ಫೆಬ್ರವರಿ 28ರಿಂದ ಪ್ರತಿ ಬ್ಯಾಂಕ್ ಖಾತೆಗೂ ಪ್ಯಾನ್ ಕಾರ್ಡ್ ಕಡ್ಡಾಯ

Posted By:
Subscribe to Oneindia Kannada

ನವದೆಹಲಿ, ಜನವರಿ 28 : ತೆರಿಗೆ ವಂಚಕರ ಮೇಲೆ ಹಿಡಿತ ಸಾಧಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಮತ್ತೊಂದು ನಡೆ ಇಟ್ಟಿದೆ. ಫೆಬ್ರವರಿ 28ರಿಂದ ಎಲ್ಲಾ ಬಗೆಯ ಬ್ಯಾಂಕ್ ಖಾತೆಗಳಿಗೆ ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ಕಡ್ಡಾಯಗೊಳಿಸಲಾಗಿದೆ. ಈ ಬಗ್ಗೆ ಕ್ರಮ ಜರುಗಿಸುವಂತೆ ಬ್ಯಾಂಕುಗಳಿಗೆ ಸರ್ಕಾರ ಸೂಚಿಸಿದೆ.

ಈ ನಿಯಮ ಎಲ್ಲಾ ಬ್ಯಾಂಕ್ ಖಾತೆ, ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆದಾರರಿ ಗೂ ಅನ್ವಯವಾಗಲಿದೆ. ಸದ್ಯ ಪ್ಯಾನ್ ಕಾರ್ಡ್ ಇಲ್ಲದ ಗ್ರಾಹಕರು ಫಾರ್ಮ್ 60 ಭರ್ತಿ ಮಾಡುವಂತೆ ಸೂಚಿಸಲಾಗಿದೆ. [ಬ್ಯಾಂಕ್ ವ್ಯವಹಾರಗಳ ಮೇಲೆ ತೆರಿಗೆ ಇಲಾಖೆ ಕಣ್ಣು]

Govt asks banks to obtain PAN from account holders

ಫೆಬ್ರವರಿ 28, 2017ರೊಳಗೆ ಎಲ್ಲಾ ಖಾತೆಗಳಿಗೂ ಪ್ಯಾನ್ ಕಡ್ಡಾಯವಾಗಲಿದೆ. ಹೊಸ ಖಾತೆ ತೆರೆಯುವ ಗ್ರಾಹಕರು ಪ್ಯಾನ್ ನಂಬರ್ ಅಥವಾ ಫಾರ್ಮ್ 60 ಸಲ್ಲಿಸುವಂತೆ ನೋಡಿಕೊಳ್ಳಿ ಎಂದು ನೇರ ತೆರಿಗೆಗಳ ಕೇಂದ್ರಿಯ ಮಂಡಳಿ ಸೂಚಿಸಿದೆ.

ನವೆಂಬರ್‌ 8 ರಿಂದ 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಲಾಯಿತು. ಇದಾದ ಬಳಿಕ ಭಾರಿ ಮೊತ್ತದ ಹಣವನ್ನು ಬ್ಯಾಂಕಿಗೆ ಜಮೆ ಮಾಡಿರುವವರ ಮೇಲೆ ಕೂಡಾ ನಿಗಾ ಇಡಲಾಗುತ್ತಿದೆ.

ಹೆಚ್ಚಿನ ಮೊತ್ತ ಜಮೆ ಮಾಡಿದವರ ವಿವರ ನೀಡುವಂತೆ ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಇದಕ್ಕೆ ಪೂರಕವಾಗಿ ಪ್ಯಾನ್ ಕಡ್ಡಾಯಗೊಳಿಸಲಾಗಿದೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tightening the noose around tax evaders, the government has asked banks to obtain permanent account number (PAN) or Form-60 if PAN is not available, from all bank account holders by February 28, 2017.
Please Wait while comments are loading...