ಜೂನ್ ತಿಂಗಳಿನಲ್ಲಿ 90,917 ಕೋಟಿ ರುಪಾಯಿ ಜಿಎಸ್‌ಟಿ ಸಂಗ್ರಹ
ನವದೆಹಲಿ, ಜುಲೈ 1: ಕೊರೊನಾವೈರಸ್ ಲಾಕ್‌ಡೌನ್ ಸಡಿಲಿಕೆ ಬಳಿಕ ಜೂನ್ 2020ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 90,917 ಕೋಟಿ ರುಪಾಯಿ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
ಜೂನ್ 2020 ರಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 90,917 ಕೋಟಿ, ಅದರಲ್ಲಿ ಸಿಜಿಎಸ್‌ಟಿ 18,980 ಕೋಟಿ, ಎಸ್‌ಜಿಎಸ್‌ಟಿ 23,970 ಕೋಟಿ, ಐಜಿಎಸ್‌ಟಿ 40,302 ಕೋಟಿ (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 15,709 ಕೋಟಿ ಸೇರಿದಂತೆ) ಮತ್ತು ಸೆಸ್ 7,665 ಕೋಟಿ ( ಸರಕುಗಳ ಆಮದಿನ ಮೇಲೆ 607 ಕೋಟಿ ರುಪಾಯಿ ಸೇರಿದಂತೆ) ರುಪಾಯಿಗಳಷ್ಟಿದೆ.

ಕೊರೊನಾವೈರಸ್ ಲಾಕ್‌ಡೌನ್‌ದಿಂದಾಗಿ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿತ್ತು. ಜಿಎಸ್‌ಟಿ ಕೂಡ ದಾಖಲೆಯ ಕುಸಿತವನ್ನು ಕಂಡಿತ್ತು. ಆದರೆ ಲಾಕ್‌ಡೌನ್ ಸಡಿಲಿಕೆ ಬಳಿಕ ಆರ್ಥಿಕತೆಯು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಜಿಎಸ್‌ಟಿ ಸಂಗ್ರಹವು ಏರಿಕೆಯಾಗತೊಡಗಿದೆ.












Click it and Unblock the Notifications