ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕ ಇಳಿಕೆ
ಬೆಂಗಳೂರು, ಅ.18: ಚಿನ್ನ ಹಾಗೂ ಬೆಳ್ಳಿ ಮೇಲಿನ ಆಮದು ಸುಂಕವನ್ನು(ಮೂಲ ದರ) ಸರ್ಕಾರ ತಗ್ಗಿಸಿದೆ. ಚಿನ್ನ ಪ್ರತಿ 10 ಗ್ರಾಮ್ ಗೆ 418 ಡಾಲರ್ ಗಳಿಗೆ ತಗ್ಗಿಸಲಾಗಿದೆ. ಬೆಳ್ಳಿ ಆಮದು ಸುಂಕವನ್ನು ಪ್ರತಿ ಕೆ.ಜಿಗೆ 699 ಡಾಲರ್ ಗೆ ಇಳಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದರಗಳಿಗೆ ಅನುಸಾರ ದರವನ್ನು ತಗ್ಗಿಸಲಾಗಿದೆ.
ಕಳೆದ ಪಾಕ್ಷಿಕದಲ್ಲಿ ಬಂಗಾರದ ಆಮದು ದರ ಪ್ರತಿ ಗ್ರಾಂಗೆ 436 ಡಾಲರ್ ಮತ್ತು ಬೆಳ್ಳಿಯ ಆಮದು ದರ ಪ್ರತಿ ಕೆಜಿಗೆ 702 ಡಾಲರ್ ನಷ್ಟಿತ್ತು. ಪರಿಷ್ಕೃತ ದರದ ಬಗ್ಗೆ ಅಬಕಾರಿ ಮತ್ತು ಕಸ್ಟಮ್ಸ್ ನ ಕೇಂದ್ರೀಯ ಮಂಡಳಿ(ಸಿಬಿಇಸಿ) ಅಧಿಸೂಚನೆ ಹೊರಡಿಸಿದೆ.
ಭಾರತ 2012ರಲ್ಲಿ 860 ಟನ್ ಬಂಗಾರವನ್ನು ಆಮದು ಮಾಡಿಕೊಂಡಿತ್ತು.ಚಿನ್ನದ ಆಮದು ತಗ್ಗಿಸಲು ಸರ್ಕಾರ ಸುಂಕ ಏರಿಕೆ ಮುಂತಾದ ಕ್ರಮಗಳನ್ನು ತೆಗೆದುಕೊಂಡಿತ್ತು. ಹಿತ್ತಾಳೆ ತ್ಯಾಜ್ಯ(scrap) ಮೇಲಿನ ಆಮದು ಸುಂಕವನ್ನು ಪ್ರತಿ ಟನ್ನಿಗೆ 3,933 ಡಾಲರ್ ನಿಂದ 3,860 ಡಾಲರ್ ಗೆ ಇಳಿಸಿದೆ.
ಕಚ್ಚಾ ತಾಳೆ ಎಣ್ಣೆಯ ಆಮದು ದರವನ್ನು ಪ್ರತಿ ಟನ್ನಿಗೆ 809 ಡಾಲರ್ ನಿಂದ 811 ಡಾಲರ್ ಗೆ ಏರಿಸಲಾಗಿದೆ. ಸೋಯಾಬೀನ್ ನ ಆಮದು ದರವನ್ನು ಪ್ರತಿ ಟನ್ನಿಗೆ 966 ಡಾಲರ್ ಗಳಿಂದ 952 ಗಳಿಗೆ ತಗ್ಗಿಸಲಾಗಿದೆ.

ಚಿನ್ನದ ದರ ಹೆಚ್ಚಳ : ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಸತತ ಎರಡನೇ ದಿನವಾದ ಗುರುವಾರ ಏರಿಕೆ ಕಂಡು ಬಂದಿದೆ. ವೈವಾಹಿಕ ಋತುವಿನ ಆರಂಭ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಹೆಚ್ಚಳ ಇದಕ್ಕೆ ಕಾರಣವೆನ್ನಲಾಗಿದೆ.
ಬಂಗಾರದ ಪ್ರತಿ ಹತ್ತು ಗ್ರಾಮ್‌ಗೆ 420 ರೂ.(31,620 ರೂ.) ಮತ್ತು ಬೆಳ್ಳಿಯ ಪ್ರತಿ ಕೆ.ಜಿಗೆ 1,125 ರೂ.(48,425 ರೂ.) ಬೆಲೆ ಹೆಚ್ಚಳವಾಗಿದೆ.
ಲಂಡನ್‌ನಲ್ಲಿ ಪ್ರತಿ ಔನ್ಸ್ ಬಂಗಾರದ ದರದಲ್ಲಿ ಶೇ.0.8ರಷ್ಟು ಏರಿಕೆಯಾಗಿದ್ದು, 1,292.44 ಡಾಲರ್‌ಗೆ ಜಿಗಿದಿದೆ. ದೇಶೀಯ ಮಾರುಕಟ್ಟೆಯಲ್ಲಿ ಶೇ.99.9 ಮತ್ತು 99.5 ಪರಿಶುದ್ಧ ಚಿನ್ನದ ದರ 420 ರೂ. ಏರಿದ್ದು, ಹತ್ತು ಗ್ರಾಮ್‌ಗೆ ಅನುಕ್ರಮವಾಗಿ 31,620 ರೂ. ಮತ್ತು 31,420 ರೂ.ಗೆ ವೃದ್ಧಿಸಿದೆ.
ಬೆಳ್ಳಿಯ 100 ನಾಣ್ಯಗಳ ಖರೀದಿಗೆ 1,000 ರೂ. ವೃದ್ಧಿಸಿದ್ದು, 86,000 ರೂ. ಮತ್ತು ಮಾರಾಟಜಕ್ಕೆ 87,000 ರೂ.ಗಳಾಗಿವೆ.











Click it and Unblock the Notifications