ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸರ್ಚ್ ಇಂಜಿನ್' ಗೂಗಲ್ ಮೇಲೆ ಸಿಬಿಐ ಸರ್ಚ್

By Mahesh
|
Google Oneindia Kannada News

ನವದೆಹಲಿ, ಜು. 28: ಇಂಟರ್ನೆಟ್ ಸರ್ಚ್ ಇಂಜಿನ್ ದಿಗ್ಗಜ ಕಂಪೆನಿ ಗೂಗ್‌ಲ್ ವಿರುದ್ಧ ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿದೆ. ಸೂಕ್ಷ್ಮ ಪ್ರದೇಶಗಳು ಹಾಗೂ ರಕ್ಷಣಾ ಕೇಂದ್ರಗಳ ನಕ್ಷೆ ರೂಪಿಸುವುದರ ಮೂಲಕ ಕಾನೂನನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಗೂಗಲ್ ಮೇಲಿದೆ. 'ಮ್ಯಾಪಥಾನ್ 2013 ಸ್ಪರ್ಧೆ' ಆಯೋಜನೆ ಮೂಲಕ ಗೂಗಲ್ ಕಾನೂನು ಉಲ್ಲಂಘಿಸಿದೆ ಎನ್ನಲಾಗಿದೆ.

ದೇಶದ ಭೂಪಟದಲ್ಲಿಲ್ಲದ ಹಲವು ಸೂಕ್ಷ್ಮ ಪ್ರದೇಶಗಳ ನಕ್ಷೆ ರೂಪಿಸಿರುವ ಕೃತ್ಯದಲ್ಲಿ ಗೂಗಲ್ ಶಾಮೀಲಾಗಿದೆ ಎಂದು ಆರೋಪಿಸಿದ್ದ ಭಾರತದ ಪ್ರಧಾನ ಸರ್ವೇಕ್ಷಣಾ ಅಧಿಕಾರಿ ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿದ್ದರು. ತಮ್ಮ ಸಮೀಪದ ಆಸ್ಪತ್ರೆಗಳು, ರೆಸ್ಟೋರೆಂಟ್‌ಗಳ ಕುರಿತ ಮಾಹಿತಿಯಿರುವ ನಕ್ಷೆ ಬಿಡಿಸುವ ಸ್ಪರ್ಧೆಯನ್ನು ಗೂಗಲ್ ಸಂಸ್ಥೆಯು 2013ರ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ನಾಗರಿಕರಿಗಾಗಿ ಏರ್ಪಡಿಸಿತ್ತು.

ಈ ಬಗ್ಗೆ ಗೂಗಲ್ ದೇಶದ ನಕ್ಷೆ ರೂಪಿಸುವ ಅಧಿಕೃತ ಏಜೆನ್ಸಿಯಾದ ಭಾರತೀಯ ಸರ್ವೇಕ್ಷಣಾ ಇಲಾಖೆಯಿಂದ ಪೂರ್ವಾನುಮತಿ ಪಡೆದುಕೊಂಡಿರಲಿಲ್ಲ ಎಂದು ಅವರು ಆರೋಪಿಸಲಾಗಿದೆ. [ಭಾರತ ಭೂಪಟ ಗೂಗಲ್ ಸರ್ಚ್ ಪ್ರಮಾದ]

Google Mapping Comes Under CBI Scrutiny

ಮ್ಯಾಪಥಾನ್ ಸ್ಪರ್ಧೆಯ ಬಳಿಕ ಎಚ್ಚೆತ್ತುಕೊಂಡ ಭಾರತದ ರಾಷ್ಟ್ರೀಯ ಸರ್ವೇಕ್ಷಣಾ ಇಲಾಖೆ, ಸಾರ್ವಜನಿಕವಾಗಿ ಬಹಿರಂಗಪಡಿಸಿಕೊಳ್ಳದಂಥ ಸೂಕ್ಷ್ಮವಾದ ರಕ್ಷಣಾ ಸಂಸ್ಥೆಗಳ ಕುರಿತು ನಕ್ಷೆ ರೂಪಿಸಿರುವುದನ್ನು ತನ್ನ ಜೊತೆ ಹಂಚಿಕೊಳ್ಳುವಂತೆ ಗೂಗಲ್ ಸಂಸ್ಥೆಗೆ ಸೂಚಿಸಿತ್ತು.

ಈ ಪ್ರಕರಣದ ಬಗ್ಗೆ ದೆಹಲಿ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದರು. ಇದರ ಬಳಿಕ ತನಿಖೆಯನ್ನು ಸಿಬಿಐ ವಶಕ್ಕೆ ಒಪ್ಪಿಸಲಾಗಿತ್ತು. ಅಗತ್ಯಬಿದ್ದರೆ ದೇಶದ ವಿವಿಧ ಸ್ಥಳಗಳ ಕುರಿತು ಅದು ಮಾಹಿತಿ ಸಂಗ್ರಹಿಸುವ ಸಾಧ್ಯತೆಯಿದ್ದು, ಗೂಗಲ್ ಕಂಪೆನಿಯ ಕೇಂದ್ರಸ್ಥಾನವಾದ ಅಮೆರಿಕದ ಕೆಲವು ವ್ಯಕ್ತಿಗಳನ್ನು ತನಿಖೆಗೊಳಪಡಿಸಲು ಅದು ಎಫ್‌ಬಿಐ ಸಹಕಾರವನ್ನು ಕೋರಲಿದೆ.[ಗೂಗಲ್ 'ಇಂಡಿಕ್' ನನ್ನ ನಿರೀಕ್ಷೆಗಳೇನು? : ಬಿ.ಜಿ ಮಹೇಶ್]

ರಾಷ್ಟ್ರೀಯ ನಕ್ಷೆ ನಿಯಮ 2005ರ ಪ್ರಕಾರ ಟೊಪೊಗ್ರಾಫಿಕ್ ಮ್ಯಾಪ್ ಡಾಟಾ ಬೇಸ್ ತಯಾರಿಸುವಾಗ ದೇಶದ ಹಿತದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳನ್ನು ಹೊರ ಹಾಕುವಂತಿಲ್ಲ. ಈ ರೀತಿ ಸಮೀಕ್ಷೆ, ಮ್ಯಾಪ್ ತಯಾರಿಕೆ, ಬಳಕೆಗೆ ಸರ್ವೆ ಆಫ್ ಇಂಡಿಯಾದ ಪೂರ್ವಾನುಮತಿಯ ಅಗತ್ಯವಿರುತ್ತದೆ. ಆದರೆ, ಗೂಗಲ್ ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗೂಗಲ್ ಇಂಡಿಯಾ, ನಾವು ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ. ರಾಷ್ಟ್ರೀಯ ಭದ್ರತೆ, ಪ್ರಾದೇಶಿಕ ಹಿತಾಸಕ್ತಿ ಬಗ್ಗೆ ನಮಗೂ ಕಾಳಜಿ ಇದೆ. ಆದರೆ, ಖಾಸಗಿ ಮತ್ತು ಗೌಪತ್ಯಾ ನಿಯಮಗಳ ಬಗ್ಗೆ ನಮಗೆ ಅರಿವಿರಲಿಲ್ಲ. ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.(ಪಿಟಿಐ)

English summary
CBI has registered a preliminary enquiry (PE) against Internet giant Google over 'Mapathon 2013', an event organised by the US company, for allegedly violating laws by mapping sensitive areas and defence installations, prohibited by law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X