ಪಿಪಿಎಫ್ ಅವಧಿ 2 ವರ್ಷ ಹೆಚ್ಚಳಕ್ಕೆ ಮುಂದಾದ ಕೇಂದ್ರ

ನವದೆಹಲಿ, ಫೆ. 5: ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)ನ ಲಾಕ್ ಇನ್ ಅವಧಿ(ವಾಪಸಾತಿ ನಿರ್ಬಂಧ ಅವಧಿ)ಯನ್ನು ಕನಿಷ್ಠ 2 ವರ್ಷ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಈವರೆಗೆ ಪಿಪಿಎಫ್ ನಲ್ಲಿ ಹೂಡಿಕೆ ಮಾಡುವವರಿಗೆ 6 ವರ್ಷಗಳ ಲಾಕ್ ಇನ್ ಅವಧಿಯಿತ್ತು. ಹಾಗಾಗಿ ಹೂಡಿಕೆ ಮಾಡಿದ್ದ ಹಣವನ್ನು ಆರು ವರ್ಷಗಳ ನಂತರ ಹಿಂದಕ್ಕೆ ಪಡೆಯಬಹುದಾಗಿತ್ತು. ಆದರೆ ಇನ್ನು ಮುಂದೆ ಇದನ್ನು 8 ವರ್ಷಕ್ಕೆ ಏರಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. [ಸ್ಯಾಮ್ ಸಂಗ್ ದಬ್ಬಿ ಅಗ್ರಪಟ್ಟಕ್ಕೇರಿದ ಮೈಕ್ರೋಮ್ಯಾಕ್ಸ್]

money

ಠೇವಣಿ ಹಣ ವಾಪಸಾತಿ ಅವಧಿಯನ್ನು 15 ರಿಂದ 20 ವರ್ಷಕ್ಕೆ ಏರಿಸುವ ಪ್ರಸ್ತಾಪವೂ ಸರ್ಕಾರದ ಬಳಿಯಿದೆ. ಠೇವಣಿ ಇಡುವವರಿಗೆ ಆಯ್ಕೆ ಬಿಟ್ಟುಕೊಡಲಾಗುವುದು. ದೀರ್ಘಾವಧಿ ಅಂದರೆ 20 ವರ್ಷಕ್ಕೆ ಹಣ ಇಡುವವರಿಗೆ ಹೆಚ್ಚಿನ ಬಡ್ಡಿ ದರ ನೀಡಲಾಗುವುದು ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.[ರೆಪೋ ದರ ಇಳಿಕೆ: ಸಾಲ ಮಾಡಿ ತುಪ್ಪ ತಿನ್ನಲಡ್ಡಿಯಿಲ್ಲ!]

ಮೂಲ ಸೌಕರ್ಯ ನಿಧಿಗೆ ಅಗತ್ಯ ಬಂಡವಾಳ ಸಂಗ್ರಹಣೆಗೆ ಇಂಥ ಕ್ರಮ ಅನುಸರಿಸಲಾಗುತ್ತಿದೆ. ನಿಶ್ಚಿತ ಠೇವಣಿ ಬಡ್ಡಿ ದರಕ್ಕೆ ಸಂಬಂಧಿಸಿ ಪ್ರಮುಖ ಹೆಜ್ಜೆಯಿಡಲು ರಿಸರ್ವ್ ಬ್ಯಾಂಕ್ ನೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದೆ. ಮುಂಬರುವ ಬಜೆಟ್ ಗೂ ಮುನ್ನವೇ ಸ್ಪಷ್ಟ ನಿರ್ದೇಶನ ಹೊರಬಿಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+