ಆನ್ ಲೈನ್ ಮಾರಾಟಗಾರರಿಗೆ ಟಿಡಿಎಸ್ : ನಿರ್ಧಾರ ಮುಂದೂಡಿಕೆ
ಬೆಂಗಳೂರು, ಜೂನ್ 27 : ಗೂಡ್ಸ್ ಮತ್ತು ಸರ್ವೀಸ್ ಟ್ಯಾಕ್ಸ್ (ಜಿಎಸ್‌ಟಿ) ಜಾರಿಗೆ ಬಂದು ಆನ್ ಮೂಲಕ ವಸ್ತುಗಳನ್ನು ಕೊಳ್ಳುವುದು ಇನ್ನೇನು ತುಟ್ಟಿಯಾಗಲಿದೆ ಎನ್ನುವ ಹಂತದಲ್ಲಿ ಮೂಲದಲ್ಲಿಯೇ ತೆರಿಗೆ ಸಂಗ್ರಹಿಸುವ ಯೋಜನೆಯನ್ನು ಅಲ್ಪಕಾಲಕ್ಕೆ ಮುಂದೂಡಲಾಗಿದ್ದು, ಮಾರಾಟಗಾರರು ಮತ್ತು ಕೊಳ್ಳುವವರು ನಿರಾಳರಾಗಿದ್ದಾರೆ.
ಜಿಎಸ್‌ಟಿ ಇದೇ ಶನಿವಾರ, ಜೂನ್ 30ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದ್ದು, ಈ ಕಾಮರ್ಸ್ ಕಂಪನಿಗಳಿಂದ ಆನ್ ಲೈನ್ ಮೂಲಕ ವಸ್ತುಗಳನ್ನು ಕೊಳ್ಳುವವರು ಶೇ.1ರಷ್ಟು ತೆರಿಗೆ ಕಟ್ಟಬೇಕಾಗಿತ್ತು ಮತ್ತು ರಾಜ್ಯ ಹಾಗು ಕೇಂದ್ರ ಸರಕಾರಿ ಏಜೆನ್ಸಿಗಳಿಗೆ ಶೇ.1ರಷ್ಟು ತೆರಿಗೆ ವಿನಾಯಿತಿ ನೀಡಬೇಕಾಗಿತ್ತು.

ಆದರೆ, ತೆರಿಗೆಯನ್ನು ಮೂಲದಲ್ಲಿಯೇ ಕಡಿತಗೊಳಿಸುವ ವ್ಯವಸ್ಥೆಯ ಕುರಿತು ತೆರಿಗೆಯ ಸ್ವರೂಪದಲ್ಲಿ ಬದಲಾವಣೆ ಆಗಬೇಕಿದೆ. ವ್ಯಾಪಾರಿಗಳು ಜಿಎಸ್ ಟಿ ನೋಂದಾವಣಿ ಮಾಡಿಕೊಳ್ಳುವುದಕ್ಕೂ ಸಾಕಷ್ಟು ಸಮಯ ಸಿಕ್ಕಂತಾಗಿದೆ. ಮೂಲದಲ್ಲಿ ತೆರಿಗೆ ಸಂಗ್ರಹ ಜಾರಿಗೆ ಬರುವವರೆಗೆ ಕಂಪನಿಗಳು ನೋಂದಾವಣಿ ಮಾಡಿಕೊಳ್ಳಬೇಕಿಲ್ಲ.
ಕೇಂದ್ರ ಮತ್ತು ರಾಜ್ಯ ಜಿಎಸ್ ಟಿ ಕಾಯ್ದೆಯ 52ನೇ ನಿಯಮ ಏನು ಹೇಳುತ್ತದೆಂದರೆ, ಆನ್ ಲೈನ್ ಮೂಲಕ ಮಾರಾಟ ಮಾಡಲಾದ ವಸ್ತುವಿನ ಮೇಲೆ ಶೇ.1ರಷ್ಟು ತೆರಿಗೆ ಸಂಗ್ರಹಿಸಿ ಅದನ್ನು ಸರಕಾರಕ್ಕೆ ಸಂದಾಯ ಮಾಡಬೇಕು. ಆನ್ ಲೈನ್ ಮೂಲಕ ಎಷ್ಟು ಮಾರಾಟವಾಗುತ್ತದೆ ಎಂಬುದನ್ನು ಅಳೆಯಲು ಇದನ್ನು ಜಾರಿ ಮಾಡಲಾಗುತ್ತಿದೆ.












Click it and Unblock the Notifications