ಭವಿಷ್ಯ ನಿಧಿ ಯೋಜನೆಗಳಲ್ಲಿ ಎಷ್ಟು ವಿಧಗಳಿವೆ? ವ್ಯತ್ಯಾಸವೇನು?
ಸರ್ಕಾರದ ಭವಿಷ್ಯ ನಿಧಿ ಯೋಜನೆಗಳು ಸಂಬಳ ಪಡೆಯುವ ಅನೇಕ ಉದ್ಯೋಗಿಗಳಿಗೆ ನಿಯಮಿತ ಹೂಡಿಕೆಯೊಂದಿಗೆ ನಿವೃತ್ತಿ ಕಾರ್ಪಸ್ ನಿರ್ಮಿಸಲು ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿವೆ. ಈ ಹೂಡಿಕೆಗಳಿಂದ ಉದ್ಯೋಗಿ ಹಾಗೂ ನೌಕರರು ನಿವೃತ್ತಿಯ ಸಮಯದಲ್ಲಿ ಒಂದು ದೊಡ್ಡ ಮೊತ್ತದ ಹಣ ನೌಕರರು ಪಡೆಯಬಹುದು.
ಭವಿಷ್ಯ ನಿಧಿ ಯೋಜನೆಗಳ ಹಿಂದಿನ ಮುಖ್ಯ ಉದ್ದೇಶವೆಂದರೆ ನೌಕರರು ಸೇವೆಯಿಂದ ನಿವೃತ್ತರಾದ ಬಳಿಕ ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು. ಪಿಎಫ್ ಯೋಜನೆಗಳ ಅಡಿಯಲ್ಲಿ ಉದ್ಯೋಗಿಗಳು ತಮ್ಮ ಆದಾಯದ ಒಂದು ಸಣ್ಣ ಮೊತ್ತವನ್ನು ಪ್ರತಿ ತಿಂಗಳು ಕೊಡುಗೆ ನೀಡುತ್ತಾರೆ ಮತ್ತು ಒಟ್ಟು ಮೊತ್ತವನ್ನು ನಿವೃತ್ತಿ ನಿಧಿಯಾಗಿ ಪರಿವರ್ತಿಸಲಾಗುತ್ತದೆ, ಆದರೆ ಒಟ್ಟು ಉಳಿತಾಯದ ಒಂದು ಭಾಗವನ್ನು ಪಿಂಚಣಿಯಾಗಿ ತೆಗೆದುಕೊಳ್ಳಬಹುದು.

ಉದ್ಯೋಗಿಗಳ ಭವಿಷ್ಯ ನಿಧಿ
ಇಪಿಎಫ್ ಎನ್ನುವುದು ಸರ್ಕಾರಿ ನೌಕರರನ್ನು ಹೊರತುಪಡಿಸಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಭವಿಷ್ಯ ನಿಧಿ ಯೋಜನೆಯಾಗಿದೆ. ಇದನ್ನು ಕೇಂದ್ರ ಸರ್ಕಾರದ ನಿವೃತ್ತಿ ನಿಧಿ ಸಂಸ್ಥೆಯಾದ ನೌಕರರ ಭವಿಷ್ಯ ಸಂಸ್ಥೆ (ಇಪಿಎಫ್) ನಿರ್ವಹಿಸುತ್ತದೆ. 20ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಪ್ರತಿಯೊಂದು ಸಂಸ್ಥೆ ಅಥವಾ ಕಾರ್ಪೊರೇಟ್ ಘಟಕವು ತನ್ನ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952ರ ಪ್ರಕಾರ ನಿವೃತ್ತಿ ಪ್ರಯೋಜನಗಳನ್ನು ಒದಗಿಸಬೇಕು. ಅಸ್ತಿತ್ವದಲ್ಲಿರುವ ಇಪಿಎಫ್‌ಒ ನಿಯಮಗಳ ಪ್ರಕಾರ, ಉದ್ಯೋಗಿಯು ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇಕಡಾ 12ರಷ್ಟು ಕೊಡುಗೆಯನ್ನು ನೀಡುತ್ತಾರೆ.

2022-23ರ ಇಪಿಎಫ್‌ನ ಬಡ್ಡಿ ದರ?
ನೌಕರರ ಗರಿಷ್ಠ 15,000 ರೂ.ಯನ್ನು ಉದ್ಯೋಗದಾತರ ಕೊಡುಗೆಯಲ್ಲಿ ಶೇ. 8.33ರಷ್ಟು ನೌಕರರ ಪಿಂಚಣಿ ಯೋಜನೆಗೆ (ಇಪಿಎಸ್) ಹೋಗುತ್ತದೆ. ಉಳಿದ 3.67% ರಷ್ಟು ಇಪಿಎಫ್‌ನಲ್ಲಿ ಹೂಡಿಕೆ ಮಾಡಲಾಗುತ್ತದೆ. 2022-23ರ ಇಪಿಎಫ್‌ನ ಬಡ್ಡಿ ದರವು 8.10% ಉದ್ಯೋಗಿಗಳು ನಿವೃತ್ತಿಯ ನಂತರ ತಮ್ಮ ಇಪಿಎಫ್ ಖಾತೆಯನ್ನು ಶಾಶ್ವತವಾಗಿ ಮುಚ್ಚಬಹುದು ಮತ್ತು ಉದ್ಯೋಗವನ್ನು ಬದಲಾಯಿಸುವಾಗ ಅದನ್ನು ವರ್ಗಾಯಿಸಬಹುದು. ಸಾಲ ಮರುಪಾವತಿ, ಖರೀದಿ ಅಥವಾ ಮನೆ ನಿರ್ಮಾಣ ಮತ್ತು ಕುಟುಂಬದ ಸದಸ್ಯರ ವೈದ್ಯಕೀಯ ಚಿಕಿತ್ಸೆಯಂತಹ ಇತರ ಕಾರಣಗಳಿಗಾಗಿ ಇಪಿಎಫ್ ಖಾತೆಯಿಂದ ಭಾಗಶಃ ಹಿಂಪಡೆಯುವಿಕೆಯನ್ನು ಅನುಮತಿಸಲಾಗಿದೆ.

ಸಾರ್ವಜನಿಕ ಭವಿಷ್ಯ ನಿಧಿ
ಪಿಪಿಎಫ್ ಕಡ್ಡಾಯ ಭವಿಷ್ಯ ನಿಧಿ ಯೋಜನೆ ಅಲ್ಲ ಮತ್ತು ಪಿಪಿಎಫ್ ಖಾತೆಯನ್ನು ಭಾರತೀಯ ನಿವಾಸಿಗಳು ವೇತನದಾರರು ಮತ್ತು ಸಂಬಳ ಪಡೆಯದವರು ತೆರೆಯಬಹುದು. ಒಬ್ಬ ವ್ಯಕ್ತಿಯು ತನ್ನ ಪಿಪಿಎಫ್ ಖಾತೆಯಲ್ಲಿ ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 500 ಮತ್ತು ಗರಿಷ್ಠ 1,50,000 ರೂ. ಇಪಿಎಫ್‌ಗಿಂತ ಭಿನ್ನವಾಗಿ ಪಿಪಿಎಫ್ ಖಾತೆಯು 15 ವರ್ಷಗಳ ನಂತರ ಪಕ್ವವಾಗುತ್ತದೆ. ಇದನ್ನು ಐದು ವರ್ಷಗಳ ಬ್ಲಾಕ್‌ಗಳಲ್ಲಿ ಮತ್ತಷ್ಟು ವಿಸ್ತರಿಸಬಹುದು. ಪಿಪಿಎಫ್ ಖಾತೆಯನ್ನು ತೆರೆಯುವ ಏಳನೇ ಹಣಕಾಸು ವರ್ಷದಿಂದ ಪ್ರತಿ ವರ್ಷ ಭಾಗಶಃ ಹಿಂಪಡೆಯುವಿಕೆಯನ್ನು ಮಾಡಬಹುದು. ಪಿಪಿಎಫ್‌ನ ಬಡ್ಡಿ ದರವನ್ನು ಕೇಂದ್ರ ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ನಿರ್ಧರಿಸುತ್ತದೆ. ಪಿಪಿಎಫ್‌ನ ಪ್ರಸ್ತುತ ಬಡ್ಡಿ ದರವು ಶೇ.7.1 ರಷ್ಟು ಇದೆ.

ಸಾಮಾನ್ಯ ಭವಿಷ್ಯ ನಿಧಿ
ಸಾಮಾನ್ಯ ಭವಿಷ್ಯ ನಿಧಿ (GPF) ಯೋಜನೆಯು ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿದೆ. ಒಂದು ವರ್ಷದವರೆಗೆ ನಿರಂತರ ಸೇವೆ ಸಲ್ಲಿಸಿದ ಎಲ್ಲಾ ತಾತ್ಕಾಲಿಕ ಸರ್ಕಾರಿ ನೌಕರರು ಎಲ್ಲಾ ಖಾಯಂ ನೌಕರರು ಮತ್ತು ಎಲ್ಲಾ ಮರು ಉದ್ಯೋಗಿ ಪಿಂಚಣಿದಾರರು (ಕಾಂಟ್ರಿಬ್ಯೂಟರಿ ಪ್ರಾವಿಡೆಂಟ್ ಫಂಡ್‌ಗೆ ಪ್ರವೇಶಿಸಲು ಅರ್ಹರನ್ನು ಹೊರತುಪಡಿಸಿ) ಜಿಪಿಎಫ್ ಖಾತೆಯನ್ನು ತೆರೆಯಬಹುದು. ಮಾಸಿಕ ವೇತನದ ಕನಿಷ್ಠ 6%ರಷ್ಟು ಜಿಪಿಎಫ್ ಖಾತೆಗೆ ನೀಡಬೇಕು. 2022ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕಕ್ಕೆ GPF ಬಡ್ಡಿ ದರವು 7.1% ರಷ್ಟು ಇದೆ. ಜಿಪಿಎಫ್ ಯೋಜನೆಯನ್ನು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ಅಡಿಯಲ್ಲಿ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ನಿರ್ವಹಿಸುತ್ತದೆ.












Click it and Unblock the Notifications