ಪಿಎಫ್ ವಿಷಯದಲ್ಲಿ ಮಾತು ಬದಲಿಸಿದ ಕೇಂದ್ರ ಸರ್ಕಾರ

Subscribe to Oneindia Kannada

ನವದೆಹಲಿ, ಏಪ್ರಿಲ್, 30: ಎಂಪ್ಲಾಯಿ ಪ್ರಾವಿಡೆಂಟ್ ಪಂಢ್ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತೆ ಮಾತು ಬದಲಿಸಿದೆ. ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್) ಬಡ್ಡಿ ದರವನ್ನು ಶೇ.8.7ಕ್ಕೆ ಇಳಿಸಿದ್ದ ಕೇಂದ್ರ ಸರ್ಕಾರ ಅದನ್ನು ಶೇ. 8.8ಕ್ಕೆ ಏರಿಕೆ ಮಾಡಿದೆ.

ಮೇಲ್ನೋಟಕ್ಕೆ ಇದು ಕಾರ್ಮಿಕರ ಪರವಾದ ನಿರ್ಧಾರದಂತೆ ಕಂಡು ಬಂದರೂ ಸಹ ನಿರ್ಧಾರದ ಹಿಂದಿನ ತಂತ್ರಗಳು ಮುಂದಕ್ಕೆ ಗೊತ್ತಾಗಲಿದೆ. ಇಪಿಎಫ್ ವಿತ್ ಡ್ರಾ ಗೆ ಸಂಬಂಧಿಸಿದ ನೀತಿಯನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಉಗ್ರ ಪ್ರತಿಭಟನೆಯನ್ನು ನಡೆಸಿದ್ದವು. ಪರಿಣಾಮ ಕೇಂದ್ರ ಸರ್ಕಾರ ನೀತಿಯನ್ನು ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿತ್ತು

money

2 ತಿಂಗಳ ಅವಧಿಯಲ್ಲಿ ಇಪಿಎಫ್ ಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮೂರು ಸಾರಿ ನೀತಿಯಲ್ಲಿ ಬದಲಾವಣೆ ಮಾಡಿದಂತೆ ಆಗಿದೆ. ಸುದ್ದಿಗಾರೊಂದಿಗೆ ಮಾತನಾಡಿದ ಕೇಂದ್ರ ಕಾರ್ಮಿಕ ಸಚಿವ ದತ್ತಾತ್ರೇಯ ಮೇಲಿನ ಮಾಹಿತಿ ನೀಡಿದ್ದಾರೆ.

ಈ ವಿಷಯ ತಿಳಿಸಲು ಸಂತಸವಾಗುತ್ತಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಡ್ಡಿ ದರ ಏರಿಕೆಗೆ ಸಮ್ಮತಿ ನೀಡಿದ್ದಾರೆ ಎಂದು ದತ್ತಾತ್ರೇಯ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a major climbdown after persistent pressure from the trade unions and political parties, the government on Friday increased interest rate on employees provident fund (EPF) deposits to 8.8 percent for 2015-16 from 8.70 percent as it had announced earlier. "I am happy to tell you that the EPF rate has been increased to 8.8 percent," Labour Minister Bandaru Dattatreya told reporters here.
Please Wait while comments are loading...