ನಿಶ್ಚಿತ ಠೇವಣಿ ಬಡ್ಡಿದರ ಏರಿಕೆ ಮಾಡಿದ ಎಚ್ಡಿಎಫ್ ಸಿ
ಬೆಂಗಳೂರು, ನವೆಂಬರ್ 07: ಖಾಸಗಿ ವಲಯದ ಬ್ಯಾಂಕಿಂಗ್ ದೈತ್ಯ ಎಚ್ಡಿಎಫ್ಸಿ ದೀಪಾವಳಿ ಸಮಯದಲ್ಲಿ ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿಯ ದರವನ್ನು ಹೆಚ್ಚಿಸಿರುವುದಾಗಿ ಮಂಗಳವಾರದಂದು ಪ್ರಕಟಿಸಿದೆ.
ನಿಗದಿತ ಠೇವಣಿಗಳ ಮೇಲಿನ ಬಡ್ಡಿ ದರವು 50 ಬೇಸಿಸ್ ಪಾಯಿಂಟ್ ಗಳಾಗಿರುತ್ತದೆ.

* 2 ವರ್ಷ 1 ದಿನ- 2ವರ್ಷ 15 ದಿನ ಅವಧಿ : 7.40% ಹಾಗೂ 7.90%
* 3 ವರ್ಷ 1 ದಿನ-5 ವರ್ಷ : 7.25 % ಹಾಗೂ 7.75 %
* 5 ವರ್ಷ 1 ದಿನದಿಂದ 8 ವರ್ಷ : 6.50% ಹಾಗೂ 7%
ಎಂಟು ರಿಂದ ಹತ್ತು ವರ್ಷ ದೀರ್ಘಾವಧಿ ಮೇಲಿನ ಬಡ್ಡಿ ದರವು 6.5 ಶೇಕಡಾಕ್ಕೆ ಏರಿದೆ. 3-5 ವರ್ಷಗಳವರೆಗೆ ಠೇವಣಿಗಳ ಮೇಲಿನ ಬಡ್ಡಿದರಗಳು ವಾರ್ಷಿಕ ಠೇವಣಿಗಳ ಮೇಲೆ 7.25 ಶೇ ಮತ್ತು 7.3 ಶೇ. ಈ ಪರಿಷ್ಕೃತ ದರಗಳು ನಿನ್ನೆಯಿಂದ ಜಾರಿಗೆ ಬಂದಿವೆ.












Click it and Unblock the Notifications