಂಬರ್ ಪೋರ್ಟಬಿಲಿಟಿ (ಎಂಎನ್‌ಪಿ) ಸೌಲಭ್ಯವನ್ನು ಬಳಸಿಕೊಳ್ಳಬಹುದು. ಜಿಯೋಗೆ ಎಂ‌ಎನ್‌ಪಿ ಪ್ರಕ್ರಿಯೆ ಪೂರ್ಣವಾದ ನಂತರ ಅಂತಹ ಗ್ರಾಹಕರು ಮಾನ್ಸೂನ್ ಹಂಗಾಮ ವಿನಿಮಯ ಕೊಡುಗೆಯ ಅನುಕೂಲ ಪಡೆದುಕೊಳ್ಳಬಹುದು.

    ವಿಶೇಷ ರೀಚಾರ್ಜ್ ಪ್ಲಾನ್

    1. ತನ್ನ ಗ್ರಾಹಕರಿಗೆ ಯಾವಾಗಲೂ ಹೆಚ್ಚು ಮೌಲ್ಯವನ್ನು ನೀಡುವ ವಾಗ್ದಾನಕ್ಕೆ ತನ್ನ ಬದ್ಧತೆಯನ್ನು ಮತ್ತೊಮ್ಮೆ ತೋರಿಸಲು, ಮಾನ್ಸೂನ್ ಹಂಗಾಮ ಕೊಡುಗೆಯ ಅಂಗವಾಗಿ ವಿಶೇಷ ರೀಚಾರ್ಜ್ ಪ್ಲಾನ್ ಒಂದನ್ನು ಜಿಯೋ ಪರಿಚಯಿಸುತ್ತಿದೆ.

    2. ಈ ಪ್ಲಾನ್ ಅನ್ವಯ ಆಕ್ಟೀವೇಶನ್ ಸಮಯದಲ್ಲಿ ರೂ. 594 ಪಾವತಿಸುವ ಮೂಲಕ ಗ್ರಾಹಕರು 6 ತಿಂಗಳ ಅವಧಿಗೆ ಅಪರಿಮಿತ ವಾಯ್ಸ್ ಹಾಗೂ ಡೇಟಾ ಸೌಲಭ್ಯ ಪಡೆಯಲಿದ್ದಾರೆ.

     ಮಾನ್ಸೂನ್ ಹಂಗಾಮ ಯೋಜನೆ

    ಮಾನ್ಸೂನ್ ಹಂಗಾಮ ಯೋಜನೆ

    3. ಮಾನ್ಸೂನ್ ಹಂಗಾಮ ವಿನಿಮಯ ಕೊಡುಗೆಯ ಗ್ರಾಹಕರಿಗೆ ಇದರೊಡನೆ ರೂ. 101 ಬೆಲೆಯ 6 ಜಿಬಿ ಡೇಟಾ ವೋಚರ್ ಕೂಡ ವಿಶೇಷ ವಿನಿಮಯ ಬೋನಸ್ ರೂಪದಲ್ಲಿ ದೊರಕಲಿದೆ.

    4. ಹೀಗೆ ಈ ಕೊಡುಗೆಯ ಮೂಲಕ 6 ತಿಂಗಳಿನಲ್ಲಿ ಒಟ್ಟು 90 ಜಿಬಿ ಡೇಟಾ ದೊರಕಿದಂತೆ ಆಗುತ್ತದೆ.

    5. ಮಾನ್ಸೂನ್ ಹಂಗಾಮ ಯೋಜನೆಯು, ರೂ. 501 ವಾಸ್ತವಿಕ ಬೆಲೆಯಲ್ಲಿ ಜಿಯೋಫೋನ್ ಜೊತೆಗೆ ರೂ. 594ಕ್ಕೆ 6 ತಿಂಗಳ ಅಪರಿಮಿತ ವಾಯ್ಸ್ ಹಾಗೂ ಡೇಟಾ ಸೇವೆ ಸೇರಿದ ಸಂಯೋಜಿತ ಕೊಡುಗೆಯಾಗಿದೆ.

    ಜಿಯೋಫೋನ್ ಗ್ರಾಹಕರಿಗೆ ಲಭ್ಯವಿರುವ ಯೋಜನೆ

    ಜಿಯೋಫೋನ್ ಗ್ರಾಹಕರಿಗೆ ಲಭ್ಯವಿರುವ ಯೋಜನೆ

    "ಜಿಯೋಫೋನ್ ಗ್ರಾಹಕರಿಗೆ ಸದ್ಯ ರೂ. 49 ಹಾಗೂ ರೂ. 153ರ ಎರಡು ಪ್ಲಾನುಗಳು ಲಭ್ಯವಿವೆ. ಈ ಪೈಕಿ ರೂ. 49ರ ಪ್ಲಾನ್ ಅನ್ನು ಮಾಸಿಕ 1 ಜಿಬಿ ಡೇಟಾ ಇರುವ ಪ್ರಾಯೋಗಿಕ ಪ್ಲಾನ್ ಎಂದು ಕರೆಯಬಹುದು. ಇದರ ಹೋಲಿಕೆಯಲ್ಲಿ ರೂ. 153ರ ನಮ್ಮ ಜನಪ್ರಿಯ ಪ್ಲಾನ್ ದಿನಕ್ಕೆ 1.5 ಜಿಬಿ ಡೇಟಾ ನೀಡುತ್ತದೆ. ಇದಕ್ಕಿಂತ ಕಡಿಮೆ ಡೇಟಾವನ್ನು ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಅಪೇಕ್ಷಿಸುವ ಅನೇಕ ಗ್ರಾಹಕರು ಇರಬಹುದೆಂದು ನಮಗೆ ತಿಳಿದಿದೆ. ಹೀಗಾಗಿಯೇ ನಾವು 28 ದಿನಗಳ ಅವಧಿಗೆ ಅಪರಿಮಿತ ಉಚಿತ ಕರೆಗಳು, ಪ್ರತಿನಿತ್ಯ 0.5 ಜಿಬಿ ಡೇಟಾ ಹಾಗೂ 300 ಎಸ್ಸೆಮ್ಮೆಸ್‌ಗಳನ್ನು ನೀಡುವ ರೂ. 99 ಬೆಲೆಯ ಹೊಸ ಪ್ಲಾನ್ ಅನ್ನು ಪರಿಚಯಿಸುತ್ತಿದ್ದೇವೆ. ಇದು ನಮ್ಮ ಗ್ರಾಹಕರ ಮಾಸಿಕ ವೆಚ್ಚವನ್ನು ನೇರವಾಗಿ ಬಹುತೇಕ ಅರ್ಧದಷ್ಟು ಕಡಿಮೆಮಾಡಲಿದೆ" ಎಂದು ಜಿಯೋ ಪ್ರತಿನಿಧಿ ತಿಳಿಸಿದ್ದಾರೆ.

    ನಿಮ್ಮ ಹಳೆಯ ಫೋನು ವಿನಿಮಯಕ್ಕೆ ಅರ್ಹವೇ?

    ನಿಮ್ಮ ಹಳೆಯ ಫೋನು ವಿನಿಮಯಕ್ಕೆ ಅರ್ಹವೇ?

    ವಿನಿಮಯ ಯೋಜನೆಗೆ ಅರ್ಹವಾಗಲು ನಿಮ್ಮ ಹಳೆಯ ಫೋನು ಈ ಕೆಳಕಂಡ ಷರತ್ತುಗಳನ್ನು ಪೂರೈಸಬೇಕು.

    1. ಮೊಬೈಲ್ ಫೋನ್ ಸದ್ಯ ಕೆಲಸಮಾಡುವ ಸ್ಥಿತಿಯಲ್ಲಿರಬೇಕು (ಹ್ಯಾಂಡ್‌ಸೆಟ್‌ನ ಭಾಗಗಳಿಗೆ ಹಾನಿಯಾಗಿರಬಾರದು, ಅಥವಾ ಅದರ ಭಾಗಗಳು ಕಳೆದಿರಬಾರದು; ಯಾವುದೇ ಭಾಗ ಮುರಿದಿರುವಂತಿಲ್ಲ ಅಥವಾ ಸುಟ್ಟುಹೋಗಿರುವಂತಿಲ್ಲ).

    2. ಕಳೆದ 3.5 ವರ್ಷಗಳಲ್ಲಿ ಮಾರಾಟವಾದ (ಜನವರಿ 1, 2015ರ ನಂತರ) ಮೊಬೈಲುಗಳು ಮಾತ್ರ ವಿನಿಮಯಕ್ಕೆ ಅರ್ಹವಾಗಿರುತ್ತವೆ.

    3. ಯಾವುದೇ ಹಳೆಯ 2ಜಿ/3ಜಿ/4ಜಿ (VOLTE ಅಲ್ಲದ) ಫೋನನ್ನು ವಿನಿಮಯಕ್ಕಾಗಿ ಸ್ವೀಕರಿಸಲಾಗುತ್ತದೆ.

    4. ಜಿಯೋಫೋನ್ ಆಗಲಿ ಯಾವುದೇ ಸಿಡಿಎಂಎ ಅಥವಾ ಆಪರೇಟರ್ ಲಾಕ್ಡ್ ಸಾಧನಗಳನ್ನಾಗಲಿ ವಿನಿಮಯಕ್ಕೆ ಸ್ವೀಕರಿಸಲಾಗುವುದಿಲ್ಲ.

    5. ಬ್ಯಾಟರಿ ಹಾಗೂ ಚಾರ್ಜರ್ ಎರಡನ್ನು ಹೊರತುಪಡಿಸಿ ವಿನಿಮಯಕ್ಕಾಗಿ ಬೇರೆ ಯಾವುದೇ ಪೂರಕ ಸಾಧನಗಳ (ಹೆಡ್‌ಫೋನ್ ಇತ್ಯಾದಿ) ಅಗತ್ಯವಿಲ್ಲ.

    ಹಳೆಯ ಫೀಚರ್ ಫೋನ್ ವಿನಿಮಯ

    ಹಳೆಯ ಫೀಚರ್ ಫೋನ್ ವಿನಿಮಯ

    ಹಳೆಯ ಫೀಚರ್ ಫೋನ್ ವಿನಿಮಯ ಮಾಡಲು ಹೋಗುವಾಗ ನೀವು ಏನೆಲ್ಲ ಕೊಂಡೊಯ್ಯಬೇಕು

    1. ಕೆಲಸಮಾಡುವ ಸ್ಥಿತಿಯಲ್ಲಿರುವ ಹಳೆಯ ಫೋನು

    2. ಹಳೆಯ ಫೋನಿನ ಬ್ಯಾಟರಿ ಹಾಗೂ ಚಾರ್ಜರ್

    3. ಆಧಾರ್ ಸಂಖ್ಯೆ

    4. ಎಂಎನ್‌ಪಿ ಸೌಲಭ್ಯ ಬಳಸುವುದಾದರೆ, ಹೊಸ ಎಂಎನ್‌ಪಿ ಜಿಯೋ ನಂಬರ್

    ಉತ್ತಮಪಡಿಸಲಾದ ಆಪ್ ಇಕೋಸಿಸ್ಟಮ್:

    1. ಆಗಸ್ಟ್ 15ರಿಂದ ಪ್ರಾರಂಭಿಸಿ, ಫೇಸ್‌ಬುಕ್, ವಾಟ್ಸ್‌ಆಪ್, ಯೂಟ್ಯೂಬ್‌ ಹಾಗೂ ಗೂಗಲ್ ಮ್ಯಾಪ್ಸ್‌ನಂತಹ ವಿಶ್ವವಿಖ್ಯಾತ ಆಪ್‌ಗಳು ಜಿಯೋಫೋನ್‌ನಲ್ಲಿ ದೊರಕಲಿವೆ. ಈ ಮೂಲಕ ಭಾರತೀಯರು ಶಿಕ್ಷಣ, ಮನರಂಜನೆ, ಜ್ಞಾನ ಮತ್ತಿತರ ಸೇವೆಗಳನ್ನು ಪಡೆದುಕೊಳ್ಳುವ ವಿಧಾನವನ್ನೇ ಬದಲಿಸಲು ಜಿಯೋಫೋನ್ ಸನ್ನದ್ಧವಾಗಿದೆ.

    ಉತ್ಕೃಷ್ಟ ಅಪ್ಲಿಕೇಶನ್‌ಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ

    ಉತ್ಕೃಷ್ಟ ಅಪ್ಲಿಕೇಶನ್‌ಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ

    2. ಜಿಯೋಫೋನ್ ಗ್ರಾಹಕರು ಈಗಾಗಲೇ ಉಚಿತ ವಾಯ್ಸ್ ಕರೆಗಳು ಹಾಗೂ ಜಿಯೋಟಿವಿ, ಜಿಯೋಸಿನಿಮಾ, ಜಿಯೋಮ್ಯೂಸಿಕ್ ಹಾಗೂ ಜಿಯೋಚಾಟ್‌ನಂತಹ ಉತ್ಕೃಷ್ಟ ಅಪ್ಲಿಕೇಶನ್‌ಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.

    3. ಕರೆ ಮಾಡಲು, ಸಂದೇಶ ಕಳುಹಿಸಲು, ಅಂತರಜಾಲದಲ್ಲಿ ಮಾಹಿತಿ ಹುಡುಕಲು, ಹಾಡು ಕೇಳಲು, ವೀಡಿಯೋಗಳನ್ನು ನೋಡಲು ಹಾಗೂ ಜಿಯೋಫೋನ್‌ನಲ್ಲಿರುವ ಬೇರೆಲ್ಲ ಆಪ್‌ಗಳನ್ನು ಬಳಸಲು ಧ್ವನಿರೂಪದ ಆದೇಶ (ವಾಯ್ಸ್ ಕಮ್ಯಾಂಡ್) ನೀಡಬಹುದಾದ ವಿಶಿಷ್ಟ ವ್ಯವಸ್ಥೆಯನ್ನೂ ಜಿಯೋಫೋನ್‌ ಗ್ರಾಹಕರು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    'Monsoon Hungama' exchange offer, Reliance Jio is offering JioPhone for Rs. 501. Customers can exchange any old feature phone (of any brand) for a brand new JioPhone (existing model) at an effective entry cost of Rs. 501, said the Mukesh Ambani-owned telecom operator

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more