GST Counsil: ಕಡಿಮೆಯಾಗಲಿದೆ ಕ್ಯಾನ್ಸರ್ ಔಷಧಿಗಳ ಬೆಲೆ; ಈ ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ಇಳಿಕೆ

ಸೋಮವಾರ 54 ನೇ ಜಿಎಸ್ಟಿ ಕೌನ್ಸಿಲ್ ಸಭೆಯ ಮುಕ್ತಾಯವಾಗಿದೆ. ಸಭೆ ಬಳಿಕ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕ್ಯಾನ್ಸರ್ ಔಷಧಿಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ದರಗಳನ್ನು 12% ರಿಂದ 5% ಕ್ಕೆ ಕಡಿಮೆ ಮಾಡುವ ಮಹತ್ವದ ನಿರ್ಧಾರವನ್ನು ಸಭೆಯಲ್ಲಿ ಮಾಡಲಾಗಿದೆ. ಇದರಿಂದ ಕ್ಯಾನ್ಸರ್ ಔಷಧಗಳ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

ಕುರುಕಲು ತಿಂಡಿಗಳು ಮತ್ತು ಖಾರದ ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ದರಗಳನ್ನು 18% ರಿಂದ 12% ಕ್ಕೆ ಇಳಿಸಲಾಗಿದೆ. ವೈದ್ಯಕೀಯ ಆರೋಗ್ಯ ವಿಮೆಯ ಮೇಲಿನ ದರ ಕಡಿತದ ಬಗ್ಗೆ ಕೂಡ ಚರ್ಚೆಯಾಗಿದ್ದು ಈ ಬಗ್ಗೆ ಶಿಫಾರಸು ಮಾಡಲು ಮಂತ್ರಿಗಳ ಸಮಿತಿಯನ್ನು (GoM) ಸಹ ಸ್ಥಾಪಿಸಿದ್ದು,ಅಕ್ಟೋಬರ್ ಅಂತ್ಯದೊಳಗೆ ವರದಿ ಸಲ್ಲಿಸುವಂತೆ ಕೇಳಲಾಗಿದೆ.

GST Council Reduces Rates on Cancer Drugs and Namkeen Key Decisions

ಸಭೆಯ ಪ್ರಮುಖ ನಿರ್ಧಾರಗಳು

ಮಾರ್ಚ್ 2026 ರ ನಂತರ ಮುಕ್ತಾಯಗೊಳ್ಳಲಿರುವ ಪರಿಹಾರ ಸೆಸ್‌ನ ಭವಿಷ್ಯವನ್ನು ಪರಿಶೀಲಿಸಲು ಜಿಎಸ್‌ಟಿ ಕೌನ್ಸಿಲ್ ಒಂದು ಜಿಒಎಮ್‌ ಅನ್ನು ರಚಿಸಲು ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ಪರಿಹಾರ ಸೆಸ್ ಬಗ್ಗೆ ಚರ್ಚಿಸಿದ್ದೇವೆ, ಮಾರ್ಚ್ 2026 ರವರೆಗೆ ನಾವು ವಿಸ್ತೃತ ಪರಿಹಾರ ಸೆಸ್ ಆಗಿರುವ ಪರಿಹಾರ ಸೆಸ್ ಅನ್ನು ಯಾವಾಗ ಸಂಗ್ರಹಿಸಬಹುದು ಎನ್ನುವುದು ಸ್ಪಷ್ಟವಾಗಿದೆ. ಜನವರಿ 2026 ರೊಳಗೆ, ನಾವು ಬ್ಯಾಕ್-ಟು-ಬ್ಯಾಕ್ ಸಾಲ ಮತ್ತು ಬಡ್ಡಿಯನ್ನು ತೆರವುಗೊಳಿಸುತ್ತೇವೆ ಮತ್ತು ಆದ್ದರಿಂದ ಮಾರ್ಚ್ 2026 ವರೆಗೆ ಅಂದರೆ ಸುಮಾರು ಎರಡು ತಿಂಗಳ ಪರಿಹಾರ ಸೆಸ್ ಉಳಿದಿರುತ್ತದೆ ಎಂದು ಹೇಳಿದರು.

ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ವೈದ್ಯಕೀಯ ಮತ್ತು ಆರೋಗ್ಯ ವಿಮೆಯ ಮೇಲೆ ಹೊಸ ಮಂತ್ರಿಗಳ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ. ಆರೋಗ್ಯ ವಿಮೆ ಮೇಲಿನ ದರ ಕಡಿತದ ಕುರಿತು ನಿರ್ಧರಿಸಲು ಕೌನ್ಸಿಲ್ ನವೆಂಬರ್‌ನಲ್ಲಿ ಮತ್ತೊಮ್ಮೆ ಸಭೆ ಸೇರಲಿದ್ದು, ಅಲ್ಲಿ ನಿರ್ಧಾರ ಪ್ರಕಟಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+