ಫೆಬ್ರವರಿ 16 ರಿಂದ ಗೂಗಲ್ ಟಾಕ್ ಬಾಗಿಲು ಬಂದ್
ನವದೆಹಲಿ, ಫೆ. 9 : ವಾಟ್ಸಪ್ ವೆಬ್ ಅಪ್ಲಿಕೇಷನ್ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ ಗೂಗಲ್ ಸಹ ಹೊಸ ಹ್ಯಾಂಗೌಟ್ ಅಪ್ಲಿಕೇಷನ್ ಬಿಡುಗಡೆ ಮುಂದಾಗಿದೆ. ಜತೆಗೆ ಜನಪ್ರಿಯ ಗೂಗಲ್ ಟಾಕ್ ಅಪ್ಲಿಕೇಷನ್ ಗೆ ಗುಡ್ ಬೈ ಹೇಳಲಿದ್ದು ಅದರ ಜಾಗದಲ್ಲಿ ಹ್ಯಾಂಗೌಟ್ ಬರಲಿದೆ.
ಗೂಗಲ್ ಟಾಕ್ ಫೆಬ್ರವರಿ 16 ರಿಂದ ಅಧಿಕೃತವಾಗಿ ಬಂದ್ ಆಗಲಿದೆ. ಕ್ಷಿಪ್ರ ಸಂದೇಶವಾಹಕ ಗೂಗಲ್ ಟಾಕ್ ಜಾಗದಲ್ಲಿ ಹ್ಯಾಂಗೌಟ್ ಎಂಬ ಹೊಸ ಅಪ್ಲಿಕೇಷನ್ ಪರಿಚಯ ಮಾಡಲಾಗುತ್ತಿದೆ.[ವೆಬ್ ಸೈಟ್ ನಿಂದ ವಾಟ್ಸಪ್ ಬಳಸುವುದು ಹೇಗೆ?]

ಬಳಕೆದಾರರಿಗೆ ಹೊಸ ಆಪ್ ಇನ್ ಸ್ಟಾಲ್ ಮಾಡಿಕೊಳ್ಳುವಂತೆ ಈಗಾಗಲೇ ಗೂಗಲ್ ಸಂದೇಶ ಕಳಿಸಿದೆ. ಓರ್ಕುಟ್ ನಂಥೆ ಈಗ ಗೂಗಲ್ ಟಾಕ್ ಸಹ ನೇಪಥ್ಯಕ್ಕೆ ಸರಿಯಲಿದೆ.
ಭಾರತದ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿರುವ ಫೇಸ್ ಬುಕ್ ಮತ್ತು ಗೂಗಲ್ ನಡುವಿನ ಗುದ್ದಾಟದಲ್ಲಿ ಜನರು ಒಂದು ಅಪ್ಲಿಕೇಷನ್ ಕಳೆದುಕೊಳ್ಳಬೇಕಾಗಿದೆ.[ನೇತಾಜಿ ಜನ್ಮದಿನಕ್ಕೆ ತಲೆಬಾಗಿದ ಸಾಮಾಜಿಕ ಜಾಲತಾಣ]
ಈಗ ನೀವು ಗೂಗಲ್ ಟಾಕ್ ಮೂಲಕ ಸ್ನೇಹಿತರೊಂದಿಗೆ ಮಾತನಾಡಲು ಯತ್ನಿಸಿದರೆ, ಹ್ಯಾಂಗೌಟ್ ಡೌನ್ ಲೋಡ್ ಮಾಡಿಕೊಳ್ಳಿ ಎಂಬ ಸಂದೇಶ ನಿಮ್ಮ ಕಂಪ್ಯೂಟರ್ ಮೇಲೆ ಕಾಣಿಸುತ್ತದೆ. ಅಲ್ಲಿಂದ ನೀವು ಹೊಸ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಬಹುದು.












Click it and Unblock the Notifications