'ಗೂಗಲ್ ಟ್ರಿಪ್ಸ್'ನಿಂದ ಬಸ್, ರೈಲ್ವೇ ಟಿಕೆಟ್ ಬುಕ್ಕಿಂಗ್ ಸೇವೆ
ಈ ಹಿಂದೆ ಗೂಗಲ್ ಟ್ರಿಪ್ಸ್ ಆ್ಯಪ್ ನಲ್ಲಿ ವಿಮಾನ ಟಿಕೆಟ್ ಬುಕ್ ಮಾಡಬಹುದಾಗಿತ್ತು. ಜತೆಗೆ ಕಾರ್, ರೆಸ್ಟೋರೆಟ್ ಗಳನ್ನು ಬುಕ್ ಮಾಡಲು ಅವಕಾಶಗಳಿತ್ತು. ಇದೀಗ ಇದೇ ಸಾಲಿಗೆ ರೈಲು, ವಿಮಾನ ಟಿಕೆಟ್ ಗಳೂ ಸೇರ್ಪಡೆಯಾಗಿವೆ.
ಬೆಂಗಳೂರು, ಏಪ್ರಿಲ್ 27: ಗೂಗಲ್ ಟ್ರಿಪ್ಸ್ ಆ್ಯಪ್ ನಲ್ಲಿ ಹೊಸ ಆಯ್ಕೆ ಬಿಡುಗಡೆ ಮಾಡಲಾಗಿದೆ. ಇದರಲ್ಲೀಗ ಬಸ್ ಮತ್ತು ರೈಲ್ವೇ ಟಿಕೆಟ್ ಗಳನ್ನೂ ಬುಕ್ ಮಾಡಬಹುದು.
ಈ ಹಿಂದೆ ಗೂಗಲ್ ಟ್ರಿಪ್ಸ್ ಆ್ಯಪ್ ನಲ್ಲಿ ವಿಮಾನ ಟಿಕೆಟ್ ಬುಕ್ ಮಾಡಬಹುದಾಗಿತ್ತು. ಜತೆಗೆ ಕಾರ್, ರೆಸ್ಟೋರೆಟ್ ಗಳನ್ನು ಬುಕ್ ಮಾಡಲು ಅವಕಾಶಗಳಿತ್ತು. ಇದೀಗ ಇದೇ ಸಾಲಿಗೆ ರೈಲು, ವಿಮಾನ ಟಿಕೆಟ್ ಗಳೂ ಸೇರ್ಪಡೆಯಾಗಿವೆ.[ಕಾರು ನಿಲ್ಲಿಸಿದ ಜಾಗ ಮರೆಯುವವರಿಗಾಗಿ ಗೂಗಲ್ ನಿಂದ ಹೊಸ ಆಯ್ಕೆ]

ಗೂಗಲ್ ಟ್ರಿಪ್ಸ್ ಆ್ಯಪ್ ಐಒಎಸ್ ಮತ್ತು ಆಂಡ್ರಾಯ್ಡ್ ಪೋನ್ ಗಳಿಗೆ ಲಭ್ಯ ಇವೆ. ಟಿಕೆಟ್ ಬುಕ್ ಮಾಡಿದ ನಂತರ ಖಚಿತಪಡಿಸಲು ಈ ಮೇಲ್ ನಿಮ್ಮ ಮೇಲ್ ಐಡಿಗೆ ಬರುತ್ತದೆ. ಇನ್ನು ಆಫ್ ಲೈನ್ ಮೂಲಕವೂ ಇದನ್ನು ಸೇವ್ ಮಾಡಿಕೊಳ್ಳಬಹುದು.
ಇದರಿಂದ ಇಂಟರ್ ನೆಟ್ ಇಲ್ಲದಾಗಳೂ ಟ್ರಾವೆಲ್ ಡಿಟೇಲ್ಸ್ ಗಳನ್ನು ಪಡೆಯಬಹುದು. ಇದರ ಜತೆಗೆ ಗ್ರೂಪ್ ಪ್ಲಾನಿಂಗ್ ಆಯ್ಕೆಯೂ ಇದೆ. ಇದರ ಮೂಲಕ ನಿಮ್ಮ ಟ್ರಿಪ್ ಪ್ಲಾನ್ ಗಳನ್ನು ಗೆಳೆಯರ ಜತೆ ಹಂಚಿಕೊಳ್ಳಬಹುದು.
ಕೆಲವು ವಾರಗಳ ಹಿಂದಷ್ಟೆ ಗೂಗಲ್ ಎಲ್ಲಿ ನಿಮ್ಮ ಕಾರ್ ಪಾರ್ಕ್ ಮಾಡಿದ್ದೀರಿ ಎಂಬುದನ್ನು ಪತ್ತೆ ಹಚ್ಚಲು ಗೂಗಲ್ ಮ್ಯಾಪ್ ನಲ್ಲಿ ಹೊಸ ಆಯ್ಕೆ ಬಿಡುಗಡೆ ಮಾಡಲಾಗಿತ್ತು. ಇದೀಗ ಟ್ರಿಪ್ಸ್ ಹೊಸ ಆಯ್ಕೆ ಬಿಡುಗಡೆ ಮಾಡಿದೆ.












Click it and Unblock the Notifications